-ಡಾ.ಜಿ.ಪ್ರಶಾಂತ ನಾಯಕ್, ಸಾಹಿತಿಗಳು.
ಕಾಲ ಜಗತ್ತಿನ ಅತ್ಯಂತ ನಿಷ್ಠಾವಂತ ಕಾರ್ಯಕರ್ತ… ಯಾರ ಆದೇಶಕ್ಕೂ ಅನುಸಂಧಾನಕ್ಕೂ ಕಾಯದಂತೆ ಚಲನೆ… ಇಂದು ನಿನ್ನೆಗಳಾಗುವಷ್ಟೇ ಸರಾಗವಾಗಿ ನಾಳೆಗಳೂ ಕಳೆದುಹೋಗುತ್ತವೆ.. ಲೆಕ್ಕವಿಲ್ಲದಷ್ಟು ಹಗಲು ರಾತ್ರಿಗಳು ಅರಿವಿಲ್ಲದಂತೆ ಕಾಲದೊಳಗೇ ಕರಗಿಹೋಗಿವೆ.. ನಾವು ಹೀಗೇ ಅವೆಷ್ಟೋ ನಿಸರ್ಗ ಸತ್ಯಗಳಿಗೆ ಸಾಕ್ಷಿಯಾಗಿದ್ದೇವೆ.. ಮತ್ತೊಂದು ವರ್ಷ ದಿನಚರಿಯ ಲೆಕ್ಕಾಚಾರದೊಳಗೆ ಕಳೆದುಹೋಗುತ್ತಿದೆ.. ಹೊಸವರ್ಷ ಎಂದುಕೊಳ್ಳುವ ಗಳಿಗೆಗಳು ಮುಂದಿನವು… ಆಚರಣೆ ಸಂಭ್ರಮ ಸಡಗರ ಹೀಗೇ ಏನೇನೋ ಯೋಚನೆ ಯೋಜನೆ… ದಿನಗಳಲಿ ಕಾಲದಲಿ ಹೊಸತನವಿರುವ ಸಾಧ್ಯತೆಗಳಿಲ್ಲ ನಾವು ಹಾಗೆಂದುಕೊಳ್ಳುತ್ತೇವೆ.. ನಾವು ನಮ್ಮನ್ನೇ ಹಿಂದಿರುಗಿ ನೋಡಿಕೊಳ್ಳಬೇಕಿದೆ ಬದುಕು ಭಾವ ಚಿಂತನೆ ಉದ್ದೇಶ ಗುರಿ ಇತ್ಯಾದಿ.. ಜೊತೆಜೊತೆಗೆ ಸರಿ ತಪ್ಪುಗಳ ಅವಲೋಕನ ತಪ್ಪುಗಳಿದ್ದರೆ ತಿದ್ದಿಕೊಂಡು ಹೊಸಬರಾಗಬೇಕು… ಒಳಿತುಗಳ ಬೆಳಕಿನೆಡೆಗೆ ನೆಡೆಯಬೇಕು ನಮ್ಮ ಬಗೆಗೆ ಹೆಮ್ಮೆ ಪಡುವ ಅವಕಾಶ ಮೊದಲು ನಮ್ಮದಾಗಬೇಕಲ್ಲವೇ?!.
