ಬೆಂಗಳೂರು: ಹಾವೇರಿಯಲ್ಲಿ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2021 ಫೆಬ್ರವರಿ 26, 27 ಮತ್ತು 28 ರಂದು ನಡೆಸಲು ನಿರ್ಧರಿಸಲಾಗಿದೆ. ಈ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳ ಸ್ವರೂಪ ಮತ್ತು ವಿಷಯಗಳನ್ನು ಆಯ್ಕೆ ಮಾಡಲು ನಾಡೋಜ ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಈ ಕೆಳಕಂಡ ವಿದ್ವಾಂಸರುಗಳನ್ನು ಆಯ್ಕೆ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಆಯ್ಕೆ ಸಮಿತಿಯ ಸದಸ್ಯರುಗಳು :
1) ಡಾ. ಪ್ರಧಾನ ಗುರುದತ್ತ
2) ಡಾ. ಬಿ.ವಿ. ವಸಂತಕುಮಾರ್
3) ಡಾ. ಕೆ.ವೈ. ನಾರಾಯಣಸ್ವಾಮಿ
4) ಡಾ. ಸರಜೂ ಕಾಟ್ಕರ್
5) ಶ್ರೀ ಸತೀಶ್ ಕುಲಕರ್ಣಿ
6) ಡಾ. ಜಯಶ್ರೀ ದಂಡೆ

