January 21, 2021
Times of Deenabandhu
  • Home
  • ರಾಜಕೀಯ
  •  ರಾಜ್ಯಕ್ಕೆ ಕೋವ್ಯಾಕ್ಸಿನ್ ಲಸಿಕೆಯ 20 ಸಾವಿರ ಡೋಸ್ …
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

 ರಾಜ್ಯಕ್ಕೆ ಕೋವ್ಯಾಕ್ಸಿನ್ ಲಸಿಕೆಯ 20 ಸಾವಿರ ಡೋಸ್ …

ಬೆಂಗಳೂರು: ಕೋವ್ಯಾಕ್ಸಿನ್ ಲಸಿಕೆಯ 20 ಸಾವಿರ ಡೋಸ್ ಗಳು ರಾಜ್ಯಕ್ಕೆ ಬರಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಕೋವ್ಯಾಕ್ಸಿನ್ ನ ಒಂದು ವೈಲ್ ನಲ್ಲಿ 10 ಎಂಎಲ್ ಲಸಿಕೆ ಇದೆ. ಕೋವಿಶೀಲ್ಡ್ ನ ಒಂದು ವೈಲ್ ನಲ್ಲಿ 5 ಎಂಎಲ್ ಇದೆ. ಕೋವ್ಯಾಕ್ಸಿನ್ ನ ಒಂದು ವೈಲ್ ನಿಂದ 20 ಮಂದಿಗೆ ಲಸಿಕೆ ನೀಡಬಹುದು. ಎರಡು ಲಸಿಕೆಗಳ ನಡುವೆ ಇರುವ ವ್ಯತ್ಯಾಸ ಇಷ್ಟೇ. ರಾಜ್ಯದಲ್ಲಿ ಇವೆರಡೂ ಲಸಿಕೆಗಳನ್ನು ನೀಡಲಾಗುವುದು. ಆದರೆ ಲಸಿಕೆ ಪಡೆಯುವವರು ಯಾವ ಲಸಿಕೆ ಬೇಕೆಂದು ಕೇಳುವಂತಿಲ್ಲ ಎಂದರು.
ಯಾವ ಜಿಲ್ಲೆಗಳಿಗೆ ಎಷ್ಟು ಲಸಿಕೆ ನೀಡಬೇಕು, ಯಾವ ಸಿಬ್ಬಂದಿಗೆ ನೀಡಬೇಕು ಮೊದಲಾದವುಗಳ ಬಗ್ಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಜನವರಿ 16 ರಿಂದ ಲಸಿಕೆ ವಿತರಣೆ ಆರಂಭಿಸುವುದಕ್ಕೆ ಸಿದ್ಧತೆಯಾಗಿ ಎಲ್ಲ ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಚಿವ ಸಂಪುಟಕ್ಕೆ ಸೇರ್ಪಡೆಯಾಗುತ್ತಿರುವ ನೂತನ ಸಚಿವರಿಗೆ ಶುಭಾಶಯ ತಿಳಿಸುತ್ತೇನೆ. ಕೊನೆ ಗಳಿಗೆಯಲ್ಲಿ ಕೆಲವರಿಗೆ ಸಂಪುಟಕ್ಕೆ ಸೇರಲು ಸಾಧ್ಯವಾಗಿಲ್ಲ. ಅಂತಹವರಿಗೆ ಸೂಕ್ತ ಸಮಯದಲ್ಲಿ ಪಕ್ಷ ಉತ್ತಮ ಅವಕಾಶ ನೀಡಲಿದೆ. ನಮ್ಮ ಸರ್ಕಾರ ಪಾರದರ್ಶಕವಾಗಿ ಕೆಲಸ ಮಾಡಲಿದ್ದು, ಎಲ್ಲ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಕೆಲಸ ಮಾಡಲಿದೆ. ಸಂಪುಟ ಪುನಾರಚನೆ ಅಥವಾ ವಿಸ್ತರಣೆಯಾದಾಗ ಅಸಮಾಧಾನ ಸಹಜ. ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಭಾಗ ಎಂದರು.
ಎಲ್ಲ ಬಿಜೆಪಿ ಶಾಸಕರು ಒಗ್ಗಟ್ಟಾಗಿದ್ದಾರೆ. ಯಾರೂ ಗುಂಪುಗಾರಿಕೆ ಮಾಡುತ್ತಿಲ್ಲ. ಪಕ್ಷದ ಕೆಳಗೆ ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ನೋಟಿಸ್ ಅಲ್ಲ, ಮನವಿ

ಚಿತ್ರನಟ ಯಶ್ ಬಹಳ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಅವರ ಮೇಲೆ ನನಗೂ ಅಭಿಮಾನವಿದೆ. ಯಶ್ ಅವರ ಹೊಸ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯಿಂದ ಯಶ್ ಅವರಿಗೆ ಮನವಿ ಮಾಡಲಾಗಿದೆ. ಆದರೆ ಇದು ನೋಟಿಸ್ ಅಲ್ಲ. ಚಿತ್ರದಲ್ಲಿ ಸಿಗರೇಟು ಸೇದುವ ದೃಶ್ಯ ಇದೆ ಎಂದು ಕೇಳಿದ್ದೇನೆ. ಈ ದೃಶ್ಯವನ್ನು ತೆಗೆದುಹಾಕಿದರೆ ಸಮಾಜಕ್ಕೆ ಅನುಕೂಲ ಎಂದು ಮನವಿ ಮಾಡಲಾಗಿದೆ. ಯಶ್ ಅವರ ಅಭಿಮಾನಿಗಳಲ್ಲಿ ಅನೇಕ ಯುವಜನರು ಇದ್ದಾರೆ. ಇದು ಎಲ್ಲ ಚಿತ್ರಗಳಿಗೂ ಅನ್ವಯವಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು.

ENGLISH SUMMARY…

State to Receive 20 thousand doses of Covaxin: Health & Medical Education Minister Dr.K.SudhakarState is prepared to inaugurate Vaccination drive on January 16.

Bengaluru, January : 20 thousand doses of Covaxin will be arriving in the state soon, said Health & Medical Education Minister Dr.K.Sudhakar. he was speaking to the media here on Wednesday.The only difference between Covaxin vial and Covi-shield vial is Covi-shield has 5 ml of vaccine in a vial and covaxin has 10 ml of vaccine in a vial. One vial can vaccinate 20 people. Both the vaccine will be given in the state and there is no choice for any. Said the Health Minister.Central government has issued a guideline regarding which district and which staff to be given the vaccination. All districts will be distributed with the vaccine to inaugurate the vaccination drive on January 16th. He said.Minister congratulated the newly inducted ministers to the CM BSY cabinet and said some of the leaders could not make into the list, but they will be given suitable position in the party. Our government is working transparently and taking all the schemes to the doorsteps of the beneficiaries. There will be unhappiness when a cabinet is expanded, but it’s a part of democracy, said Dr.Sudhakar. all leaders are united and there is no dissidence in the party, he clarified.An Appeal and not NoticeCinema star Yash is into many social works and I personally admire him. Health department has appealed to him regarding his new upcoming movie. But this is not a notice. I heard that there is a smoking scene in the cinema and he has been appealed to remove that scene which will give a good message for the society. There are many youths in his fan club and this is applicable for all movies said the Minister.

Related posts

“ಸಿಡಿ ಬ್ಲಾಕ್ ಮೇಲ್ ಬಗ್ಗೆ ಸಿಎಂ ಕ್ರಿಮಿನಲ್ ಕೇಸ್ ದಾಖಲಿಸಲಿ: ಸಿದ್ದರಾಮಯ್ಯ ಸಲಹೆ

Times fo Deenabandhu

ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಆತ್ಮಹತ್ಯೆ: ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ..

Times fo Deenabandhu

ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ; ಶೇ. 60:40 ಅನುಪಾತಕ್ಕೆ ರಾಜ್ಯ ಸಚಿವ ಸಂಪುಟದ ಒಪ್ಪಿಗೆ…

Times fo Deenabandhu