Times of Deenabandhu
  • Home
  • ರಾಜಕೀಯ
  • ರೈತರ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವನೀತಿ, ಡಬಲ್ ಗೇಮ್ – ಕೃಷಿ ಸಚಿವ ಬಿ.ಸಿ.ಪಾಟೀಲ್…
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ರೈತರ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವನೀತಿ, ಡಬಲ್ ಗೇಮ್ – ಕೃಷಿ ಸಚಿವ ಬಿ.ಸಿ.ಪಾಟೀಲ್…

ಬೆಂಗಳೂರು: ಕಾಂಗ್ರೆಸ್ ರೈತರ ವಿಚಾರದಲ್ಲಿ ದ್ವಂದ್ವನೀತಿ ಹೊಂದಿದ್ದು, ಡಬಲ್ ಗೇಮ್ ಆಡುತ್ತಿದೆ.ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಇದೀಗ ಊಸರವಳ್ಳಿ ನಾಟಕವಾಡುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಕೃಷಿ ಕಾಯಿದೆ ತಿದ್ದುಪಡಿಗಳು ರೈತರ ಬಲವರ್ಧನೆಗೆ ಅವರ ಆದಾಯ ಹೆಚ್ಚಿಸಲು ತರಲಾಗಿದೆ.ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಕಾಯಿದೆಗಳು ರೈತರ ಪರವಾಗಿದ್ದು, ಇದರಲ್ಲಿ ಯಾವುದೇ ಸಂಶಯಬೇಡ. ಈ ಬಗ್ಗೆ ಮನವರಿಕೆಯೂ ಮಾಡಿಕೊಡಲಾಗಿದೆ. ರೈತರು ಸರ್ಕಾರದ ಜೊತೆ ಸಹಕರಿಸಿ ಟ್ರ್ಯಾಕ್ಟರ್ ರಾಲಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.

2019 ರಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೇ ಎಪಿಎಂಸಿ ರದ್ದುಪಡಿಸಿ ಬೆಂಬಲ ಬೆಲೆ ರದ್ದುಪಡಿಸಲಾಗುವುದು ಎಂದೇ ಹೇಳಿತ್ತು.ಆದರೆ ನಾವು ಎಪಿಎಂಸಿ ರದ್ದುಮಾಡುತ್ತಿಲ್ಲ. ರೈತ ತನ್ನ ಬೆಳೆಯನ್ನು ಎಲ್ಲಿಬೇಕಾದರೂ ಮಾರಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಿದೆ. ಲಾಭನಷ್ಟಕ್ಕೆ ವ್ಯಾಪರಸ್ಥರು ಹೊಣೆಯಾಗುತ್ತಾರೆಯೇ ಹೊರತು ರೈತರಲ್ಲ. ರೈತ ತನ್ನ ಬೆಳೆಯನ್ನು ತನಗೆ ಇಚ್ಛಿಸಿದ ಬೆಲೆಯಲ್ಲಿ ಮುಕ್ತವಾಗಿ ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರವನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ.ಎಪಿಎಂಸಿಯಲ್ಲಿಯೂ ಸಹ ಮಾರಾಟ ಮಾಡಬಹುದಾಗಿದೆ ಎಂದು ಬಿ.ಸಿ.ಪಾಟೀಲ್ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ರೈತರು ಪ್ರತಿಭಟನೆಯನ್ನು ಕೈಇಡಬೇಕು. ರೈತರಿಗೆ ಅನುಕೂಲವಾಗಲಿದೆ. ಪೂರಕವಾಗಿಯೇ ಕಾಯಿದೆಗಳನ್ನು ತಿದ್ದುಪಡಿಮಾಡಲಾಗಿದೆ. ಪ್ರತಿಭಟನೆ ಕೈಬಿಟ್ಟು ಸರ್ಕಾರದ ಜೊತೆ ಸಹಕರಿಸುವಂತೆ ಮತ್ತೊಮ್ಮೆ ಮನವಿ ಮಾಡಿದರು.

Related posts

ಸ್ವಾಮಿ ವಿವೇಕಾನಂದರ ಪ್ರೇರಣೆ; 10 ದಶಲಕ್ಷ ಉದ್ಯೋಗ ಸೃಷ್ಟಿಗೆ ಸರ್ಕಾರ ಪಣ…..!

Times fo Deenabandhu

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ: ಫೆ.21 ರಂದು ಬೃಹತ್ ಸಮಾವೇಶ…

Times fo Deenabandhu

ಕಸಪ್ಪಯ್ಯ ನಾಯಕನ ಕಾಲದ ಐತಿಹಾಸಿಕ ಮಹತ್ವದ ಶಾಸನ ಪತ್ತೆ…

Times fo Deenabandhu