Times of Deenabandhu
ಮುಖ್ಯಾಂಶಗಳು ರಾಜ್ಯ ಸಿನಿಮಾ

ಜಾಮೀನು ಸಿಕ್ಕರೂ ನಟಿ ರಾಗಿಣಿಗೆ ಇನ್ನೆರೆಡು ದಿನ ಜೈಲೇ ಗತಿ…

 

ಬೆಂಗಳೂರು: ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಪ್ರಕರಣದಲ್ಲಿ ಬಂಧಿತರಾಗಿ ಜೈಲುವಾಸ ಅನುಭವಿಸುತ್ತಿರುವ ನಟಿ ರಾಗಿಣಿ ದ್ವೀವೇದಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಆದರೆ ಜಾಮೀನು ಸಿಕ್ಕರೂ ನಟಿ ರಾಗಿಣಿಗೆ ಬಿಡುಗಡೆ ಭಾಗ್ಯ ಇನ್ನು ಬಂದಿಲ್ಲ.
ಹೌದು, ಇಂದು ಶ್ಯೂರಿಟಿ ಷರತ್ತು ಪೂರೈಕೆಯಾಗದ ಹಿನ್ನೆಲೆ ನಟಿ ರಾಗಿಣಿ ಇನ್ನು ಎರಡು ದಿನಗಳ ಕಾಲ ಜೈಲು ವಾಸ ಅನುಭವಿಸಬೇಕಿದೆ. ಜಾಮೀನು ನೀಡಲು 3 ಲಕ್ಷ ಮೌಲ್ಯದ ಬಾಂಡ್ ಇಬ್ಬರು ಶ್ಯೂರಿಟಿ ನೀಡುವಂತೆ ಕೋರ್ಟ್ ಷರತ್ತು ವಿಧಿಸಿದೆ.
ಈ ಹಿನ್ನೆಲೆಯಲ್ಲಿ ಇಂದು ಶ್ಯೂರಿಟಿ ಷರತ್ತು ಪೂರೈಕೆಯಾಗದ ಹಿನ್ನೆಲೆ ನಟಿ ರಾಗಿಣಿ ಜನವರಿ 25ರವರೆಗೆ ಜೈಲಿನಲ್ಲೆ ಇರಬೇಕಾಗಿದೆ. ಇನ್ನು ಜನವರಿ 25ರಂದು ಶ್ಯೂರಿಟಿ ಷರತ್ತು ಪೂರೈಸಿದ ಬಳಿಕ ಎನ್ ಡಿಪಿಎಸ್ ವಿಶೇಷ ಕೋರ್ಟ್ ಬಿಡುಗಡೆಗೆ ಆದೇಶ ನೀಡಲಿದೆ.
ಕೊರೊನಾ ಹಿನ್ನೆಲೆಯಲ್ಲಿ ನೇರವಾಗಿ ನ್ಯಾಯಾಲಯಕ್ಕೆ ಜಾಮೀನುದಾರರು ಮತ್ತು ಶ್ಯೂರಿಟಿ ಹಣ ಕಟ್ಟಲು ಸಾಧ್ಯವಿಲ್ಲ. ಅಂತರ್ಜಾಲದ ಮೂಲಕವೇ ವಿಚಾರಣೆ ವೇಳೆ ಇದನ್ನು ತೋರಿಸಿ, ಅದು ಪರಿಶೀಲನೆಗೊಳಪಟ್ಟ ನಂತರ ನ್ಯಾಯಾಲಯ ಬಿಡುಗಡೆ ದಾಖಲೆಯನ್ನು ನೀಡಲಿದೆ. ಸೋಮವಾರವೂ ಇದು ಸಾಧ್ಯವಾಗದಿದ್ದರೆ ಜ.27ರಂದು ರಾಗಿಣಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

Related posts

ಸಿಎಂ ಬಿಎಸ್ ವೈ ಸಂಪುಟಕ್ಕೆ ‘ಸಪ್ತ ಸಚಿವರ’ ಬಲ: ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

Times fo Deenabandhu

ಮಕ್ಕಳ ಹಿತಾಸಕ್ತಿಗೆ ಕಾನೂನಿನಲ್ಲಿ ಪೊಕ್ಸೊ ಕಾಯಿದೆಯು ಸಹಕಾರಿಯಾಗಿದೆ.- ನ್ಯಾ.ಸರಸ್ವತಿ ಕೆ.ಎನ್.

Times fo Deenabandhu

ಕೋವಿಡ್ ಲಸಿಕೆ ವಿತರಣೆಗೆ ರಾಜ್ಯ ಸಿದ್ಧ……

Times fo Deenabandhu