January 21, 2021
Times of Deenabandhu
  • Home
  • ಮುಖ್ಯಾಂಶಗಳು
  • ಮುಂದಿನವಾರ ‘ಆಸ್ಟ್ರಾಝೆನೆಕಾ’ ಕೊರೋನಾ ಲಸಿಕೆ ಭಾರತದಲ್ಲಿ ಬಳಕೆಗೆ ಅನುಮತಿ ಸಾಧ್ಯತೆ…
ಆರೋಗ್ಯ ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಮುಂದಿನವಾರ ‘ಆಸ್ಟ್ರಾಝೆನೆಕಾ’ ಕೊರೋನಾ ಲಸಿಕೆ ಭಾರತದಲ್ಲಿ ಬಳಕೆಗೆ ಅನುಮತಿ ಸಾಧ್ಯತೆ…

ನವದೆಹಲಿ: ಮುಂದಿನವಾರ ‘ಆಸ್ಟ್ರಾಝೆನೆಕಾ’ ಕೊರೋನಾ ಲಸಿಕೆ ಭಾರತದಲ್ಲಿ ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹೌದು, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ ಐಐ) ಅಧಿಕಾರಿಗಳು ಕೇಳಿದ ಹೆಚ್ಚುವರಿ ದತ್ತಾಂಶಗಳನ್ನು ಸಲ್ಲಿಸಿದ ನಂತರ ಮುಂದಿನ ವಾರ ಆಕ್ಸ್ ಫರ್ಡ್/ಆಸ್ಟ್ರಾಝೆನೆಕಾ ಅವರ ಕೊರೊನಾವೈರಸ್ ಲಸಿಕೆಯನ್ನು ಭಾರತ ಅನುಮೋದಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಈ ಎರಡೂ ಸಹ ಪ್ರಸ್ತುತ ಭಾರತದಲ್ಲಿ ತಮ್ಮ ಲಸಿಕೆ ಯನ್ನು ಅಭ್ಯರ್ಥಿಗಳ ಮೇಲೆ ಫೇಸ್ 3 ಪ್ರಯೋಗಗಳನ್ನು ನಡೆಸುತ್ತಿವೆ.

ಈ ನಡುವೆ ಫಿಜರ್ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನಂತರ, ಭಾರತ್ ಬಯೋಟೆಕ್ ಭಾರತದಲ್ಲಿ ತನ್ನ ಕೋವಿಡ್ ಲಸಿಕೆಗೆ ತುರ್ತು ಬಳಕೆ ದೃಢೀಕರಣವನ್ನು ಕೋರಿದ ಭಾರತದ ಮೂರನೇ ಔಷಧವಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಸಂಸ್ಥೆ ದೇಶೀಯವಾಗಿ ಅಭಿವೃದ್ಧಿಪಡಿಸಿದೆ.

Related posts

ದೇಶದ ಪ್ರಥಮ ಚಾಲಕ ರಹಿತ ಮೆಟ್ರೋ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಚಾಲನೆ..

Times fo Deenabandhu

ಕುವೆಂಪು ವಿವಿ: ಭರದಿಂದ ನಡೆದ ಸ್ನಾತಕೋತ್ತರ ಪದವಿ ಪ್ರವೇಶಾತಿ

Times fo Deenabandhu

ಒಳಒಪ್ಪಂದ ರಾಜಕಾರಣ : ಮಾಜಿ ಸಿಎಂಗಳಿಬ್ಬರ ನಡುವೆ ವಾಕ್ಸಮರ….

Times fo Deenabandhu