January 21, 2021
Times of Deenabandhu
  • Home
  • ಮುಖ್ಯಾಂಶಗಳು
  • ಜ.16ರಿಂದ ಲಸಿಕೆ ಹಂಚಿಕೆ ಅಭಿಯಾನ: ಮೊದಲ ಹಂತದಲ್ಲಿ 3 ಕೋಟಿ ಜನರಿಗೆ ಕೊರೋನಾ ವ್ಯಾಕ್ಸಿನ್..
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಜ.16ರಿಂದ ಲಸಿಕೆ ಹಂಚಿಕೆ ಅಭಿಯಾನ: ಮೊದಲ ಹಂತದಲ್ಲಿ 3 ಕೋಟಿ ಜನರಿಗೆ ಕೊರೋನಾ ವ್ಯಾಕ್ಸಿನ್..

 

ನವದೆಹಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಹಂತದಲ್ಲಿದ್ದು, ಜನವರಿ 16 ರಿಂದ ಕೊರೋನಾ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಲಿದೆ. ಮೊದಲ ಹಂತದಲ್ಲಿ ಉಚಿತ ಲಸಿಕೆ ನೀಡಲಾಗುತ್ತದೆ. ಮೊದಲ ಹಂತದಲ್ಲಿ 3 ಕೋಟಿ ಜನರಿಗೆ ಕೊರೋನಾ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜತೆ ಕೋವಿಡ್ ಲಸಿಕೆ ಹಂಚಿಕೆ ಕುರಿತು ಚರ್ಚೆ ನಡೆಸಿದರು. ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಜನವರಿ 16ರಿಂದ ದೇಶದಲ್ಲಿ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಲಿದೆ. ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಅಮೇಲೆ ಫ್ರಂಟ್ ಲೈನ್ ವಾರಿಯರ್ಸ್ ಗೆ ಲಸಿಕೆ ನೀಡಲಾಗುತ್ತದೆ. ಈ ಮೂಲಕ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನ ನಡೆಯಲಿದೆ. ಲಸಿಕೆ ಅಭಿಯಾನ ಬೇರೆ ದೇಶಗಳಿಗೆ ಮಾದರಿಯಾಗಬೇಕು ಎಂದರು.

ವಿದೇಶಿ ಲಸಿಕೆ ನಂಬಿದ್ದರೇ ಬಹಳ ಕಷ್ಟವಾಗುತ್ತಿತ್ತು. 8,9 ತಿಂಗಳ ಹಿಂದೆ ಇದ್ದ ಭಯ ಈಗ ಇಲ್ಲ. ಜನ ಹೊರಗಡೆ ಬಂದು ಓಡಾಡುತ್ತಿದ್ದಾರೆ. ಚುನಾವಣೆ ಮಾದರಿಯಲ್ಲಿ ಕೊರೋನಾ ಲಸಿಕೆ ಹಂಚಿಕೆ ಅಭಿಯಾನ ಮಾಡುತ್ತೇವೆ ಬೂತ್ ಮಟ್ಟದ ಕಾರ್ಯತಂತ್ರ ಅನುಸರಿಸುತ್ತೇವೆ. ವಿಶ್ವದಲ್ಲಿ ಎರಡುವರೆ ಕೋಟಿ ಜನ ವ್ಯಾಕ್ಸಿನ್ ಪಡೆದಿದ್ದಾರೆ. ಲಸಿಕಾ ವೆಚ್ಚವನ್ನ ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ದೇಶೀಯವಾಗಿ ಉತ್ಪಾದಿಸಲಾದ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಬಳಕೆಗೆ ಅನುಮತಿ ದೊರಕಿದೆ. ಮೂರು ಕೋಟಿ ಜನರಿಗೆ ಲಸಿಕೆ ನೀಡಿದ ನಂತರ ನಾವು ಮತ್ತೊಮ್ಮೆ ಮಾತುಕತೆಗೆ ಕುಳಿತುಕೊಳ್ಳೋಣ ಎಂದು ಪ್ರಧಾನಿ ಹೇಳಿದರು.
ಕೊವಿಶೀಲ್ಡ್ ಪ್ರತಿ ಡೋಸ್ ನ ಬೆಲೆ 220 ರೂಪಾಯಿ. ರಿಯಲ್ ಟೈಮ್ ಲಸಿಕೆ ಅಂಕಿಅಂಶದ ಬಗ್ಗೆ ಕೋವಿನ್ ಆಯಪ್ ನಲ್ಲಿ ಮಾಹಿತಿ ಅಪ್ ಡೇಟ್ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದರು.

Related posts

ದಾಖಲೆ ರಹಿತ ಜನವಸತಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ವಿನಃ ಕಾರಣ ವಿಳಂಬ- ಶಾಸಕ ಕೆ.ಬಿ. ಅಶೋಕ್ ನಾಯ್ಕ್

Times fo Deenabandhu

ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ/ಜ. 03 ರಂದು ವಿದ್ಯುತ್ ವ್ಯತ್ಯಯ /ವಕ್ಫ್ ಸಂಸ್ಥೆಗಳ ಕಾರ್ಯಕಾರಿ ಸಮಿತಿ ರಚನೆ/ನವೀಕರಣಕ್ಕೆ ಪ್ರಸ್ತಾವನೆ

Times fo Deenabandhu

ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ……

Times fo Deenabandhu