Times of Deenabandhu
ಜಿಲ್ಲೆ ಶಿವಮೊಗ್ಗ ಸಾಹಿತ್ಯ/ಸಂಸ್ಕೃತಿ

ಸಾಹಿತ್ಯ ಗ್ರಾಮದ ಉದ್ಘಾಟನಾ ಕಾರ್ಯಕ್ರಮ: ಜಿಲ್ಲಾ ಕಸಾಪ ಪದಾಧಿಕಾರಿಗಳ ಅಸಮಾಧಾನ

ಶಿವಮೊಗ್ಗ ಅ.29: ಸಾಹಿತ್ಯ ಗ್ರಾಮದ ಯಶಸ್ವಿಗೆ ಕಾರಣರಾದ ಹಿಂದಿನ ಕಸಾಪ ಅಧ್ಯಕ್ಷರು ಸೇರಿದಂತೆ  ಹಲವು ಗಣ್ಯರನ್ನು ಮರೆತಿರುವುದು ಮತ್ತು ಕನಿಷ್ಟ ಆಹ್ವಾನ ಪತ್ರಿಕೆಯಲ್ಲೂ ಮುದ್ರಿಸದಿರುವುದು ಖಂಡನೀಯ ಎಂದು ಕೆಲವು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು  ಆರೋಪಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸದಸ್ಯರಾದ ಯು.ಮಧುಸೂದನ ಐತಾಳ್ ಮತ್ತು ಎಸ್.ಶಿವಮೂರ್ತಿ, ಡಿ.ಮಂಜುನಾಥ್ ಅವರು ಕಸಾಪ ಅಧ್ಯಕ್ಷರಾದ ನಂತರ ಅವರ ಪರಿಶ್ರಮದಿಂದ ಸಾಹಿತ್ಯ ಗ್ರಾಮ ಎನ್ನುವ ಕಲ್ಪನೆ ಮೂಡಿತು. ಅದಕ್ಕಾಗಿ ಅವರು ಸಾಕಷ್ಟು ಪ್ರಯತ್ನ ಪಟ್ಟರು. ಮುಖ್ಯವಾಗಿ ಹಣಕಾಸಿನ ಕೊರತೆ ನಿಭಾಯಿಸುವ ಹೊಣೆ ಅವರಲ್ಲಿತ್ತು. ಸರ್ಕಾರದ ಮನವೊಲಿಸಿ 1 ಕೋಟಿ ರೂ.ಹಣ ಬಿಡುಗಡೆ ಮಾಡುವಂತೆ ಮಾಡಿದ್ದರು. ಆದರೆ ಕೆಲವರು ಈ ಹಣವನ್ನು ಅವರೇ ಮನೆಗೆ ತೆಗೆದುಕೊಂಡು ಹೋದವರÀಂತೆ ಉಯಿಲೆಬ್ಬಿಸಿದ್ದರು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್‍ಗೆ ಅವರು ಅಧ್ಯಕ್ಷರಾಗುವವರೆಗೂ ಒಂದು ಕಚೇರಿಯೂ ಇರಲಿಲ್ಲ. ಆದರೆ ಮಂಜುನಾಥ್ ಅವರು ಪರಿಷತ್‍ಗೆ ಒಂದು ಕಚೇರಿಯನ್ನು ಕಟ್ಟಿಸಿದರು. ಜೊತೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಿದರು. ಇದು ಹಲವರಿಗೆ ಹೊಟ್ಟೆಕಿಚ್ಚು ಕೂಡ ಆಗಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೇ ಡಿ.ಮಂಜುನಾಥ್ ಕಸಾಪವನ್ನು ಕ್ರಿಯಾಶೀಲತೆಯತ್ತ ಕೊಂಡೊಯ್ದರು. ಸಾಹಿತ್ಯ ಗ್ರಾಮಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಡಿ.ಹೆಚ್.ಶಂಕರಮೂರ್ತಿ, ಬಿ.ವೈ.ರಾಘವೇಂದ್ರ ಸೇರಿದಂತೆ ಎಲ್ಲರ ಸಹಕಾರದಿಂದ ಹಣವನ್ನು ತಂದು ಸಾಕಾರಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಆದರೆ ಇಂದಿನ ಕಸಾಪ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕಷ್ಟಪಟ್ಟವರನ್ನು ಮರೆತಿದೆ. ಸಾಹಿತ್ಯ ಗ್ರಾಮದ ಉದ್ಘಾಟನಾ ಸಮಾರಂಭದ ಕಲ್ಲುಗಳಲ್ಲಿ ತಮ್ಮ ಹೆಸರುಗಳನ್ನೇ ವಿಜೃಂಭಿಸುವಂತೆ ಮಾಡಿಕೊಂಡಿರುವ ಅವರು ಶಂಕುಸ್ಥಾಪನೆ ಸಮಾರಂಭದ ಕಲ್ಲನ್ನೇ ಮುಚ್ಚಿಬಿಟ್ಟಿರುವುದು ಕೀಳು ಆಲೋಚನೆಯ ಪ್ರತೀಕವೇ ಆಗಿದೆ ಎಂದು ದೂರಿದರು.
ಜಿಲ್ಲೆಯ ಹಲವು ಸಾಹಿತ್ಯಿಕ ಮನಸ್ಸುಗಳು ಇಂತಹ ವಿಕೃತತನವನ್ನು ಖಂಡಿಸುತ್ತಿದ್ದಾರೆ. ಶ್ರಮಿಸಿದವರನ್ನು ಕಿಂಚಿತ್ತು ಸ್ಮರಿಸುವ ಸೌಜನ್ಯವನ್ನು ಅವರು ಕೂಡ ತೋರದಿರುವುದು ನಿಜಕ್ಕೂ ಅವರ ದ್ವೇಷದ ಮನಸ್ಸಿಗೆ ಸಾಕ್ಷಿಯಾಗಿದೆ ಮತ್ತು ಸಾಹಿತ್ಯ ಪರಿಷತ್‍ನ ಪದಾಧಿಕಾರಿಗಳಿಗೆ ಅವರ ಆಲೋಚನೆಗಳಿಗೆ ನಾವು ದಿಕ್ಕಾರ ಹೇಳುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ಸದಸ್ಯರುಗಳಾದ ಟಿ.ಕೃಷ್ಣಪ್ಪ, ರಂಗನಾಥ್, ಬೈರಾಪುರ ಶಿವಪ್ಪ ಮೇಸ್ಟ್ರು, ಮಮತಾ ಶಿವಣ್ಣ, ರಾಮಚಂದ್ರ ಸೇರಿದಂತೆ ಹಲವರಿದ್ದರು.
ಮನವಿ:
ಪತ್ರಿಕಾಗೋಷ್ಠಿಯ ನಂತರ  ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕಸಾಪ ಪದಾಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದರು ಮತ್ತು ಕಣ್ಮರೆಯಾದ ಶಂಕುಸ್ಥಾಪನೆಯ ಕಲ್ಲನ್ನು ಮತ್ತೆ ಸಾಹಿತ್ಯ ಗ್ರಾಮದಲ್ಲಿ ಪುನರ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

 

 

 

 

 

 

 

 

 

 

 

 

 

 

 

Related posts

ಆರೋಗ್ಯ ತಾಲೂಕನ್ನಾಗಿ ಪರಿವರ್ತಿಸಲು ವೈದ್ಯರು ಶ್ರಮಿಸಬೇಕು; ಅಮಿತಾ ಮುತ್ತಪ್ಪ

Times fo Deenabandhu

ಬಾಳೂರು ಹೊರಟ್ಟಿ ಶಾಲೆಗೆ ಶಿಕ್ಷಣ ಸಚಿವರ ಭೇಟಿ

Times fo Deenabandhu

ಕನ್ನಡ ಪ್ರಾಧಿಕಾರಕ್ಕೆ ಅನುದಾನ ಕಡಿಮೆ ನೀಡಿ ಮರಾಠಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಕರ್ನಾಟಕ ರಕ್ಷಣಾ ವೇದಿಕೆ ಖಂಡನೆ….

Times fo Deenabandhu