ಶಿವಮೊಗ್ಗ: ಹಿಂದೂ ಧರ್ಮದ ಉಳಿವಿಗೆ ಪಕ್ಷ,ಜಾತಿ ಬಿಟ್ಟು ಹಿಂದೂ ಯುವಕರು ಒಂದಾಗ ಬೇಕು ಎಂದು ಡಾ.ಸಂತೋಷ್ ಗುರೂಜಿ ಹೇಳಿದರು.
ಅವರು ಇಂದು ಬಜರಂಗದಳ ಕಾರ್ಯಕರ್ತ ನಾಗೇಶ್ ರನ್ನ ಮೆಟ್ರೋ ಅಸ್ಪತ್ರೆಯಲ್ಲಿ ಭೇಟಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತಾನಾಡಿದರು.
ಬಂಗಾಳ ಹಾಗೂ ಆಂಧ್ರದಲ್ಲಿ ನಡೆದ ರೀತಿ ನಮ್ಮ ರಾಜ್ಯದಲ್ಲಿ ಸಹ ಆಂತರಿಕ ಉಗ್ರತನ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಇದರಿಂದ ಹಿಂದೂ ದೇಶದಲ್ಲಿ ನಾಡ ಉಗ್ರರನ್ನು ಬೆಳೆಸುವ ಯತ್ನ ನಡೆಯುತ್ತಿದೆ ಏನೋ ಎಂಬ ಅನುಮಾನ ಮೂಡುತ್ತಿದೆ. ಬಾಹ್ಯ ಉಗ್ರರು ಪಾಕಿಸ್ತಾನದಿಂದ ಬಂದ್ರೋ ಅಥವಾ ಬೇರೆ ಕಡೆಯಿಂದ ಬಂದ್ರೋ ಅದನ್ನು ದೇಶ ನೋಡಿಕೊಳ್ಳುತ್ತಿದೆ, ಮಿಲ್ಟ್ರಿ ನೋಡಿಕೊಳ್ಳುತ್ತಿದೆ.
ನಾಡಿನೊಳಗಡೆ ಉಗ್ರರನ್ನು ಬೆಳೆಸುವ, ಉಗ್ರರನ್ನಾಗಿ ಮಾಡುತ್ತಿರುವ ಪ್ರಕ್ರಿಯೆ ನಡೆಸುತ್ತಿರುವುದು, ದೇಶದೊಳಗಿನ ಆತಂಕಕಾರಿ ವಿಷಯ ಎಂದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಮನೆಗಳಿಗೆ ನುಗ್ಗಿ, ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಾಕಿರುವ ಪ್ರಕರಣ ನೋಡಿದ್ದೇವೆ..ನಾಗೇಶ್ ಕೊಲೆಗೆ ಯತ್ನ ನಡೆಸಿರುವವರನ್ನು ಕೂಡಲೇ ಪೊಲೀಸರು ಬಂಧಿಸಬೇಕೆಂದು ಆಗ್ರಹಿಸಿದರು.
ಬಿಜಿಪಿ ಸರ್ಕಾರ ಇದೆ.ಹಿಂದು ದರ್ಮದ ರಕ್ಷಣೆ ಮಾಡುತ್ತಿದ್ದರೂ,ಈಡಿ ದೇಶದಲ್ಲಿ ಕೇಸರಿ ಪಕ್ಷ ಇದ್ದಾಗಲೂ ಈ ರೀತಿ ಘಟನೆ ನಡೆಯುತ್ತದೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.. ಈ ಗೂಂಡಾತನ ಹಲ್ಲೆ ನಡೆದಿರುವುದು ಮುಸ್ಲಿಂ ಸಮುದಾಯಕ್ಕೆ ಕಪ್ಪು ಚುಕ್ಕೆ ಆಗುತ್ತದೆ. ಇಂತಹ ಬೆಳವಣಿಗೆಯಿಂದ ಒಳ್ಳೆಯ ಮುಸ್ಲಿಂರಿಗೂ ಕೆಟ್ಟ ಹೆಸರು ಬರುತ್ತದೆ.
ಉಗ್ರತನದಲ್ಲಿ ತೊಡಗಿರುವ ಯುವಕರಿಗೆ ಸಹಬಾಳ್ವೆತನ ಭೋಧಿಸುವಂತೆ ಮುಸ್ಲಿಂ ಧರ್ಮ ಗುರುಗಳಲ್ಲಿ ಮನವಿ ಮಾಡುತ್ತೇನೆ. ಇಲ್ಲದಿದ್ದರೆ ಮುಂದೊಂದು ದಿನ ಇದು ಯುದ್ದಕ್ಕೆ ನಾಂದಿ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಧರ್ಮ ಗುರುಗಳಾಗಿ ನಾವು ಸಹ ಹಿಂದು ಹುಡುಗರ ಜೊತೆ ಇದ್ದೇವೆ ಎಂದು ತಿಳಿಸುವ ಸಲುವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ.ಪಕ್ಷ ಭೇಧ, ಜಾತಿ ಮತ ಬಿಟ್ಟು ಹಿಂದು ಧರ್ಮಕೋಸ್ಕರ ಎಲ್ಲಾ ಜಾತಿಯ ಹಿಂದೂ ಹುಡುಗರು ಒಂದಾಗಬೇಕು.
ಶಿವಮೊಗ್ಗದಲ್ಲಿ ತುಂಬಾ ವರ್ಷದಿಂದ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಈ ರೀತಿಯ ಬೆಳವಣಿಗೆ ಮುಂದುವರಿದರೆ ಬಹಳ ಕಷ್ಟ ಆಗುತ್ತದೆ.ಹಿಂದೂಗಳು ಸಹ ಒಗ್ಗಟ್ಟಾಗುವ ಮನೋಭಾವವನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
