January 21, 2021
Times of Deenabandhu
ಮುಖ್ಯಾಂಶಗಳು ರಾಜ್ಯ ಸಿನಿಮಾ

ಅಂಬಾನಿ ವಿರುದ್ಧ ಗಂಭೀರ ಆರೋಪ ಮಾಡಿದ ನಟ ದರ್ಶನ್…..

 

ಬೆಂಗಳೂರು: ಮುಖೇಶ್​ ಅಂಬಾನಿ ಅವರು 5ಜಿ ಆರಂಭಿಸಿದ್ದಾರೆ. ಇದೊಂದು ದೊಡ್ಡ ಹಗರಣವೆಂದು ನನಗನಿಸುತ್ತಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದರೆ 5ಜಿ ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ಮೊಬೈಲ್​ಗಳಲ್ಲಿ 5ಜಿ ರನ್​ ಆಗಲು ಈ ರೀತಿ ಮಾಡುತ್ತಿರಬಹುದು. ಇದು ನನ್ನ ಅನಿಸಿಕೆಯಾಗಿದೆ. ಆದರೆ, ಯಾವುದೇ ಕಾರಣ ನಾವು ಓಟಿಟಿಗೆ ಕೊಡುವುದಿಲ್ಲ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರೋಪಿಸಿದರು.

ಓವರ್ ದಿ ಟಾಪ್‌ (ಓಟಿಟಿ) ವೇದಿಕೆಯಲ್ಲಿ ಸಿನಿಮಾ ಬಿಡುಗಡೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ತತ್ವ ಬಗ್ಗೆ ಫೇಸ್​ಬುಕ್​ ಲೈವ್​ನಲ್ಲಿ ಮಾತನಾಡಿದ ನಟ ದರ್ಶನ್​, ಚಿತ್ರಮಂದಿರಗಳನ್ನು ತೆರೆಯದಿದ್ದಕ್ಕೆ ಅಸಮಾಧಾನ ಹೊರಹಾಕಿ ಓಟಿಟಿ ಒಂದು ಸ್ಕ್ಯಾಮ್​ ಎಂದು ಟೀಕಿಸಿದರು.

ಲೈವ್​ ಆರಂಭಿಸಿದ ದರ್ಶನ್​, ಮೊದಲನೇಯದಾಗಿ ಕರೊನಾ ಹಿನ್ನೆಲೆ ಬರ್ತಡೇಗೆ ಬ್ರೇಕ್​ ಹಾಕಿದರು. ಬಳಿಕ ಅಭಿಮಾನಿಯೊಬ್ಬ ಓಟಿಟಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ದರ್ಶನ್​, ನಿರ್ಮಾಪಕರು ಎಲ್ಲಿಂದನೋ ದುಡ್ಡು ತರುತ್ತಾರೆ. ಜನರಿಗೆ ಮನರಂಜನೆ ಮಾಡುವ ಉದ್ದೇಶದಿಂದ ನಾವೆಲ್ಲ ಜೀವನವನ್ನು ಪಣಕ್ಕಿಟ್ಟು ಸಿನಿಮಾ ಮಾಡುತ್ತೇವೆ. ಹೀಗಾಗಿ ಸಿನಿಮಾವನ್ನು ಮೊಬೈಲ್​ನಲ್ಲೋ ಅಥವಾ ಟಿವಿಯಲ್ಲೋ ನೋಡಿದರೆ ಮಜಾ ಇರಲ್ಲ ಎಂದರು.

Related posts

ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತರ ಅನುಕೂಲಕ್ಕೆ ಸಹಾಯವಾಣಿ ಕಾರ್ಯಾರಂಭ – ಪವಿತ್ರಾ ರಾಮಯ್ಯ

Times fo Deenabandhu

ಗ್ರಾ.ಪಂ ಚುನಾವಣೆ: ಶಿವಮೊಗ್ಗದಲ್ಲಿ ಮತದಾರರ ತಮ್ಮ ಹಕ್ಕು ಚಲಾವಣೆ…

Times fo Deenabandhu

ರೈತರ ಹೋರಾಟ ವೈಚಾರಿಕತೆ, ಸೈದಾಂತಿಕ ಕಾನೂನಾತ್ಮಕವಾಗಬೇಕು-ಎಂ. ಶ್ರೀನಿವಾಸ

Times fo Deenabandhu