January 21, 2021
Times of Deenabandhu
  • Home
  • ಮುಖ್ಯಾಂಶಗಳು
  • ಸಂಪುಟ ವಿಸ್ತರಣೆ ಬೆನ್ನಲ್ಲೆ ‘ಸಿಡಿ, ಬ್ಲಾಕ್ ಮೇಲ್’ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್…
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಸಂಪುಟ ವಿಸ್ತರಣೆ ಬೆನ್ನಲ್ಲೆ ‘ಸಿಡಿ, ಬ್ಲಾಕ್ ಮೇಲ್’ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್…

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು 7 ಮಂದಿ ನೂತನ ಸಚಿವರು ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟ ಸೇರಿದ್ದಾರೆ. , ಸಚಿವ ಸ್ಥಾನದಿಂದ ವಂಚಿತರಾದ ಶಾಸಕರು ಬಿಜೆಪಿ ಸರ್ಕಾರದ ವಿರುದ್ಧವೇ ಸಿಡಿದೆದ್ದಿದ್ದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ವರಿಷ್ಠರು ವಾರ್ನಿಂಗ್ ನೀಡಿದರೂ ಜಗ್ಗದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಯತ್ನಾಳ್, ಬ್ಲಾಕ್ ಮೇಲ್ ಮಾಡಿದವರಿಗೆ, ಹಣ ನೀಡಿದವರಿಗೆ, ಸಿಡಿ ತೋರಿಸಿ ಬೆದರಿಸಿದವರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ನೀಡಲಾಗುತ್ತಿದೆ. ಹಿಂದೆ ಪಕ್ಷಕ್ಕೆ ದುಡಿದವರ ಖೋಟಾ, ಸರ್ಕಾರ ರಚನೆಗೆ ಕಾರಣರಾದವರ ಖೋಟಾ, ಜಿಲ್ಲಾವಾರು ಖೋಟಾ ಎಂಬುದಿತ್ತು. ಆದರೆ ಈಗ ಹಾಗಿಲ್ಲ ಬ್ಲಾಕ್ ಮೇಲ್ ಖೋಟಾ, ಸಿಡಿ ಪ್ಲಸ್ ಹಣ ನೀಡಿದವರ ಖೋಟಾ ಎಂಬಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರು ಸಚಿವ ಸ್ಥಾನ ಬ್ಲಾಕ್ ಮೇಲ್ ಮಾಡಿ ಸಿಡಿ ತೋರಿಸಿ ಸಿಎಂ ಹೆದರಿಸಿ ಪಡೆದಿದ್ದಾರೆ ಎಂದು ಯತ್ನಾಳ್ ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ. ‘ಯಡಿಯೂರಪ್ಪ ಅವ್ರ ರಕ್ತ ಸಂಬಂಧಿಯೊಬ್ಬರ ಮುಖಾಂತರ ಯಡಿಯೂರಪ್ಪ ಅವ್ರ ಸಿಡಿ ವಿಚಾರ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್‌ ಮಾಡಿ ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಕೆಲವೊಬ್ಬರು ಹಣ ನೀಡಿ ಮಂತ್ರಿ ಸ್ಥಾನ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರನ್ನು ಕೂಡ ಖರೀದಿಸಿದ್ದಾರೆ. ಸಿದ್ದರಾಮಯ್ಯ, ಜಮೀರ್, ಡಿಕೆಶಿ, ಕೆ.ಜೆ ಜಾರ್ಜ್ ಕೂಡ ಬಿ ಎಸ್ ವೈ ಜತೆಗಿದ್ದಾರೆ. ಸಿಎಂ ಬಿ ಎಸ್ ವೈ, ವಿಜಯೇಂದ್ರ ಕಾಂಗ್ರೆಸ್ ನ ಈ ನಾಯಕರನ್ನೂ ಖರೀದಿ ಮಾಡಿದ್ದಾರೆ. ಈಗ ವಿಪಕ್ಷ ಎಂಬುದು ಇಲ್ಲ, ಕಾಂಗ್ರೆಸ್ ಸತ್ತು ಹೋಗಿದೆ. ವಿಪಕ್ಷ ಸಂಪೂರ್ಣ ಅಡ್ಜಸ್ಟ್ ಮೆಂಟ್ ಮಾಡಿಕೊಂಡಿದೆ ಎಂದು ಗುಡುಗಿದ್ದಾರೆ.

Related posts

ಜ,16ರಿಂದ ದೇಶದಲ್ಲಿ ಕೊರೋನಾ ಲಸಿಕೆ ವಿತರಣೆ…

Times fo Deenabandhu

‘ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಚುನಾವಣಾ ಆಯೋಗ ಸಿದ್ಧ- ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ

Times fo Deenabandhu

ಹೆಚ್.ಡಿ.ಕುಮಾರಸ್ವಾಮಿ ಅವರ 61ನೇ ಹುಟ್ಟುಹಬ್ಬ: ಸಂಭ್ರಮಾಚರಣೆ…

Times fo Deenabandhu