January 21, 2021
Times of Deenabandhu
  • Home
  • ಮುಖ್ಯಾಂಶಗಳು
  • ಪಾಗಲ್ ಪ್ರೇಮಿ ಹುಚ್ಚಾಟ: ಹಾಡಹಗಲೇ ಯುವತಿ ಮೇಲೆ ತಲ್ವಾರ್ ನಿಂದ ಹಲ್ಲೆ…
ಕ್ರೈಮ್ ಜಿಲ್ಲೆ ಮುಖ್ಯಾಂಶಗಳು ರಾಜ್ಯ

ಪಾಗಲ್ ಪ್ರೇಮಿ ಹುಚ್ಚಾಟ: ಹಾಡಹಗಲೇ ಯುವತಿ ಮೇಲೆ ತಲ್ವಾರ್ ನಿಂದ ಹಲ್ಲೆ…

ಹುಬ್ಬಳ್ಳಿ:  ನಡುರಸ್ತೆಯಲ್ಲೇ ಯುವತಿ ಮೇಲೆ ಪಾಗಲ್ ಪ್ರೇಮಿಯೊಬ್ಬ ತಲವಾರಿನಿಂದ  ಹಲ್ಲೆ ಮಾಡಿದ್ದು ಈ ಘಟನೆಯಿಂದ ಹುಬ್ಬಳ್ಳಿ ಜನತೆ ಬೆಚ್ಚಿ ಬಿದ್ದಿದ್ದಾರೆ.

ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಈ ಘಟನೆ ಹಾಡಹಗಲೇ  ನಡೆದಿದೆ. ದೇಶಪಾಂಡೆ ನಗರದ ನಡು ರಸ್ತೆಯಲ್ಲೇ ಪಾಗಲ್ ಪ್ರೇಮಿ ಯುವತಿ ಮೇಲೆ ತಲವಾರಿನಿಂದ ಮನಬಂದಂತೆ ದಾಳಿ ನಡೆಸಿದ್ದಾನೆ. ಯುವತಿಯ ತಲೆಗೆ ತಲ್ವಾರ್ ನಿಂದ ಹಲ್ಲೆ ಮಾಡಿದ್ದು  ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ದಾಳಿ ನಡೆಸಿದ ಪಾಗಲ್ ಪ್ರೇಮಿಯನ್ನು ಕುಂದಗೋಳ ತಾಲೂಕಿನ ರಾಮನು ಗ್ರಾಮದವನಾಗಿದ್ದು, ದಾಳಿಗೊಳಗಾದ ಯುವತಿ ಧಾರವಾಡ ಜಿಲ್ಲೆಯ ಮೊರಬ ಗ್ರಾಮದವರು ಎಂದು ಗುರುತಿಸಲಾಗಿದೆ. ಸದ್ಯ ಸ್ಥಳಕ್ಕೆ  ಉಪನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಮುಷ್ಕರಕ್ಕೆ ಬಗ್ಗದ ಸರ್ಕಾರ: ನಾಳೆಯಿಂದ ಉಪವಾಸ ಸತ್ಯಾಗ್ರಹಕ್ಕೆ ಸಾರಿಗೆ ನೌಕರರು ತೀರ್ಮಾನ…

Times fo Deenabandhu

ಪೊಲೀಸ್  ಠಾಣೆ ಎದುರು ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ….

Times fo Deenabandhu

ಸಿದ್ದರಾಮಯ್ಯಗೆ ದೇಶದ ಸಂಸ್ಕೃತಿ ಗೊತ್ತಿಲ್ಲ- ಸಚಿವ ಕೆ.ಎಸ್ ಈಶ್ವರಪ್ಪ

Times fo Deenabandhu