Times of Deenabandhu
  • Home
  • ಮುಖ್ಯಾಂಶಗಳು
  • ತಪಾಸಣೆ ವೇಳೆ ಸಿಕ್ಕಿಬಿದ್ದ ಅಧಿಕಾರಿ : ಪೊಲೀಸರಿಂದ 74 ಲಕ್ಷ ರೂ ಜಪ್ತಿ…
ಕ್ರೈಮ್ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ತಪಾಸಣೆ ವೇಳೆ ಸಿಕ್ಕಿಬಿದ್ದ ಅಧಿಕಾರಿ : ಪೊಲೀಸರಿಂದ 74 ಲಕ್ಷ ರೂ ಜಪ್ತಿ…

ಬೆಂಗಳೂರು: ಬೆಂಗಳೂರಿನ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ ಎಫ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ 74 ಲಕ್ಷ ರೂಪಾಯಿ ಹಣವನ್ನ ಜಪ್ತಿ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಅಧಿಕಾರಿ ದಂಪತಿ ಬಳಿ ಹಣ ಪತ್ತೆಯಾಗಿದೆ. ಇರ್ಫಾನ್ ಆಹ್ಮದ್ ಮೊಹಮ್ಮದ್ ಎಂಬ ಕೇಂದ್ರ ಸರ್ಕಾರದ ಅಧಿಕಾರಿ ದಂಪತಿಗಳು ಯಾವುದೇ ದಾಖಲೆಗಳಿಲ್ಲದ 75 ಲಕ್ಷ ರೂಪಾಯಿಗಳನ್ನ ಅಕ್ರಮವಾಗಿ ಸಾಗಿಸುತ್ತಿದ್ದರು ಎನ್ನಲಾಗಿದೆ.

ಚೆನ್ನೈ ನಲ್ಲಿರುವ ಕಸ್ಟಮ್ಸ್ ಅಧಿಕಾರಿ ಲಕ್ನೋ ಗೆ ತೆರಳಲು ಬೆಂಗಳೂರಿಗೆ ಬಂದಿದ್ದರು. ಈ ನಡುವೆ ತಪಾಸಣೆ ವೇಳೆ ಅಧಿಕಾರಿ ಇರ್ಫಾನ್ ಅಹಮದ್ ಮಹಮದ್ ಸಿಕ್ಕಿಬಿದ್ದಿದ್ದಾರೆ.

ಏಪೋರ್ಟ್ʼನಲ್ಲಿ ತಪಾಸಣೆ ಮಾಡುವ ಮುನ್ನ ಕಸ್ಟಮ್ಸ್ ಅಧಿಕಾರಿ ಪತ್ನಿ ಏರ್ ಪೋರ್ಟ್ʼನ ಬಾತ್ ರೂಂನಲ್ಲಿ ಬ್ಯಾಗ್ ಒಂದನ್ನ ಬೀಸಾಡಿದ್ದಾರೆ. ಅನುಮಾನಗೊಂಡ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಬ್ಯಾಗ್ʼನಲ್ಲಿ 10 ಲಕ್ಷ ಹಣ ರೂಪಾಯಿ ಪತ್ತೆಯಾಗಿತ್ತು. ಬಳಿಕ ದಂಪತಿಗಳನ್ನ ತಪಾಸಣೆ ನಡೆಸಿದಾಗ ಹಣ ಸಾಗಿಸುತ್ತಿದ್ದುದ್ದು ಬೆಳಕಿಗೆ ಬಂದಿದೆ.
7 ಲಕ್ಷ ರೂಪಾಯಿ ಸೇರಿ ಐಫೋನ್, ದುಬಾರಿ ಮೊಬೈಲ್, ಬ್ಯಾಗ್ʼಗಳನ್ನ ವಶ ಪಡಿಸಿಕೊಂಡಿದ್ದಾರೆ. ಎರಡು ಕಾಸ್ಟ್ಲಿ ಮೊಬೈಲ್, ಆಫಲ್ ವಾಚ್ ಒಂದು ಸೂಟ್ ಕೇಸ್, ಬ್ಯಾಗ್ ನಲ್ಲಿ 74 ಲಕ್ಷ ಹಣವಿತ್ತು. ಒಟ್ಟು 74 ಲಕ್ಷದ 81 ಸಾವಿರದ 500 ರೂ ಹಣವನ್ನ ಜಪ್ತಿ ಮಾಡಲಾಗಿದೆ. ಹಣ ಜಪ್ತಿ ಮಾಡಿದ ಸಿಐಎಸ್ ಎಫ್ ಪೊಲೀಸರು ಕೇಸ್ ಅನ್ನು ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ.

Related posts

ಕಂದಾಯ ಅದಾಲತ್/ವಿದ್ಯುತ್ ವ್ಯತ್ಯಯ/ವ್ಯಾಪಾರಿಗಳಿಗೆ ಸೂಚನೆ…

Times fo Deenabandhu

ಪಠ್ಯದೊಂದಿಗೆ ಯೋಗಶಿಕ್ಷಣ ನೀಡಲು ಕ್ರಮ  : ಸಚಿವ ಕೆ.ಎಸ್.ಈಶ್ವರಪ್ಪ

Times fo Deenabandhu

ಮಾದರಿ ರಸ್ತೆಯನ್ನಾಗಿ ಮಾಡುವಂತೆ ಒತ್ತಾಯ

Times fo Deenabandhu