Times of Deenabandhu
  • Home
  • ಮುಖ್ಯಾಂಶಗಳು
  • ಬಿಜೆಪಿ ಅಂದ್ರೆ ‘ಬ್ಲಾಕ್ ಮೇಲರ್ಸ್ ಜನತಾ ಪಾರ್ಟಿ”- ಡಿ.ಕೆ.ಶಿವಕುಮಾರ್ ವ್ಯಂಗ್ಯ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಬಿಜೆಪಿ ಅಂದ್ರೆ ‘ಬ್ಲಾಕ್ ಮೇಲರ್ಸ್ ಜನತಾ ಪಾರ್ಟಿ”- ಡಿ.ಕೆ.ಶಿವಕುಮಾರ್ ವ್ಯಂಗ್ಯ

ಬೆಂಗಳೂರು: ಬಿಜೆಪಿ ಎಂದರೆ ಭಾರತೀಯ ಜನತಾ ಪಾರ್ಟಿ ಅಲ್ಲ, ‘ಬ್ಲಾಕ್ ಮೇಲರ್ಸ್ ಜನತಾ ಪಾರ್ಟಿ’ ಇದನ್ನು ಬಿಜೆಪಿ ನಾಯಕರೇ ಹೇಳಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

ಬಿಜೆಪಿ ಶಾಸಕರು ಹೇಳಿರುವ ಸಿಡಿ ವಿಚಾರವು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜನಸೇವಕ ಸಮಾವೇಶದಲ್ಲಿ ಕಾಂಗ್ರೆಸ್ ದೇಶಕ್ಕೆ ಮಾರಕ ಎಂದು ಯಡಿಯೂರಪ್ಪ ಹೇಳಿದ್ದಾರೆ. ಪಾಪ ಅವರಿಗೆ ಅವರ ಪಕ್ಷದಲ್ಲಿರುವವರ ಇತಿಹಾಸ ಗೊತ್ತಿಲ್ಲ. ಏಳು ಜನ್ಮ ಎತ್ತಿದರೂ ಕಾಂಗ್ರೆಸ್ ಮುಕ್ತ ರಾಜ್ಯ ಮಾಡಲಾಗದು ಎಂದು ಹೇಳಿದ್ದಾರೆ.

ಕೋವಿಡ್ ಸಂಕಷ್ಟದ ಸಮಯದಲ್ಲಿ ನಗರ ಸ್ಥಳೀಯ ಸಂಸ್ಥೆಯಲ್ಲಿ ತೆರಿಗೆ ಹಾಕುವ ಕಾನೂನು ತಂದಿರುವುದು ಜನರ ಸುಲಿಗೆ ಮಾಡುವ ಕ್ರಮ. ತಿಂಗಳಲ್ಲಿ ಮೂರು ಬಾರಿ ಪೆಟ್ರೋಲ್ -ಡೀಸೆಲ್ ಬೆಲೆ ಏರಿಕೆ ಆಗಿದೆ ಇವುಗಳನ್ನು ವಿರೋಧಿಸಿ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೋವಿಡ್ ಸಂಕಷ್ಟದ ಸಮಯದಲ್ಲಿ ನಗರ ಸ್ಥಳೀಯ ಸಂಸ್ಥೆಯಲ್ಲಿ ತೆರಿಗೆ ಹಾಕುವ ಕಾನೂನು ತಂದಿರುವುದು ಜನರ ಸುಲಿಗೆ ಮಾಡುವ ಕ್ರಮ. ತಿಂಗಳಲ್ಲಿ ಮೂರು ಬಾರಿ ಪೆಟ್ರೋಲ್ -ಡೀಸೆಲ್ ಬೆಲೆ ಏರಿಕೆ ಆಗಿದೆ ಇವುಗಳನ್ನು ವಿರೋಧಿಸಿ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ರೈತರಿಗೆ ಶಕ್ತಿ ತುಂಬಲು ಬೃಹತ್ ಕಾರ್ಯಕ್ರಮ ಕಾಂಗ್ರೆಸ್ ಹಮ್ಮಿಕೊಂಡಿದ್ದು ಜ. 20 ರಂದು ರಾಜಭವನ ಮುತ್ತಿಗೆ ಹಾಕಲಿದ್ದೇವೆ ಎಂದರು.

Related posts

ತ್ಯಾವರೆಕೊಪ್ಪದಲ್ಲಿ ಕ್ರೀಡಾ ಗ್ರಾಮ ನಿರ್ಮಾಣಕ್ಕೆ ಯತ್ನ : ಬಿ.ವೈ.ರಾಘವೇಂದ್ರ

Times fo Deenabandhu

ಯುಪಿಯಲ್ಲಿನ ಭೀಕರ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ…

Times fo Deenabandhu

ನಾಳೆಯಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಶುರು…

Times fo Deenabandhu