January 21, 2021
Times of Deenabandhu
  • Home
  • ಮುಖ್ಯಾಂಶಗಳು
  • ICCಅವಾರ್ಡ್ಸ್ 2020: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಗೆ ‘ದಶಕದ ಏಕದಿನ ಕ್ರಿಕೆಟಿಗ’ ಗರಿಮೆ..
ಕ್ರೀಡೆ ದೇಶ ಮುಖ್ಯಾಂಶಗಳು

ICCಅವಾರ್ಡ್ಸ್ 2020: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಗೆ ‘ದಶಕದ ಏಕದಿನ ಕ್ರಿಕೆಟಿಗ’ ಗರಿಮೆ..

ಮುಂಬೈ: ಐಸಿಸಿ ದಶಕದ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದ್ದು, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ದಶಕದ ಏಕದಿನ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಒಟ್ಟು 12,040 ರನ್, ಟೆಸ್ಟ್ ನಲ್ಲಿ 7,318 ರನ್ ಹಾಗೂ ಟಿ20 ಕ್ರಿಕೆಟ್ ನಲ್ಲಿ 2,928 ರನ್ ಪೇರಿಸಿದ್ದಾರೆ. ಕಳೆದ ದಶಕದಲ್ಲಿ ಕೊಹ್ಲಿ 66 ಶತಕಗಳನ್ನು ಗಳಿಸಿದ್ದಾರೆ. ಇನ್ನು 94 ಅರ್ಧ ಶತಕ ಸಿಡಿಸಿರುವ ಅವರು ಒಟ್ಟಾರೆ 20,396 ರನ್ ಪೇರಿಸಿದ್ದಾರೆ.

ಇನ್ನು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಸ್ಪಿರಿಟ್ ಆಫ್ ದಿ ಕ್ರಿಕೆಟ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಈ ಮಧ್ಯೆ ಮಹಿಳಾ ಪ್ರಶಸ್ತಿಯಲ್ಲಿ ಆಸ್ಟ್ರೇಲಿಯಾದ ಎಲಿಸ್ ಪೆರ್ರಿ ಕ್ಲೀನ್ ಸ್ವೀಪ್ ಸಾಧಿಸಿದ್ದಾರೆ. ದಶಕದ ಮಹಿಳಾ ಆಟಗಾರ್ತಿ, ದಶಕದ ಏಕದಿನ ಆಟಗಾರ್ತಿ, ದಶಕದ ಟಿ 20 ಆಟಗಾರ್ತಿ ಎಲ್ಲಾ ಪ್ರಶ್ತಿಗಳು ಪೆರ್ರಿ ಪಾಲಾಗಿದೆ.

ದಶಕದ ಟೆಸ್ಟ್ ಆಟಗಾರ ಪ್ರಶಸ್ತಿಗೆ ಸ್ಟೀವ್ ಸ್ಮಿತ್, ದಶಕದ ಟಿ20 ಆಟಗಾರ ಪ್ರಶಸ್ತಿಗೆ ರಶೀದ್ ಖಾನ್ ಭಾಜನರಾಗಿದ್ದಾರೆ.

Related posts

ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ/ಗಣ್ಯರಿಂದ ಸಂಕ್ರಾತಿ ಹಬ್ಬದ ಶುಭಾಶಯ/ಪ್ರಶಸ್ತಿಗೆ ಅರ್ಜಿ ಆಹ್ವಾನ

Times fo Deenabandhu

ಕನ್ನಡಿಗನಿಗೆ ಕನ್ನಡ ಧ್ವಜ ಭಗವಾಧ್ವಜಕ್ಕೂ ಮಿಗಿಲು-ಹೆಚ್.ಡಿಕೆ…..

Times fo Deenabandhu

ವರ್ಷದ ಕೊನೆಯ ‘ಮನ್ ಕೀ ಬಾತ್’ ನಲ್ಲಿ ಕನ್ನಡಿಗರ ಕಾರ್ಯ ಶ್ಲಾಘಿಸಿದ ಪ್ರಧಾನಿ ಮೋದಿ….

Times fo Deenabandhu