January 21, 2021
Times of Deenabandhu
ಕ್ರೈಮ್ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ಖೋಟಾನೋಟು ಮುದ್ರಣ, ಚಲಾವಣೆ ದಂಧೆ ಬೆಳಕಿಗೆ: ಮೂವರ ಬಂಧನ

ಬೆಂಗಳೂರು: ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಖೋಟಾನೋಟು ಮುದ್ರಣ ಮತ್ತು ಚಲಾವಣೆಯ ದಂಧೆ ಬೆಳಕಿಗೆ ಬಂದಿದ್ದು ಈ ಸಂಬಂಧ ನಗರದ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ದಂಧೆಯಲ್ಲಿ ತೊಡಗಿದ್ದ ಮೂವರನ್ನ ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಖೋಟಾನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಬೃಹತ್ ಜಾಲವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜಮಾಲ್, ಇಮ್ರಾನ್, ಮುಬಾರಕ್ ಬಂಧಿತರು ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಪಾದರಾಯನಪುರದ ಅರಾಫತ್ ನಗರದ ನಿವಾಸಿಗಳು ಎನ್ನಲಾಗಿದೆ.

ಲಾಕ್ ಡೌನ್ ವೇಳೆಯೇ ಖೋಟಾನೋಟುಗಳನ್ನು ಮುದ್ರಣ ಆರಂಭಿಸಿದ್ದ ಆರೋಪಿಗಳು, ಬಳಿಕ ಚಲಾವಣೆ ಆರಂಭಿಸಿದ್ದರು. ಜಮಾಲ್ ಆಟೋ ಚಾಲಕರೊಬ್ಬರಿಗೆ  100 ರೂ. ಖೋಟಾನೋಟು ನೀಡಿದ್ದ. ಖೋಟಾನೋಟು ನೋಡಿ ಅನುಮಾನಗೊಂಡ ಆಟೋ ಚಾಲಕ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಕರೆತಂದು ಮಾಹಿತಿ ನೀಡಿದ್ದರು.

ಆಟೋಚಾಲಕನ ಮಾಹಿತಿ ಆಧರಿಸಿ ಜಮಾಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಖೋಟಾನೋಟು ಮುದ್ರಣ ಮಾಡಿ ಚಲಾವಣೆ ಮಾಡುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಬಳಿಕ ಜಮಾಲ್ ನೀಡಿದ ಮಾಹಿತಿ ಮೇರೆಗೆ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ದಾಳಿ ನಡೆಸಿ ಇಮ್ರಾನ್, ಮುಬಾರಕ್ ನನ್ನ ಬಂಧಿಸಿದ್ದಾರೆ. ಪ್ರಿಂಟರ್ ಮೂಲಕ 100 ರೂ ಮುಖಬೆಲೆಯ ಖೋಟಾನೋಟು ಮುದ್ರಿಸುತ್ತಿದ್ದು, ಸುಮಾರು 20 ಶೀಟ್ ಗಳನ್ನು ಪೊಲೀಶರು ವಶಕ್ಕೆ ಪಡೆದಿದ್ದಾರೆ.

Related posts

ಪೊಲೀಸ್  ಠಾಣೆ ಎದುರು ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ….

Times fo Deenabandhu

ಬಿ.ಲೋಕೇಶನಾಯ್ಕಗೆ ಪಿಎಚ್‍ಡಿ ಪದವಿ

Times fo Deenabandhu

ಡಿ. 13ರಂದು ಜಿಲ್ಲೆಯ ಸಾಧಕರ ಸ್ಮರಣೆಯಲ್ಲಿ ಖ್ಯಾತ ನ್ಯಾಯವಾದಿ ಮಹಿಷಿ ನರಸಿಂಹಮೂರ್ತಿ ಅವರ ಬಹುಮುಖಿ ಕೊಡುಗೆ ಅನಾವರಣ

Times fo Deenabandhu