January 21, 2021
Times of Deenabandhu
  • Home
  • ಮುಖ್ಯಾಂಶಗಳು
  • ಸಿಎಂ ಬಿಎಸ್ ವೈ ಸಂಪುಟಕ್ಕೆ ‘ಸಪ್ತ ಸಚಿವರ’ ಬಲ: ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಸಿಎಂ ಬಿಎಸ್ ವೈ ಸಂಪುಟಕ್ಕೆ ‘ಸಪ್ತ ಸಚಿವರ’ ಬಲ: ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು:  ಅಂತು ಇಂತೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜ್ಯಸಚಿವ ಸಂಪುಟ ವಿಸ್ತರಣೆ ಮಾಡಿದ್ದು,  ಇಂದು ನೂತನ ಸಚಿವರಾಗಿ 7 ಮಂದಿ ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜಭವನದಲ್ಲಿ ನೆರವೇರಿತು. ನೂತನ ಸಚಿವರಾಗಿ ಶಾಸಕರಾದ ಉಮೇಶ್ ಕತ್ತಿ. ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ, ಎಸ್.ಅಂಗಾರ ವಿಧಾನಪರಿಷತ್ ಸದಸ್ಯರಾದ ಸಿಪಿ ಯೋಗೇಶ್ವರ್, ಆರ್.ಶಂಕರ್, ಎಂಟಿಬಿ ನಾಗರಾಜ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಪಾಲ ವಜುಭಾಯಿ ವಾಲಾರವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ನೂತನ ಸಚಿವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಪಾಲ ವಜುಭಾಯಿ ವಾಲಾ ಅವರು ಶುಭಕೋರಿದರು.

Related posts

ವಿದ್ಯುತ್ ವ್ಯತ್ಯಯ : ಸಹಕರಿಸಲು ಮನವಿ/ಆನ್‍ಲೈನ್ ಸ್ಪರ್ಧೆ- ಅವಧಿ ವಿಸ್ತರಣೆ/ಸರ್ವ ಸದಸ್ಯರ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Times fo Deenabandhu

ಈ ಬಾರಿ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬ್ರೇಕ್….

Times fo Deenabandhu

ಭಾರತದಲ್ಲೇ ಸಿಗಲಿದೆ ರಷ್ಯದ ಸ್ಪುಟ್ನಿಕ್ V ಕೋವಿಡ್ ಲಸಿಕೆ….

Times fo Deenabandhu