ಕದನ ವಿರಾಮ ನಿಯಮಗಳ ಒಪ್ಪಂದ: ಭಾರತ-ಪಾಕ್ ನಿರ್ಧಾರ ಸ್ವಾಗತಿಸಿದ ವಿಶ್ವಸಂಸ್ಥೆ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿರುವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ((ಎಲ್ಒಸಿ) ಕದನ ವಿರಾಮ ನಿಯಮಗಳ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ಸೇನೆಗಳು ಮಾಡಿರುವ ಒಪ್ಪಂದವನ್ನ ವಿಶ್ವಸಂಸ್ಥೆ ಸ್ವಾಗತಿಸಿದೆ.