January 21, 2021
Times of Deenabandhu
  • Home
  • ಮುಖ್ಯಾಂಶಗಳು
  • ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ/ಗಣ್ಯರಿಂದ ಸಂಕ್ರಾತಿ ಹಬ್ಬದ ಶುಭಾಶಯ/ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಿಕ್ಕಮಗಳೂರು ಜಿಲ್ಲೆ ಮುಖ್ಯಾಂಶಗಳು

ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ/ಗಣ್ಯರಿಂದ ಸಂಕ್ರಾತಿ ಹಬ್ಬದ ಶುಭಾಶಯ/ಪ್ರಶಸ್ತಿಗೆ ಅರ್ಜಿ ಆಹ್ವಾನ

ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಚಿಕ್ಕಮಗಳೂರು : ಸ್ಟಾಪ್ ಸೆಲೆಕ್ಷನ್ ಕಮಿಷನ್ ವತಿಯಿಂದ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆ ಖಾಲಿ ಇರುವ ಗ್ರೂಪ್ ಬಿ ಮತ್ತು ಸಿ ೬೫೦೬ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ವೆಬ್‌ಸೈಟ್ <hಣಣಠಿs://ssಛಿ.ಟಿiಛಿ.iಟಿ> ನ ಮೂಲಕ ಅರ್ಜಿಯನ್ನು ಜನವರಿ ೩೧ ರೊಳಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ:೦೮೨೬೨-೨೩೫೫೧೩, ೦೮೦-೨೫೫೦೨೫೨೦ ಹಾಗೂ ೯೪೮೩೮೬೨೦೨೦ ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಣ್ಯರಿಂದ ಸಂಕ್ರಾತಿ ಹಬ್ಬದ ಶುಭಾಶಯಗಳು
ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಕು.ಶೋಭಾ ಕರಂದ್ಲಾಜೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಹಾಗೂ ಹಾಸನ ಲೋಕಸಭಾ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವರು ಹಾಗೂ ಶಾಸಕರಾದ ಸಿ.ಟಿ.ರವಿ, ವಿಧಾನಸಭಾ ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಡಿ.ಎಸ್.ಸುರೇಶ್, ಬೆಳ್ಳಿ ಪ್ರಕಾಶ್, ಟಿ.ಡಿ.ರಾಜೇಗೌಡ, ವಿಧಾನಪರಿಷತ್ ಶಾಸಕರಾದ ಎಸ್.ಎಲ್.ಭೋಜೇಗೌಡ, ಆಯನೂರು ಮಂಜುನಾಥ್, ಎಂ.ಕೆ.ಪ್ರಾಣೇಶ್ ಅವರುಗಳು ಜಿಲ್ಲೆಯ ಜನತೆಗೆ ಸಂಕ್ರಾತಿ ಹಬ್ಬವು ಸುಖ, ಶಾಂತಿ ಮತ್ತು ಸಮೃದ್ಧಿ ತರಲಿ ಎಂದು ಶುಭ ಹಾರೈಸಿದ್ದಾರೆ.

ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಿಕ್ಕಮಗಳೂರು.: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ೨೦೨೦-೨೧ನೇ ಸಾಲಿಗೆ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕಳೆದ ಐದು ವರ್ಷಗಳಿಂದ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಅರ್ಹ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಇತರೆ ಐದು ಕ್ಷೇತ್ರಗಳಾದ ಮಹಿಳಾ ಅಭಿವೃದ್ಧಿ, ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಹಾಗೂ ಸಾಹಸ ಪ್ರದರ್ಶಿಸಿ ಹೋರಾಡಿದ ವೀರ ಮಹಿಳೆಯರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ನಮೂನೆಯನ್ನು ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಕರ ಬಾಲಮಂದಿರ ಆವರಣ, ಬಿ.ಜಿ.ಎಸ್ ಶಾಲೆಯ ಹತ್ತಿರ, ಹೌಸಿಂಗ್ ಬೋರ್ಡ್ ಚಿಕ್ಕಮಗಳೂರು ಇವರಿಂದ ಪಡೆದು ಜನವರಿ ೩೧ ರೊಳಗೆ ದ್ವಿಪ್ರತಿಯಲ್ಲಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೨೬೨-೨೯೫೭೪೯, ೨೨೦೯೫೦ ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಿಳೆ ಕಾಣೆ
ಚಿಕ್ಕಮಗಳೂರು.: ಮೂಡಿಗೆರೆ ತಾಲ್ಲೂಕಿನ ಮರಸಣಿಗೆ ಗ್ರಾಮದ ನಿವಾಸಿ ಪವಿತ್ರ ಎಂಬ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
೨೦೨೧ ಜನವರಿ ೦೬ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಮನೆಯಿಂದ ಕಾಣೆಯಾಗಿರುತ್ತಾರೆ, ೫ ಅಡಿ ಎತ್ತರ, ಎಣ್ಣೆ ಗೆಂಪು ಮೈ ಬಣ್ಣ, ಕಪ್ಪು ಕೂದಲು, ಹಳದಿ ಬಣ್ಣದ ಚೂಡಿದಾರ್, ಕನ್ನಡ ಮತ್ತು ತುಳು ಭಾಷೆ ಮಾತನಾಡುವ ಇವರ ಗುರುತು ಪತ್ತೆಯಾದಲ್ಲಿ ಕಳಸ ಪೊಲೀಸ್ ಠಾಣೆ ದೂ.ಸಂ:೦೮೨೬೩-೨೭೪೮೭೭ ಅಥವಾ ಕಂಟ್ರೋಲ್ ರೂಂ: ೦೮೨೬೬-೨೨೦೧೨೯ ಸಂಪರ್ಕಿಸಬಹುದಾಗಿದೆ ಎಂದು ಕಳಸ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ವಿಶೇಷ

ಹೂ ಬಿಡಲಿರುವ ಮಾವಿನ ತೋಟಗಳಿಗೆ ಕೈಗೊಳ್ಳಬೇಕಾಗಿರುವ ಸಸ್ಯ ಸಂರಕ್ಷಣೆ ಕ್ರಮಗಳು
ಚಿಕ್ಕಮಗಳೂರು, . ಜಿಲ್ಲೆಯಲ್ಲಿ ಪ್ರಸಕ್ತ ಮಾವು ಹೂ ಬಿಡುವ ಸಮಯದಲ್ಲಿ ಅಕಾಲಿಕವಾಗಿ ಮಳೆ ಬಿದ್ದಿರುವ ಕಾರಣ ಸಂಭವನೀಯ ಹೂ ತೆನೆ ಕಪ್ಪಾಗುವ ರೋಗ ಹಾಗೂ ಬೂದಿ ರೋಗಗಳನ್ನು ತಡೆಗಟ್ಟಲು ಹೆಕ್ಸಾಕೋನಾಜೋಲ್ ೨ ಮಿ.ಲೀ ಅಥವಾ ಥಯೋಫಿನೇಟ್ ಮಿಥೈಲ್ ೧ ಗ್ರಾಂ ಅಥವಾ ಕಾರ್ಬನ್ ಡೈಜಿಮ್ ೧.೫ ಗ್ರಾಂ ಅಥವಾ ಟ್ರೈಸೆ ಕ್ಲೊಜೋಲ್ ೦.೨೫ ಗ್ರಾಂ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.
ಮಾವು ಬೆಳೆಯಲ್ಲಿ ಚಿಗುರು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಎಲೆ ತಿನ್ನುವ ಕೀಟ, ಜಿಗಿಹುಳು, ಕುಡಿ ಕೊರಕ ಇತ್ಯಾದಿ ಕೀಟಗಳ ಹತೋಟಿಗಾಗಿ ರೈತರು ಈ ಕೆಳಕಂಡ ಸಸ್ಯ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬಹುದು.
ಪ್ರಥಮ ಸಿಂಪರಣೆ:- ಹೂ ಬಿಡುವ ನಿಕಟ ಪೂರ್ವ ಮತ್ತು ಹೂ ತೆನೆ ಹೊರ ಬರುವ ಹಂತ (Pಡಿe-ಜಿಟoತಿeಡಿiಟಿg ಚಿಟಿಜ iಟಿಜಿಟoಡಿesಛಿeಟಿಛಿe iಟಿiಣiಚಿಣioಟಿ sಣಚಿge)
ಸಿಂಪರಣಾ ಔಷಧಿ:
ಲಾಂಬ್ಡಾ ಸೈಹ್ಯಾಲೋಥ್ರಿನ್ (ಐಚಿmbಜಚಿ ಛಿಥಿhಚಿಟoಣhಡಿiಟಿ) ೫% ಇಅ- ೦.೬ ಮಿ.ಲಿ./ಲೀ.+
ನೀರಲ್ಲಿ ಕರುವ ಗಂಧಕ (Weಣಣಚಿbಟe suಟಠಿhuಡಿ)೮೦ WP -೩ ಗ್ರಾಂ./ಲೀ
ಅಥವಾ
ಇಮಿಡಾಕ್ಲೋಪ್ರಿಡ್ (Imiಜಚಿಛಿಟoಠಿಡಿiಜ) ೧೭.೮% Sಐ- ೦.೩ ಗ್ರಾಂ./ಲೀ.
ನೀರಲ್ಲಿ ಕರಗುವ ಗಂಧಕ (Weಣಣಚಿbಟe suಟಠಿhuಡಿ) ೮೦ WP -೩ ಗ್ರಾಂ./ಲೀ
ಅಥವಾ
ಥಯೋಮೆಥೋಕ್ಸಾಮ್ (ಖಿhiomeಣhoxಚಿm) ೨೫% Wಉ -೦.೨೫ ಗ್ರಾಂ./ಲೀ
ನೀರಲ್ಲಿ ಕರಗುವ ಗಂಧಕ (Weಣಣಚಿbಟe suಟಠಿhuಡಿ) ೮೦ WP -೩ ಗ್ರಾಂ./ಲೀ
ಅಥವಾ
ಬುಪ್ರೊಫೆಜಿನ್ (ಃuಠಿಡಿoಜಿeziಟಿ) ೨೫% Sಅ -೨.೦ ಮಿ.ಲಿ/ಲೀ
ನೀರಲ್ಲಿ ಕರಗುವ ಗಂಧಕ (Weಣಣಚಿbಟe suಟಠಿhuಡಿ) ೮೦ WP -೩ ಗ್ರಾಂ./ಲೀ

ಈ ಹಂತದಲ್ಲಿ ಔಷಧಿಗಳ ಸಿಂಪರಣೆಯಿಂದ ಕೀಟ ರೋಗಗಳ ನಿಯಂತ್ರಣವಾಗುವುದರ ಜೊತೆಗೆ ಮುಂದಿನ ಹಂತದಲ್ಲಿ ಅವು ಉಲ್ಬಣಗೊಳ್ಳುವುದನ್ನು ತಪ್ಪಿಸುತ್ತದೆ. ಇಲ್ಲದಿದ್ದರೆ ಕಾಯಿ ಕಚ್ಚುವಿಕೆ ಕುಂಠಿತಗೊಂಡು ಇಳುವರಿಗೆ ತೀವ್ರ ಧಕ್ಕೆಯಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಚಿಕ್ಕಮಗಳೂರಿನ ತೋಟಗಾರಿಕೆ ಇಲಾಖೆ ಹಾರ್ಟಿ ಕ್ಲಿನಿಕ್, ವಿಷಯ ತಜ್ಞ ಯಶವಂತ್ ಕುಮಾರ್ ದೂ.ಸಂ: ೦೮೨೬೨-೨೯೫೦೪೩, ೮೬೧೮೧೮೬೫೮೬ ಅಥವಾ ಹತ್ತಿರದ ತೋಟಗಾರಿಕೆ ಇಲಾಖೆಯ ಆರ್.ಎಸ್.ಕೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

Related posts

ಜೆ.ಎನ್.ಎನ್.ಸಿ: ಐ.ಓ.ಟಿ ಕುರಿತು ಐದು ದಿನಗಳ ಕಾರ್ಯಾಗಾರ

Times fo Deenabandhu

ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿರುವ ಖಾಸಗಿ ಬಸ್ ನಿಲ್ದಾಣ…

Times fo Deenabandhu

ಕೋವಿಡ್ ಚುಚ್ಚು ಮದ್ದು ಹಾಕಿಸಿ ವೈರಸ್‍ನಿಂದ ಮುಕ್ತರಾಗಿ- ಎಂ.ಪಿ.ಕುಮಾರಸ್ವಾಮಿ

Times fo Deenabandhu