January 21, 2021
Times of Deenabandhu
  • Home
  • ಪ್ರಧಾನ ಸುದ್ದಿ
  • ಜನ್ಮದಿನದ ಶುಭಾಶಯಗಳು: ಸಮಸಮಾಜದ ಕನವರಿಕೆಯೊಂದಿಗೆ ಸರ್ವರಿಗೂ ಜ್ಞಾನ ಮತ್ತು ಶಿಕ್ಷಣ ಪ್ರಸರಿಸುವ ಅರಿವಿನ ದಾಸೋಹಿ ಶ್ರೀ ಶ್ರೀ ಪ್ರಸನ್ನನಾಥ ಮಹಾಸ್ವಾಮೀಜಿ…..
ಅಂಕಣ ಧರ್ಮ ಪ್ರಧಾನ ಸುದ್ದಿ ಮಂಡ್ಯ ಮುಖ್ಯಾಂಶಗಳು ಶಿವಮೊಗ್ಗ

ಜನ್ಮದಿನದ ಶುಭಾಶಯಗಳು: ಸಮಸಮಾಜದ ಕನವರಿಕೆಯೊಂದಿಗೆ ಸರ್ವರಿಗೂ ಜ್ಞಾನ ಮತ್ತು ಶಿಕ್ಷಣ ಪ್ರಸರಿಸುವ ಅರಿವಿನ ದಾಸೋಹಿ ಶ್ರೀ ಶ್ರೀ ಪ್ರಸನ್ನನಾಥ ಮಹಾಸ್ವಾಮೀಜಿ…..

ಶಿವಮೊಗ್ಗ ಜಿಲ್ಲೆ ಈ ನಾಡಿನ, ದೇಶದ ನೆಲದ ರಾಜಕೀಯ, ಶೈಕ್ಷಣಿಕ, ಸಾಂಸ್ಕøತಿಕ, ಸಾಹಿತ್ಯಲೋಕಕ್ಕೆ, ಧರ್ಮ, ಅಧ್ಯಾತ್ಮದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದೆ.

ಇತಿಹಾಸ ಪ್ರಸಿದ್ಧವಾದ ಈ ಜಿಲ್ಲೆಯಲ್ಲಿ ಸಾವಿರಾರು ಸಾಧಕರು ಮತ್ತು ಸಂಗತಿಗಳಿವೆ. ಈ ಎಲ್ಲವನ್ನು ಮೆಲುಕು ಹಾಕುತ್ತ ಹೊರಟರೆ ಶಿವಮೊಗ್ಗದ ಶರಾವತಿ  ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆ ಮತ್ತು ಪರಮಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಹೆಸರು ಬೆಸೆದುಕೊಳ್ಳುತ್ತದೆ.

1984 ರಲ್ಲಿ ಶಿವಮೊಗ್ಗದ ಶರಾವತಿ ನಗರದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆ ಪೂಜ್ಯ  ಶ್ರೀ ಶ್ರೀ ಪ್ರಸನ್ನನಾಥರ ನೇತೃತ್ವದಲ್ಲಿ ಆರಂಭವಾಯಿತು. ಇಲ್ಲಿಂದ ಸಿಹಿಮೊಗೆಯ ನೆಲದ ಜನರ ಜೀವನಸಾರ ಹೊಸ ರೀತಿಯಲ್ಲಿ ಆರಂಭವಾಯಿತು. ಶಿವಮೊಗ್ಗದ ಜನಮನದ ಜ್ಞಾನಾಭ್ಯುದಯಕ್ಕಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಮುಂಚೂಣಿ ಮಠಗಳಲ್ಲಿ ಗುರುತಿಸಬಹುದಾದ ಮೊದಲ ಹೆಸರು ಶ್ರೀ ಆದಿಚುಂಚನಗಿರಿ ಶಾಖಾಮಠ ಶಿವಮೊಗ್ಗ ಮತ್ತು ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು. ಪ್ರಸನ್ನವದನರೂ, ಸುಚಿತ್ತ, ಸುಪ್ರಸಿದ್ಧ ವಾಕ್‍ಚಾತುರ್ಯವುಳ್ಳ ಗುರುಗಳು ಶಿವಮೊಗ್ಗದ ಜಡಕಲ್ಲುಗಳಿಗೆ ಸುಂದರ ಆಕೃತಿ ನೀಡಿದ ಸ್ವಾಮೀಜಿವರು ಶಿವಮೊಗ್ಗ ನಗರದ ಹೊಸ ಮನ್ವಂತರಕ್ಕೆ ನಾಂದಿಯಾದರು.

ಜ್ಞಾನಪ್ರಸಾರವೇ ಸಮಾಜದ ಉನ್ನತಿಗೆ ಮೂಲಾಧಾರ ಎಂಬುದನ್ನು ಅರಿತ ಗುರುಗಳು ಜ್ಞಾನಪ್ರಸಾರಕ್ಕಾಗಿ ಶಿಕ್ಷಣ ಕ್ಷೇತ್ರವನ್ನು ಆರಿಸಿಕೊಂಡರು ಅಲ್ಲದೆ ಈ ಕ್ಷೇತ್ರದಲ್ಲಿ ಇಂದು ಬಹುದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಇಂದು ಶಿವಮೊಗ್ಗ ಶಾಖಾಮಠ 30 ವರ್ಷವನ್ನು ಪೂರೈಸಿ ಮುಂದೆ ಸಾಗುತ್ತಿರುವ ಸುಸಂದರ್ಭದಲ್ಲಿ ಹಿಂತಿರುಗಿ ನೋಡಿದರೆ ಚೈತನ್ಯದ ಚಿಲುಮೆಯಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಹತ್ತಿಬಂದ ಮೆಟ್ಟಿಲುಗಳು ನೂರಾರು. ಶ್ರೀಮಠವನ್ನು ಸುಜ್ಞಾನ ಹಾಗೂ ವಿಜ್ಞಾನದಿಂದೊಡಗೂಡಿದ ಜ್ಞಾನದ ಮಹಾಮನೆಯನ್ನಾಗಿಸಿದ್ದಾರೆ.         ತ್ರಿವಿಧ ದಾಸೋಹಿಗಳೆಂದು ಹೆಸರಾದ ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಬೆಳೆದು ತಮ್ಮ ದರ್ಶನದೊಂದಿಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಅವಿಸ್ಮರಣೀಯ ಸೇವೆಗಳ ಮೂಲಕ ಶಿವಮೊಗ್ಗದ ನಗರ ಜನತೆಯ ಪ್ರೀತಿ ವಿಶ್ವಾಸ ಗಿಟ್ಟಿಸಿಕೊಂಡಿದ್ದಾರೆ.

ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖಾಮಠದ ಅಡಿಯಲ್ಲಿ ಬರುವ ವಿದ್ಯಾಸಂಸ್ಥೆಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 10,000 ಕ್ಕೂ ಹೆಚ್ಚು, ಶಿಕ್ಷಣರಂಗದಲ್ಲಿ  ತೀವ್ರವಾದ ಸ್ಪರ್ಧೆಯ ನಡುವೆಯೂ ಸಹ ಪೂಜ್ಯರ ಉತ್ಸಾಹ, ಕಲ್ಪನೆ ಕುತೂಹಲ ಮತ್ತು ಕಾರ್ಯತತ್ಪರತೆಯ ಕುರುಹಾಗಿ ಇಂದಿಗೂ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವಿದ್ಯಾಸಂಸ್ಥೆಗಳು ಸಂಖ್ಯೆ ಹಾಗೂ ಸತ್ವದಲ್ಲಿ ಪೈಪೋಟಿಯಿಂದ ಮುನ್ನುಗುತ್ತಿವೆ.

ಶಿವಮೊಗ್ಗ ಜಿಲ್ಲೆ ಹಾಗೂ ಉತ್ತರಕನ್ನಡ ಜಿಲ್ಲೆಯ ಜನರಿಗೆ  ಅನುಕೂಲವಾಗುವಂತೆ ಸಾಕಷ್ಟು ಸಮಾಜಮುಖಿ ಕಾರ್ಯಗಳು ಸಹ ಶ್ರೀ ಮಠದ ಶಿವಮೊಗ್ಗ  ಶಾಖೆಯಿಂದ ನಡೆಯುತ್ತಿವೆ. ಸಾಮೂಹಿಕ ವಿವಾಹ, ಚುಂಚಾದ್ರಿ ಕಲೋತ್ಸವ,  ಮಕ್ಕಳ ಸಾಹಿತ್ಯ ಸಮ್ಮೇಳನಗಳು, ರಸಪ್ರಶ್ನೆ, ವಿಜ್ಞಾನ ವಸ್ತು ಪ್ರದರ್ಶನ ,  ಮಹಿಳಾ ಜಾಗೃತಿ ಮತ್ತು ತರಭೇತಿ ಶಿಬಿರ, ಶಾಲಾಕಾಲೇಜುಗಳಲ್ಲಿ  ವ್ಯಾಸಂಗ ಮಾಡುವ ಯುವ ಜನತೆ ತಮ್ಮ ಬೇಸಿಗೆ ರಜಾದಿನಗಳನ್ನು ಸದುಪಯೋಗ ಪಡಿಸಿಕೊಳ್ಳುವಂತಹ ಬೇಸಿಗೆ ಶಿಬಿರಗಳನ್ನು, ಆಯೋಜಿಸಲಾಗುತ್ತಿದೆ. ಕಲುಷಿತಗೊಳ್ಳುತ್ತಿರುವ ಸಮಾಜವನ್ನು ಸರಿಪಡಿಸಬೇಕಾದರೆ ಧರ್ಮಾಧಾರಿತ ಜೀವನ ಜಾರಿಗೆ ಬರಬೇಕು, ಎಂಬ ಕಾರಣಕ್ಕಾಗಿ ವೇದ, ಆಗಮ, ಉಪನಿಷತ್‍ಗಳನ್ನೊಳಗೊಂಡ, ಸಂಸ್ಕøತ ಪಾಠಶಾಲೆಗಳು, ಅಧ್ಯಾತ್ಮ ಶಿಬಿರಗಳನ್ನು ನಡೆಸುತ್ತಾ ನೈತಿಕ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಭಾರತೀಯ ವೈದ್ಯಪದ್ಧತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ನಾಟಿವೈದ್ಯ ಸಮಾವೇಶವನ್ನು, ಯೋಗಶಿಬಿರವನ್ನು ನಡೆಸಿಕೊಂಡು ಬರಲಾಗುತ್ತಿದೆ.

ಶ್ರೀ ಶ್ರೀ ಪ್ರಸನ್ನನಾಥಸ್ವಾಮೀಜಿಯವರ ಜನ್ಮದಿನವಾದ ಡಿಸೆಂಬರ್ 8 ಕೇವಲ ಹಾರ ತುರಾಯಿಗಳ ಅಭಿನಂದನೆಗಳ ಸುರಿಮಳೆ ಆಗಿರುವುದಿಲ್ಲ ಅದೊಂದು ಸಾಂಸ್ಕøತಿಕ ವೈಜ್ಞಾನಿಕ ಸಮಾವೇಶವಾಗಿರುತ್ತದೆ. ಪೂಜ್ಯರು ಕ್ರಮಿಸಬಹುದಾದ ಸೇವಾಪಥವನ್ನು ಕೇವಲ ಮೂರು ದಶಕದಲ್ಲಿ ಕ್ರಮಿಸುತ್ತಾ ಬಂದಿದ್ದಾರೆ ಎಂಬುದಕ್ಕೆ ಸಾಕ್ಷ್ಯಾಧಾರ ಶಿವಮೊಗ್ಗ, ಗುರುಪುರ, ಕುಮುಟ, ಬಿಆರ್‍ಪಿ, ಭದ್ರಾವತಿ, ಕಾರೇಹಳ್ಳಿ, ಎದ್ದುನಿಂತಿರುವ ಬೃಹತ್ ಕಟ್ಟಡಗಳು, ಕಲ್ಯಾಣ ಮಂಟಪ, ಸುಸಜ್ಜಿತವಾದ ಗ್ರಂಥಾಲಯ, ಪ್ರಯೋಗಾಲಯಗಳು, ಗೋಶಾಲೆಗಳು, ಸುತ್ತಲಿನ ಹಸಿರಿನ ಉದ್ಯಾನವನಗಳು, ಸಾವಿರಾರು ಶಿಕ್ಷಕವೃಂದ, ವಿದ್ಯಾರ್ಥಿವೃಂದವೇ ಇದಕ್ಕೆ ಸಾಕ್ಷಿಯಾಗಿದೆ.  ಪರಮಪೂಜ್ಯರು ಸಮಾಜದ ಉನ್ನತಿಗಾಗಿ ಶ್ರಮಿಸಲೆಂದು ಸಂನ್ಯಾಸಿ ಪರಂಪರೆಯನ್ನು ಸೃಷ್ಟಿಸಿದರು. ತಮ್ಮಿಂದ ದೀಕ್ಷಾಬದ್ಧರಾದ ಶಿಷ್ಯರಿಗೆಲ್ಲ ಧರ್ಮ ಸಂಸ್ಕøತಿಯ ರಕ್ಷಕರಾಗಿ ಸಮಾಜ ಸೇವೆಯನ್ನು ಮಾಡುವುದರಲ್ಲಿ ಭಗವತ್ಸಾಕ್ಷಾತ್ಕಾರವನ್ನು ಹೊಂದಿರೆಂದು ಬೋಧಿಸಿ ಜನಪರ ಕಾಳಜಿಯ ಸಂಸ್ಕಾರವನ್ನು ಮೈಗೂಡಿಸಿದ್ದಾರೆಂಬುದಕ್ಕೆ ಸಾಕ್ಷಿಯೇ ಪೂಜ್ಯ ಶ್ರೀ ಶ್ರೀ ಗಳ ಜೀವನಶೈಲಿ.

ಪೂಜ್ಯ ಶ್ರೀ ಶ್ರೀ ಗಳು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾಗಿ  ಐದು ವರ್ಷಗಳು ಕಳೆದಿದ್ದು, ಪರಮಪೂಜ್ಯ ಜಗದ್ಗುರುಗಳಾದ ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ  ಶ್ರೀ ಮಠದ ಎಲ್ಲಾ ಕಾರ್ಯ ಚಟುವಟಿಕೆಗಳು ಯಶಸ್ವಿಯಾಗಿ ನಿರ್ವಹಿಸುತ್ತಾ ಮಠದ ಉನ್ನತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಶ್ರೀ ಮಠದ ಪ್ರಧಾನ ಕಾರ್ಯದರ್ಶಿಗಳಾಗಿ ಹೆಚ್ಚು ಕಾರ್ಯಭಾರಗಳ ಹೊರೆಯಿಂದಾಗಿ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿದ್ದರು ಶಿವಮೊಗ್ಗ ಶಾಖಾ ಮಠದ ಯಾವ ಕಾರ್ಯವನ್ನು ಕಡೆಗಣಿಸುವುದಿಲ.್ಲ ಎಲ್ಲಾ ಆಗುಹೋಗುಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ ಮುನ್ನಡೆಯುತ್ತಿರುವ ಪೂಜ್ಯರಿಗೆ  ತುಂಬು ಹೃದಯದ ಜನುಮದಿನದ ಹಾರ್ಧಿಕ ಶುಭಾಶಯಗಳನ್ನು ಕೋರುತ್ತಾ ಕ್ಷೇತ್ರಾಧಿ ದೇವತೆಗಳು ಆರೋಗ್ಯ, ಆಯಸ್ಸು , ಯಶಸನ್ನು ನೀಡಿ ಹರಸಲಿ. ಪೂಜ್ಯ ಶ್ರೀ ಶ್ರೀ ಗಳ ಆಶೀರ್ವಾದ ಸರ್ವರಿಗೂ ಲಭಿಸಲಿ.

-ರಮೇಶ್ ಶಂಕರಘಟ್ಟ, ಸಂಪಾದಕ.

 

 

 

 

Related posts

ಸಾಮೂಹಿಕ ಅತ್ಯಾಚಾರವೆಸಗಿದವರ ವಿರುದ್ದ ಕಠಿಣ ಕ್ರಮಕ್ಕೆ ಮಾನವ ಹಕ್ಕುಗಳ ಕಮಿಟಿ ಆಗ್ರಹ

Times fo Deenabandhu

ಶಾಲೆ ಜಾಗದಲ್ಲಿ ಸಮುದಾಯ ಭವನ ನಿರ್ಮಾಣ ಕೂಡಲೇ ನಿಲ್ಲಿಸಿ- ರಿಯಾಜ್ ಅಹಮ್ಮದ್ ಒತ್ತಾಯ

Times fo Deenabandhu

ರಾಷ್ಟ್ರಕವಿ ಕುವೆಂಪುರವರ  ಜನ್ಮ ದಿನದ ವಿಶೇಷ ಲೇಖನ: ಕುವೆಂಪು ಎಂಬ ದಾರ್ಶನಿಕ…

Times fo Deenabandhu