Times of Deenabandhu
  • Home
  • ಮುಖ್ಯಾಂಶಗಳು
  • ಕೃಷಿ ಸಚಿವರ ಸೇವೆಗೆ ಮೆಚ್ಚುಗೆ: ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ನಟ ದರ್ಶನ್
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಕೃಷಿ ಸಚಿವರ ಸೇವೆಗೆ ಮೆಚ್ಚುಗೆ: ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ನಟ ದರ್ಶನ್

ಬೆಂಗಳೂರು :ಕೃಷಿ ಸಚಿವರಾಗಿರುವ ಬಿ.ಸಿ.ಪಾಟೀಲ್ ಚಿತ್ರನಟ, ನಿರ್ದೇಶಕ, ನಿರ್ಮಾಪಕ ಕೂಡ ಹೌದು. ಹೀಗಾಗಿ ಬಿ.ಸಿ.ಪಾಟೀಲರೊಂದಿಗೆ ಚಿತ್ರರಂಗದ ನಂಟು ಸಹಜವೇ.ಇದೀಗ ಚಿತ್ರರಂಗವೇ ಕೃಷಿ ಸಚಿವರ ಸಾಧನೆಯನ್ನು ಮೆಚ್ಚಿ ಕೊಂಡಾಡುತ್ತಿದೆ.

ಅದೇ ರೀತಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೃಷಿಯಲ್ಲಿ ತರುತ್ತಿರುವ ನೂತನ ಬದಲಾವಣೆ ಹಾಗೂ ರೈತರ ಅಭಿವೃದ್ಧಿಗಿನ ಚಿಂತನೆಗಳನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಚ್ಚಿಕೊಂಡಿದ್ದಾರೆ. ಇದೀಗ ಬಿ.ಸಿ.ಪಾಟೀಲರ “ರೈತರೊಂದಿಗೊಂದು ದಿನ” ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಂದಾಗಿದ್ದಾರೆ.

ಕೃಷಿ ಪ್ರೇಮಿಯೂ ಆಗಿರುವ ನಟ ದರ್ಶನ್, ಬಿ.ಸಿ.ಪಾಟೀಲರ ಜೊತೆ ಈ ಕುರಿತು ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಸಚಿವರ ಜೊತೆ ಭಾಗಿಯಾಗಲಿದ್ದಾರೆ. ದರ್ಶನ್ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ಸದ್ಯದರಲ್ಲಿಯೇ ದಿನಾಂಕವೂ ಪ್ರಕಟಗೊಳ್ಳಲಿದೆ.

Related posts

ಫೈಜರ್ ಕೊರೋನಾ ಲಸಿಕೆ ತುರ್ತು ಬಳಕೆಗೆ ಅಮೇರಿಕಾ ಗ್ರೀನ್ ಸಿಗ್ನಲ್…

Times fo Deenabandhu

ಫೆ.21 ಮತ್ತು 22ರಂದು ಕಂದಾಯ ಅದಾಲತ್

Times fo Deenabandhu

ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆಗೆ ಖಂಡನೆ…

Times fo Deenabandhu