Times of Deenabandhu
ಮುಖ್ಯಾಂಶಗಳು ರಾಜ್ಯ ಸಿನಿಮಾ

ನಟಿ ಸಂಜನಾಗೆ ಷರತ್ತುಬದ್ದ ಜಾಮೀನು ಮಂಜೂರು…..

ಬೆಂಗಳೂರು: ಡ್ರಗ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ಸಂಜನಾ ಗಲ್ರಾನಿ ಅವರಿಗೆ ಹೈಕೋರ್ಟ್‌ ಷರತ್ತಬದ್ಧ ಜಾಮೀನು ಮಂಜೂರು ನೀಡಿದೆ.

ಡ್ರಗ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಅವರನ್ನು ಬಂಧಿಸಲಾಗಿತ್ತು. ತಮಗೆ ಆರೋಗ್ಯ ಸರಿ ಇರದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಜಾಮೀನು ನೀಡುವಂತೆ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿದ್ದ ಸಂಜನಾ ಗಲ್ರಾನಿ ಅವರ ಮನವಿಯನ್ನು ನ್ಯಾಯಾಪೀಠ ಪುರಸ್ಕಾರ ಮಾಡಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಕೋರ್ಟ್ ಈ ಕೆಳಗಿನ ಷರತ್ತುಗಳನ್ನು ವಿಧಿಸಿತೀರ್ಪು ನೀಡಿದೆ. ಇದೇ ವೇಳೆ ನ್ಯಾಯಾಲಯ ‘₹3 ಲಕ್ಷ ಮೊತ್ತಕ್ಕೆ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಒದಗಿಸಬೇಕು,’ ಎಂದು ಹೇಳಿದ್ದು. , ‘ಪ್ರತಿ ತಿಂಗಳು ಎರಡು ಬಾರಿ ಠಾಣೆಗೆ ಹಾಜರಾಗಬೇಕು, ತನಿಖೆಗೆ ಸಹಕರಿಸಬೇಕು ಅಂತ ತಿಳಿಸಿದೆ.ತನಿಖೆಗೆ ಸಹಕಾರ ನೀಡಿ, ಸಾಕ್ಷ್ಯಗಳನ್ನು ತಿರುಚದಂತೆ ನಿರ್ದೇಶನ ನೀಡಲಾಗಿದೆ.ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಗಲ್ರಾನಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

Related posts

ಬಿಜೆಪಿ ರಾಜ್ಯ ಸಮಿತಿ ವಿಶೇಷ ಸಭೆ ಹಿನ್ನೆಲೆ: ನಗರದೆಲ್ಲೆಡೆ ಬಿಜೆಪಿ ಬ್ಯಾನರ್, ಬಂಟಿಂಗ್ಸ್, ಧ್ವಜಗಳಿಂದ ಅಲಂಕಾರ

Times fo Deenabandhu

ಎಸ್‌ಟಿಗೆ ಸೇರಿಸುವ ಹೋರಾಟ, ”ಕುರುಬರನ್ನ ಇಬ್ಬಾಗ ಮಾಡುವ ಹುನ್ನಾರ-ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ….

Times fo Deenabandhu

ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ; ಶೇ. 60:40 ಅನುಪಾತಕ್ಕೆ ರಾಜ್ಯ ಸಚಿವ ಸಂಪುಟದ ಒಪ್ಪಿಗೆ…

Times fo Deenabandhu