ಚೆನ್ನೈ: ಡಿಸೆಂಬರ್ 31 ರಂದು ಹೊಸ ಪಕ್ಷ ಘೋಷಣೆ ಮಾಡುವುದಾಗಿ ಹೇಳಿದ್ದ ನಟ ಸೂಪರ್ ಸ್ಟಾರ್ ರಜಿನಿಕಾಂತ್ ಇದೀಗ ತಮ್ಮ ನಿರ್ಧಾರವನ್ನ ಬದಲಿಸಿದ್ದು ರಾಜಕೀಯದಿಂದ ಹಿಂದೆ ಸರಿದಿದ್ದಾರೆ.
ಹೌದು ಆರೋಗ್ಯ ದೃಷ್ಠಿಯಿಂದ ಸದ್ಯಕ್ಕೆ ರಾಜಕೀಯಕ್ಕೆ ಬರುವುದಿಲ್ಲ ಎಂದು ನಟ ಸೂಪರ್ ಸ್ಟಾರ್ ರಜಿನಿಕಾಂತ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮೂರು ಪುಟಗಳ ವಿವರಣೆ ನೀಡಿ ಅದನ್ನು ಟ್ವೀಟ್ಗೆ ಅಪ್ಲೋಡ್ ಮಾಡಿದ್ದಾರೆ. ಈ ವೇಳೆ ತಮಿಳುನಾಡು ಜನರ ಕ್ಷಮೆಯಾಚಿಸಿದ್ದಾರೆ.
ಅನಾರೋಗ್ಯದ ಕಾರಣ ಮುಂದಿಟ್ಟುರುವ ಅವರು, ಸದ್ಯ ಚುನಾವಣಾ ಕಣಕ್ಕೆ ಇಳಿದು ಕೆಲಸಮಾಡಲಾರೆ. ಹೀಗಾಗಿ ರಾಜಕೀಯದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ರಜಿನಿಕಾಂತ್ ಘೋಷಿಸಿದ್ದಾರೆ. ಸದ್ಯಕ್ಕೆ ರಾಜಕೀಯಕ್ಕೆ ಬರುವುದಕ್ಕೆ ಆಗುವುದಿಲ್ಲ. ಆರೋಗ್ಯದ ದೃಷ್ಠಿಯಿಂದ ಪಕ್ಷ ಕಟ್ಟಲು ಆಗುವುದಿಲ್ಲ. ನಿಮ್ಮನ್ನ ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ ಎಂದು ನಟ ರಜಿನಿಕಾಂತ್ ತಿಳಿಸಿದ್ದಾರೆ.
ಈ ಮೂಲಕ 70 ವರ್ಷ ವಯಸ್ಸಿನ ನಟ ರಜನಿಕಾಂತ್ ಅವರು ಸಕ್ರಿಯ ರಾಜಕೀಯ ಪ್ರವೇಶಕ್ಕೆ ಮುನ್ನ ದೊಡ್ಡ ಬಾಂಬ್ ಹಾಕಿದ್ದಾರೆ. ಆರೋಗ್ಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜನವರಿ 21,2021ರಂದು ಹೊಸ ರಾಜಕೀಯ ಬದುಕು ಆರಂಭ, ಡಿಸೆಂಬರ್ 31ರಂದು ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡುವುದಾಗಿ ರಜನಿಕಾಂತ್ ಹೇಳಿದ್ದರು.
