January 21, 2021
Times of Deenabandhu
  • Home
  • ಜಿಲ್ಲೆ
  • ಕರಕುಚ್ಚಿಯಲ್ಲಿ ಸಾಮರಸ್ಯ ಮೆರೆದ ಕಕ್ಕಯ್ಯ: ಶಿವಸಂಚಾರ ತಂಡದಿಂದ ಡೋಹರ ಕಕ್ಕಯ್ಯ ನಾಟಕ ಪ್ರದರ್ಶನ                   
ಚಿಕ್ಕಮಗಳೂರು ಜಿಲ್ಲೆ ನಮ್ಮ ವಿಶೇಷ ಮುಖ್ಯಾಂಶಗಳು ಸಾಹಿತ್ಯ/ಸಂಸ್ಕೃತಿ

ಕರಕುಚ್ಚಿಯಲ್ಲಿ ಸಾಮರಸ್ಯ ಮೆರೆದ ಕಕ್ಕಯ್ಯ: ಶಿವಸಂಚಾರ ತಂಡದಿಂದ ಡೋಹರ ಕಕ್ಕಯ್ಯ ನಾಟಕ ಪ್ರದರ್ಶನ                   

ತರೀಕೆರೆ: ತಾಲ್ಲೂಕಿನ ಕರಕುಚ್ಚಿ ಗ್ರಾಮದಲ್ಲಿ , ಗ್ರಾಮಸ್ಥರು ಸಂಘಟಿಸಿದ್ದ ಎರಡು ದಿನಗಳ ಶಿವಸಂಚಾರ ನಾಟಕೋತ್ಸವ ಯಶಸ್ವಿಯಾಗಿ ಆರಂಭಗೊಂಡಿದೆ. ಮಂಗಳವಾರ ಸಂಜೆ ನಾಟಕೋತ್ಸವದ ಮೊದಲ ದಿನದ ನಾಟಕ `ಡೋಹರ ಕಕ್ಕಯ್ಯ’ ಯಶಸ್ವಿಯಾಗಿ ಪ್ರದರ್ಶನವಾಯಿತು.

ಶರಣ ಪರಂಪರೆಯಲ್ಲಿ ತನ್ನದೇ ಆದ ವಿಶಿಷ್ಠ ಛಾಪು ಮೂಡಿಸಿದ್ದ ಡೋಹರ ಕಕ್ಕಯ್ಯ ಶರಣ ತತ್ವದ ಸಾರವನ್ನು ಹೇಗೆ ಅರ್ಥೈಸಿಕೊಂಡಿದ್ದ ಎಂಬುದನ್ನು ನಾಟಕ ಎಳೆಎಳೆಯಾಗಿ ಬಿಚ್ಚಿಟ್ಟಿತು. ಕಾಶಿಯಿಂದ ಬಂದ ಕಕ್ಕಯ್ಯನ ಬಸವ ಪ್ರೇಮ, ಜೊತೆಗೆ ಸ್ವಾಭಿಮಾನ ಮತ್ತು ಹಠಗಳು ಹೇಗೆ ಅನುಭವ ಮಂಟಪದ ಸಾಂಗತ್ಯವನ್ನು ಬೆಳೆಸಿಕೊಡ್ತು ಎನ್ನುವುದನ್ನು ಕೂಡ ನಾಟಕ ಎತ್ತಿ ತೋರಿಸಿತು. 12ನೇ ಶತಮಾನದ ಪ್ರತಿ ಶರಣರ ನಡೆನುಡಿಗಳು ಎಷ್ಟು ನೇರ ಮತ್ತು ನಿಷ್ಠುರತೆಯನ್ನು ಹೊಂದಿತ್ತು ಎಂಬುದನ್ನು ಕಕ್ಕಯ್ಯ ನಾಟಕದಲ್ಲಿ ಪ್ರತಿಬಿಂಬಿಸುತ್ತಾನೆ. ಡೋಹರ ಕಕ್ಕಯ್ಯನ ದೃಷ್ಠಿಯಲ್ಲಿ ಸಮಾಜ,ದೇವರು, ಸಾಮರಸ್ಯ, ಬದುಕಿನ ಆಂತರ್ಯ ಹೇಗೆಲ್ಲ  ಇದ್ದಿರಬಹುದು ಎಂಬುವುದರ ಸುತ್ತಾ ನಾಟಕ ಎಣೆದುಕೊಂಡಿದೆ. ಸೌಹಾರ್ಧತೆ ಮತ್ತು ಹೃದಯಶ್ರೀಮಂತಿಕೆ ಬದುಕಿನ ಆನಂದವನ್ನು ಹೆಚ್ಚಿಸುತ್ತೆ ಎನ್ನುವ ಸಂದೇಶದೊಂದಿಗೆ, ವಿಚಾರ ತರ್ಕ ವಿಮರ್ಷೆಗಳಿಗೆ ಕಲ್ಯಾಣದ ಅನುಭವ ಮಂಟಪ ಹೇಗೆ ವೇದಿಕೆಯಾಗಿತ್ತು ಎನ್ನುವುದನ್ನು ಕೂಡ ಇಲ್ಲಿ ಕಾಣಬಹುದು.

ರಾಮಚಂದ್ರ ಕಲ್ಲೋ ನಾಯಕರವರು ಬರೆದ ಡೋಹರಕಕ್ಕಯ್ಯ ನಾಟಕಕ್ಕೆ ಕ್ರೀಯಾಶೀಲವಾಗಿ ನಿರ್ದೇಶನ ನೀಡಿದ್ದಾರೆ ಮಾಲತೇಶ್ ಬಡಿಗೇರ್. ತುಂಬಾ ಸೊಗಸಾಗಿ ಸಂಗೀತ ನಿರ್ದೇಶನ ಮಾಡಿದ್ದಾರೆ ಜಗದೀಶ್ ಆರ್. ಅಭಿನಯ ಮತ್ತು ಗಾಯನ ಮಾಡಿದರು ಶಿವಸಂಚಾರ ತಂಡದ ಕಲಾವಿದರು.

ನಾಟಕ ಪ್ರದರ್ಶನಕ್ಕಿಂತ ಮೊದಲಿಗೆ ಗ್ರಾಮಸ್ಥರಿಂದ ನೂತನ ಗ್ರಾಮ ಪಂಚಾಯತ್ ಸದಸ್ಯರನ್ನು ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಸುದ್ದಿ ವಾಹಿನಿ ನಿರೂಪಕ, ಮಲ್ಲನಗೌಡ ಪಾಟೀಲ್  ಸಂಘಟಕರಿಗೆ ಸ್ಪೂರ್ತಿ ತುಂಬುವ ಮಾತುಗಳನ್ನಾಡಿದ್ರು.

ಇಂದು ಸಂಜೆ ಕರೋನ ನಾಟಕ                          

ಕರಕುಚ್ಚಿಯಲ್ಲಿ ಇಂದು ಸಂಜೆ ಎರಡನೇ ದಿನದ ನಾಟಕೋತ್ಸವವು ಜರುಗಲಿದ್ದು, ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚನೆಯ `ಜೀವ ಇದ್ರೆ ಜೀವನ’ ಎಂಬ ವಿಶೇಷವಾದ ನಾಟಕ ನೆರವೇರಲಿದೆ. ವೈ ಡಿ ಬದಾಮಿ ನಿರ್ದೇಶನದ  ಈ ನಾಟಕಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ ಜಗದೀಶ್ ಆರ್. ಕರಕುಚ್ಚಿಯ ಗ್ರಾಮ ಪಂಚಾಯತ್ ಮುಂದೆ ಸಂಜೆ 7.00 ಗಂಟೆಗೆ ನಾಟಕ ಪ್ರದರ್ಶನ ಜರುಗಲಿದೆ.

 

 

 

 

 

Related posts

ಡಿ.26ರಂದು ಜಿಲ್ಲಾ ವಾಣಿಜ್ಯ ಮತು ್ತಕೈಗಾರಿಕಾ ಸಂಘದ ವತಿಯಿಂದ ಸಂಸ್ಥಾಪಕರ ದಿನಾಚರಣೆ

Times fo Deenabandhu

ಜೀವನಸಂಧ್ಯಾ ವೃದ್ಧಾಶ್ರಮಕ್ಕೆ ಸಂಸದೆ ಭೇಟಿ ಹಿರಿಯರು ಸಮಾಜಕ್ಕೆ ಹೊರೆಯಲ್ಲ ಆಸ್ತಿ: ಶೋಭಾ ಕರಂದ್ಲಾಜೆ 

Times fo Deenabandhu

 ರಾಜ್ಯಕ್ಕೆ ಕೋವ್ಯಾಕ್ಸಿನ್ ಲಸಿಕೆಯ 20 ಸಾವಿರ ಡೋಸ್ …

Times fo Deenabandhu