January 21, 2021
Times of Deenabandhu
ಕ್ರೀಡೆ ದೇಶ ಮುಖ್ಯಾಂಶಗಳು ವಿದೇಶ

ಮೊದಲ ಟೆಸ್ಟ್: ಆಸೀಸ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು….

 

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲನುಭವಿಸಿದೆ. ಆಸ್ಟ್ರೇಲಿಯಾ ತಂಡದ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ಇನ್ನೂ ಮೂರು ದಿನಗಳು ಬಾಕಿ ಇರುವಾಗಲೇ ಸೋಲನುಭವಿಸಿದೆ.

ಶನಿವಾರ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ತಂಡದ ಮೇಲೆ ಜಾಶ್‌ ಹೇಝಲ್‌ವುಡ್‌(8ಕ್ಕೆ5) ಹಾಗೂ ಪ್ಯಾಟ್‌ ಕಮಿನ್ಸ್ (24ಕ್ಕೆ 4 ) ಅವರ ಮಾರಕ ದಾಳಿ ನಡೆಸಿದರು. ಆ ಮೂಲಕ ಕೊಹ್ಲಿ ಪಡೆ 21.2 ಓವರ್‌ಗಳಿಗೆ ಕೇವಲ 36 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಆಸ್ಟ್ರೇಲಿಯಾ ತಂಡಕ್ಕೆ 90 ರನ್‌ ಗುರಿ ನೀಡಿತು.

ದ್ವಿತೀಯ ಇನ್ನಿಂಗ್ಸ್ ನಲ್ಲಿ ಮಯಾಂಕ್‌ ಅಗರ್ವಾಲ್‌ 9 ರನ್‌, ವಿರಾಟ್‌ ಕೊಹ್ಲಿ 4 ರನ್‌, ಪೃಥ್ವಿ ಶಾ 4 ರನ್ ‌ಗಳಿಸಿದರೆ‌, ಚೇತೇಶ್ವರ ಪೂಜಾರ ಹಾಗೂ ರಹಾನೆ ಶೂನ್ಯಕ್ಕೆ ಔಟ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮಧ್ಯಮ ಕ್ರಮಾಂಕದ ಆಟಗಾರರೂ ಸಹ ಅಂತಹ ಪ್ರದರ್ಶನ ನೀಡಲಿಲ್ಲ. ಹನುಮ ವಿಹಾರಿ 8 ಹಾಗೂ ವೃದ್ದಿಮಾನ್‌ ಸಹಾ 4 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು.

ಜಾಶ್‌ ಹೇಝಲ್‌ವುಡ್‌ ದ್ವಿತೀಯ ಇನಿಂಗ್ಸ್ ನಲ್ಲಿ ಒಟ್ಟು ಐದು ಓವರ್‌ ಬೌಲಿಂಗ್‌ ಮಾಡಿ, ಕೇವಲ 8 ರನ್‌ ನೀಡಿ 5 ವಿಕೆಟ್ ಪಡೆದು ಟೀಂ ಇಂಡಿಯಾ ಪಾಲಿಗೆ ಮುಳುವಾದರು. ಹಾಗೆಯೇ ಪ್ಯಾಟ್‌ ಕಮಿನ್ಸ್ 10.2 ಓವರ್‌ಗಳಿಗೆ 21 ರನ್‌ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು.

ನಂತರ 90 ರನ್‌ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ 21 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ 93 ರನ್‌ ಗಳಿಸಿ, 8 ವಿಕೆಟ್‌ಗಳ ಗೆಲುವಿನ ನಗೆ ಬೀರಿತು. ಮ್ಯಾಥ್ಯೂ ವೇಡ್‌ 33 ರನ್‌ ಗಳಿಸಿ ಔಟಾದರೆ, ಜೋ ಬರ್ನ್ಸ್ ಅಜೇಯ 51 ರನ್‌ ಗಳಿಸಿ ತಂಡವನ್ನು ಬಹುಬೇಗ ಗೆಲುವಿನ ದಡ ಸೇರಿಸಿದರು.
ಸ್ಕೋರ್ ವಿವರ:
ಭಾರತ
ಪ್ರಥಮ ಇನಿಂಗ್ಸ್‌: 244/10 (93.1 ಓವರ್)
ವಿರಾಟ್‌ ಕೊಹ್ಲಿ-74
ಚೇತೇಶ್ವರ್ ಪೂಜಾರಾ-43
ಅಜಿಂಕ್ಯ ರಹಾನೆ-42
ಬೌಲಿಂಗ್‌: ಮಿಚೆಲ್‌ ಸ್ಟಾರ್ಕ್ 53ಕ್ಕೆ 4, ಪ್ಯಾಟ್‌ ಕಮಿನ್ಸ್ 48ಕ್ಕೆ 3, ಜಾಶ್‌ ಹೇಝಲ್‌ವುಡ್‌ 47ಕ್ಕೆ 1, ನೇಥನ್‌ ಲಯಾನ್‌ 68ಕ್ಕೆ 1.
ದ್ವಿತೀಯ ಇನಿಂಗ್ಸ್: 39/9 (ಡಿ) ( 21.2 ಓವರ್)
ಮಯಾಂಕ್‌ ಅಗರ್ವಾಲ್-9
ಹನುಮ ವಿಹಾರಿ-8
ವಿರಾಟ್‌ ಕೊಹ್ಲಿ-4
ಬೌಲಿಂಗ್‌: ಜಾಶ್‌ ಹೇಝಲ್‌ವುಡ್‌ 8ಕ್ಕೆ 5, ಪ್ಯಾಟ್‌ ಕಮಿನ್ಸ್ 21ಕ್ಕೆ 4
ಆಸ್ಟ್ರೇಲಿಯಾ
ಪ್ರಥಮ ಇನಿಂಗ್ಸ್: 191/10 (72.1)
ಟಿಮ್‌ ಪೇಯ್ನ್-73*
ಮಾರ್ನಸ್‌ ಲಾಬುಶೇನ್-47
ಬೌಲಿಂಗ್‌: ಆರ್‌ ಅಶ್ವಿನ್ 55ಕ್ಕೆ 4, ಉಮೇಶ್‌ ಯಾದವ್ 40ಕ್ಕೆ 3,‌ ಜಸ್‌ಪ್ರಿತ್‌ ಬುಮ್ರಾ 52ಕ್ಕೆ 2, ಮೊಹಮ್ಮದ್‌ ಶಮಿ 41ಕ್ಕೆ 0
ದ್ವಿತೀಯ ಇನಿಂಗ್ಸ್: 93/2 (21 ಓವರ್)
ಮ್ಯಾಥ್ಯೂ ವೇಡ್-33
ಜೋ ಬರ್ನ್ಸ್-51*
ಮಾರ್ನಸ್‌ ಲಾಬುಶೇನ್-6
ಸ್ಟೀವನ್‌ ಸ್ಮಿತ್-1*
ಬೌಲಿಂಗ್‌: ಆರ್‌ ಅಶ್ವಿನ್‌ 16ಕ್ಕೆ 1, ಜಸ್‌ಪ್ರಿತ್‌ ಬುಮ್ರಾ 27ಕ್ಕೆ 0, ಉಮೇಶ್‌ ಯಾದವ್‌ 49ಕ್ಕೆ 0

Related posts

ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿ- ಸಿಎಂ ಬಿ.ಎಸ್.ಯಡಿಯೂರಪ್ಪ…!

Times fo Deenabandhu

ಹೆಣ್ಣು ಮಗುವಿಗೆ ಜನ್ಮ ನೀಡಿದ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ…..

Times fo Deenabandhu

ರೈತ ಹೋರಾಟ ಪ್ರಾಯೋಜಿತ ಚಳವಳಿಯಲ್ಲ. ಅದು ಸ್ವತಂತ್ರ ಚಳವಳಿ-ಹೆಚ್.ಆರ್.ಬಸವರಾಜಪ್ಪ….

Times fo Deenabandhu