January 21, 2021
Times of Deenabandhu
  • Home
  • ಪ್ರಧಾನ ಸುದ್ದಿ
  • ಕೃಷಿ ತಿದ್ದುಪಡಿ ಕಾಯ್ದೆ ವಿಚಾರ: ಕೇಂದ್ರದ ವಿರುದ್ಧ ಸುಪ್ರೀಂ ಅಸಮಾಧಾನ…
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

ಕೃಷಿ ತಿದ್ದುಪಡಿ ಕಾಯ್ದೆ ವಿಚಾರ: ಕೇಂದ್ರದ ವಿರುದ್ಧ ಸುಪ್ರೀಂ ಅಸಮಾಧಾನ…

ನವದೆಹಲಿ : ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ಏಕೆ ಪ್ರತಿಷ್ಠೆಯ ವಿಷಯವಾಗಿಸಿಕೊಂಡಿದೆ ಎಂದು ಅರ್ಥವಾಗುತ್ತಿಲ್ಲ. ಸರ್ಕಾರ ಕಾಯಿದೆ ತಡೆಹಿಡಿಯದಿದ್ದರೇ, ನ್ಯಾಯಾಲಯವೇ ಕಾಯಿದೆಗಳಿಗೆ ತಡೆಯಾಜ್ಞೆ ನೀಡಲಿದೆ ಎಂದು ಸುಪ್ರೀ ಕೋರ್ಟ್ ನ ಮುಖ್ಯ ನಾಯ್ಯಾಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಸುಪ್ರೀಂ ನ್ಯಾಯಪೀಠವು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಸರ್ಕಾರ ಅನುಚ್ಛೇದಗಳ ಬಗ್ಗೆ ಚರ್ಚೆ ನಡೆಸಲು ಬಯಸುತ್ತದೆ. ಆದರೆ, ರೈತರು ಇಡೀ ಕಾನೂನನ್ನು ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ. ರೈತರು ಮತ್ತು ಸರ್ಕಾರದ ನಡುವಿನ ಮಾತುಕತೆ ಪದೇ, ಪದೇ ಯಾಕೆ ವಿಫಲವಾಗುತ್ತಿದೆ ಎಂಬುದನ್ನು ನಾವು ವರದಿಗಳಿಂದ ಅರ್ಥ ಮಾಡಿಕೊಂಡಿದ್ದೇವೆ.

ಹೀಗಾಗಿ, ನಾವು ಕೇಂದ್ರದಿಂದ ನೇಮಕಗೊಂಡ ಸಮಿತಿಯ ಯಾವುದೇ ನಿರ್ಧಾರ ಕೈಗೊಳ್ಳುವ ವರೆಗೆ ಹಾಲಿ ಕಾನೂನು ಅನುಷ್ಠಾನಕ್ಕೆ ತಡೆ ನೀಡುತ್ತೇವೆ ಎಂದು ಸರ್ವೋಚ್ಛ ನ್ಯಾಯಾಲಯ ತ್ರಿಸದಸ್ಯ ಪೀಠ ತಿಳಿಸಿದೆ.
ಪ್ರತಿಭಟನೆಯಲ್ಲಿ ಹಿರಿಯ ನಾಗಕರಿರು ಮತ್ತು ಮಹಿಳೆಯರು ಸಹ ಭಾಗವಹಿಸುತ್ತಿದ್ದಾರೆ.

ಕಳೆದ ಬಾರಿ ಸರ್ಕಾರವನ್ನು ಇದೇ ವಿಷಯದ ಕುರಿತು ಪ್ರಶ್ನಿಸಿದರೂ ಉತ್ತರ ಬಂದಿಲ್ಲ. ಈಗ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚಳಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನು ಜಾರಿಗೊಳಿಸದೇ ಇದ್ದರೆ ಏನಾಗಲಿದೆ ಎಂದು ನ್ಯಾಯಾಲಯಕ್ಕೂ ಅರ್ಥವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ವಿರುದ್ಧ ಅಸಮಾಧಾನವ್ಯಕ್ತಪಡಿಸಿದೆ.

Related posts

ಆರೋಗ್ಯ ಇಲಾಖೆಯ ನೌಕರರ ಕಲ್ಯಾಣಕ್ಕಾಗಿ ಹಲವು ಯೋಜನೆ-ಮ.ಸ.ನಂಜುಂಡಸ್ವಾಮಿ

Times fo Deenabandhu

ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಮತಗಟ್ಟೆ ಏಜೆಂಟರಿಗೆ ತರಬೇತಿ : ಉಜ್ವಲ್ ಕುಮಾರ್ ಘೋಷ್

Times fo Deenabandhu

ಡಿ. 29. ಸಾಹಿತ್ಯ ಹುಣ್ಣಿಮೆ, 183 – ಕುವೆಂಪು ಸ್ಮರಣೆ: ಯುವಜನರಲ್ಲಿ ವಿಶ್ವ ಮಾನವ ಸಂದೇಶ ಕುರಿತ ವಿಚಾರ ಸಂಕಿರಣ

Times fo Deenabandhu