January 21, 2021
Times of Deenabandhu
  • Home
  • ಮುಖ್ಯಾಂಶಗಳು
  • ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಕೈಕೊಟ್ಟ ವಧು : ಮುಂದೇನಾಯ್ತು ಗೊತ್ತೆ…?
ಕ್ರೈಮ್ ದೇಶ ಮುಖ್ಯಾಂಶಗಳು

ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಕೈಕೊಟ್ಟ ವಧು : ಮುಂದೇನಾಯ್ತು ಗೊತ್ತೆ…?

ಹೈದರಾಬಾದ್: ಇನ್ನೇನು ವರ ವಧುವಿಗೆ ತಾಳಿ ಕಟ್ಟುವಷ್ಟರಲ್ಲಿ ವಧು ಮಧುವೆ ಇಷ್ಟವಿಲ್ಲ ಎಂದು ಹೇಳಿ ಎಂದು ನಿಂತು ವಿವಾಹ ಮುರಿದು ಬಿದ್ದ ಘಟನೆ. ತೆಲಂಗಾಣದ ಮೆಹಬೂಬಬಾದ್ ಜಿಲ್ಲೆಯಲ್ಲಿ ನಡೆದಿದೆ.

ನಡೆಯಬೇಕಿದ್ದ ವಿವಾಹ ಗೊಂದಲದ ಗೂಡಾಗಿ ಕೊನೆಗೆ ವರ ಅದೇ ಮಂಟಪದಲ್ಲಿ ಬೇರೆ ಯುವತಿಯನ್ನು ವರಿಸಿದ ಪ್ರಸಂಗ ನಡೆದಿದೆ. ಮೆಹಬೂಬಬಾದ್ನ ಮರಿಪಾದ ಮುನ್ಸಿಪಾಲಿಟಿ ಕೇಂದ್ರದ ಮದುವೆ ಮಂಟಪದಲ್ಲಿ ಮರಿಪಾದ ಮಂಡಲದ ಗುಂಡೆಪುಡಿ ನಿವಾಸಿ ಯಾಮಿನಿ ಕೃಷ್ಣಮೂರ್ತಿ ಹಾಗೂ ಕುರವಿ ಮಂಡಲದ ಕಂಪೆಲ್ಲಿ ನಿವಾಸಿ ರಾಜೇಶ್ಗೂ ಹಿರಿಯರು ಮದುವೆ ನಿಶ್ಚಯಿಸಿದ್ದರು.

ನಿಶ್ಚಯದಂತೆಯೇ ಮದುವೆ ಮಂಟಪದಲ್ಲಿ ಗುರುವಾರ ವಿವಾಹ ಕಾರ್ಯಕ್ರಮ ಜರುಗುತ್ತಿತ್ತು. ಬಂಧುಬಳಗ, ಅತಿಥಿಗಳೆಲ್ಲರೂ ಭಾಗಿಯಾಗಿದ್ದರು. ಮಂಟಪದಲ್ಲಿ ವಧು-ವರ ಕುಳಿತಿರುವಾಗ, ಪುರೋಹಿತರು ಪೂಜೆ ಪುನಸ್ಕಾರಗಳನ್ನು ನಡೆಸಿ ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಎದ್ದು ನಿಂತ ವಧು ನನಗೆ ಮದುವೆ ಇಷ್ಟವಿಲ್ಲ ಎಂದು. ಬಳಿಕ ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾಳೆ.
ವಧುವಿನ ಮಾತು ಕೇಳಿ ಮದುವೆ ಮಂಟಪಕ್ಕೆ ಬಂದ ಪೊಲೀಸರು ಆಕೆಯನ್ನು ಅಲ್ಲಿಂದ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಂಪೆಲ್ಲಿ ಯುವಕನನ್ನು ಪ್ರೀತಿಸುತ್ತಿದ್ದು, ಆತನನ್ನೇ ಮದುವೆ ಆಗಲು ಬಯಸಿದ್ದೇನೆ. ಈ ವಿಚಾರ ಮನೆಯವರಿಗೆ ತಿಳಿದಿದ್ದರಿಂದ ನನಗೂ ಹೇಳದೆ ಬಲವಂತವಾಗಿ ಮದುವೆ ಮಾಡಲು ಮುಂದಾದರು ಎಂದು ಆರೋಪಿಸಿದ್ದಾಳೆ.
ಇತ್ತ ವಧುವಿನ ದಿಢೀರ್ ನಿರ್ಧಾರದಿಂದ ಶಾಕ್ ಆದ ವರ ತನ್ನ ಸಂಬಂಧಿಕರಲ್ಲೇ ಓರ್ವ ಯುವತಿಯನ್ನು ಅದೇ ಮಂಟಪದಲ್ಲಿ ಮದುವೆಯಾಗಿದ್ದಾನೆ. ವಿವಾಹಕ್ಕೆ ಬಂದಿದ್ದ ಅತಿಥಿಗಳು ನವವಧು-ವರರಿಗೆ ಆಶೀರ್ವದಿಸಿದರು.

Related posts

ಆಸ್ತಿ ತೆರಿಗೆ ಹಾಗೂ ಹೊಸ ನೀರಿನ ಸಂಪರ್ಕಕ್ಕೆ ದರ ಹೆಚ್ಚಳ ಮಾಡಿ ನಾಗರಿಕರಿಗೆ ಬರೆ – ಹೆಚ್.ಸಿ.ಯೋಗೀಶ್

Times fo Deenabandhu

ನಗರದೆಲ್ಲೆಡೆ ಇಂದು ವೈಕುಂಠ ಏಕಾದಶಿ ಸಂಭ್ರಮಾಚರಣೆ…

Times fo Deenabandhu

ಕರಕುಚ್ಚಿಯಲ್ಲಿ ಸಾಮರಸ್ಯ ಮೆರೆದ ಕಕ್ಕಯ್ಯ: ಶಿವಸಂಚಾರ ತಂಡದಿಂದ ಡೋಹರ ಕಕ್ಕಯ್ಯ ನಾಟಕ ಪ್ರದರ್ಶನ                   

Times fo Deenabandhu