January 21, 2021
Times of Deenabandhu
  • Home
  • ಮುಖ್ಯಾಂಶಗಳು
  • ಗ್ರಾಮ ಪಂಚಾಯಿತಿ ಸದಸ್ಯರು ತರಬೇತಿ ಸದ್ಬಳಕೆ ಮಾಡಿಕೊಳ್ಳುವಂತೆ ಸಚಿವ ಕೆ.ಎಸ್ ಈಶ್ವರಪ್ಪ ಕರೆ
ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ

ಗ್ರಾಮ ಪಂಚಾಯಿತಿ ಸದಸ್ಯರು ತರಬೇತಿ ಸದ್ಬಳಕೆ ಮಾಡಿಕೊಳ್ಳುವಂತೆ ಸಚಿವ ಕೆ.ಎಸ್ ಈಶ್ವರಪ್ಪ ಕರೆ

ಶಿವಮೊಗ್ಗ: ಗ್ರಾಮ ಪಂಚಾಯಿತಿ ಸದಸ್ಯರಿಗೆ ಸರ್ಕಾರದ ಯೋಜನೆ ಮತ್ತು ಆಡಳಿತ ವ್ಯವಸ್ಥೆ ಬಗ್ಗೆ ತಿಳಿಸಲು ತರಬೇತಿ ನೀಡಲಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಅವರು ಇಂದು ಪೆಸಿಟ್ ಕಾಲೇಜಿನ ಪ್ರೇರಣ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಡೆದ ಜನಸೇವಕ್ ಸಮಾವೇಶದಲ್ಲಿ ಭಾಗವಹಿಸಿ ಗ್ರಾ.ಪಂ. ಚುನಾವಣೆಯಲ್ಲಿ ಗೆಲವು ಸಾಧಿಸಿದವರಿಗೆ ಸನ್ಮಾನಿಸಿ ಮಾತನಾಡಿದರು.
ಗ್ರಾಮ ಪಂಚಾಯ್ತಿ ವ್ಯವಸ್ಥೆ ನೂತನ ಸದಸ್ಯರಿಗೆ ತಿಳಿಸಲು 285 ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ಇವರಿಂದ ನೂತನ ಸದಸ್ಯರಿಗೆ ಪಂಚಾಯಿತಿ ವ್ಯವಸ್ಥೆ ಕುರಿತಾಗಿ ಸಮಗ್ರ ಮಾಹಿತಿ ಒದಗಿಸಲು ತರಬೇತಿ ನೀಡಲಾಗುವುದು ಎಂದರು.
ಚುನಾವಣೆಯಲ್ಲಿ ಗೆದ್ದರೆ ಕೆಲಸ ಮುಗಿದಂತಲ್ಲ. ಜನರ ಸವiಸ್ಯೆಗಳ ನಿವಾರಣೆಗೆ ಸ್ಪಂದಿಸಬೇಕು. ಅವರ ಸಮಸ್ಯೆಯನ್ನು ಆಲಿಸಿ ಕೆಲಸ ಮಾಡಿಕೊಟ್ಟು ಅವರ ಕುಟುಂಬದವರಲ್ಲಿ ಒಬ್ಬರೆನ್ನುವ ಭಾವನೆ ಮೂಡಿಸಬೇಕು. ಗ್ರಾಮದ ಹಿರಿಯರು, ಜನರನ್ನು ಭೇಟಿ ಮಾಡಿ ಊರಿಗೆ ಆಗಬೇಕಿರುವ ಕೆಲಸಗಳ ಬಗ್ಗೆ ಚರ್ಚಿಸಿ ಕಾರ್ಯಗತಗೊಳಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿಗಳ ಜನಸಂಖ್ಯೆಗೆ ಅನುಗುಣವಾಗಿ ಸ್ವಚ್ಚ ಭಾರತ್ ಯೋಜನೆಯಡಿ ಅನುದಾನ ನೀಡಲಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಗಳನ್ನು ಸ್ವಚ್ಚತೆಯಿಂದ ಇಟ್ಟುಕೊಳ್ಳಬೇಕು.ಗ್ರಾಮಗಳ ಅಂಗನವಾಡಿ ದುರಸ್ತಿ ಮತ್ತು ನೂತನ ಕಟ್ಟಡದ ಬಗ್ಗೆ ಗಮನಹರಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ನೀಡಲಾಗುತ್ತದೆ. ಅನುದಾನ ಸದ್ಬಳಕೆ ಮಾಡಿಕೊಳ್ಳಲು ಶಾಸಕರ ಮೂಲಕ ಅಂಗನವಾಡಿ ದುರಸ್ತಿ, ಹೊಸ ಕಟ್ಟಡಗಳ ಪಟ್ಟಿ ಕಳುಹಿಸಿ ಎಂದು ತಿಳಿಸಿದರು.
ರಾಜ್ಯದ ಎಲ್ಲ ಗ್ರಾಮ  ಪಂಚಾಯಿತಿಗಳಿಗೆ ಸೋಲಾರ್ ವ್ಯವಸ್ಥೆ ಕಲ್ಪಿಸಲಾಗುವುದು. ಇದರಿಂದ ರೈತರು, ಗ್ರಾಮಗಳ ಜನತೆಗೆ ಅನುಕೂಲವಾಗುತ್ತದೆ. ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಯುತ್ತದೆ. ಅಲ್ಲಿಯೇ ಅಗತ್ಯ ಕೆಲಸ ಮಾಡಿಸಿಕೊಳ್ಳಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಂಸದೆ ಶೋಭಾ ಕರದ್ಲಾಜೆ, ಎಂಎಸ್‍ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ರೈತ ಮೋರ್ಚ ಅಧ್ಯಕ್ಷ ಈರಣ್ಣ ಕಡಾಡಿ, ಶಾಸಕ ಕುಮಾರ್ ಬಂಗಾರಪ್ಪ, ಹೊಸನಗರ ಮಾಜಿ ಶಾಸಕ ಕೆ.ಜಿ.ಕುಮಾರ್ ಸ್ವಾಮಿ, ಶಾಸಕ ಅರಗ ಜ್ಞಾನೇಂದ್ರ, ಆಯನೂರು ಮಂಜುನಾಥ್, ಟಿ.ಡಿ ಮೇಘರಾಜ್ ಮತ್ತಿತರರು ಹಾಜರಿದ್ದರು.

Related posts

ಮಂಗಳೂರು ಕರಾರಸಾ ನಿಗಮದಿಂದ ಮಂತ್ರಾಲಯಕ್ಕೆ ಬಸ್ ಆರಂಭ

Times fo Deenabandhu

ಜನರ ಮನಸ್ಸಿನಲ್ಲಿ ಉತ್ತಮರೆನಿಸಿಕೊಳ್ಳದಿದ್ದರೆ ಪಕ್ಷದ ಮೇಲೆ ಪ್ರಭಾವ ಬೀರುತ್ತದೆ: ಎಂ.ಪಿ.ಕುಮಾರಸ್ವಾಮಿ

Times fo Deenabandhu

ತುಂಗಭದ್ರಾ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ಬರಬೇಕಾಗಿರುವ ಸೌಲಭ್ಯಗಳ ಬಗ್ಗೆ ಭೀತಿ ಹುಟ್ಟಿಸುತ್ತಿದ್ದಾರೆ-ಎನ್.ಟಿ.ರಂಗಪ್ಪ

Times fo Deenabandhu