Times of Deenabandhu
  • Home
  • ಮುಖ್ಯಾಂಶಗಳು
  • ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪಾತಕ ಲೋಕದ ಚಲನವಲನಗಳು ಹೆಚ್ಚಳ….. ರೌಡಿಗಳ ಆಟ್ಟಹಾಸವನ್ನು ಮಟ್ಟ ಹಾಕಲು ಪೋಲೀಸ್ ಇಲಾಖೆ ಸಜ್ಜು…
ಕ್ರೈಮ್ ಜಿಲ್ಲೆ ದಕ್ಷಿಣ ಕನ್ನಡ ಮುಖ್ಯಾಂಶಗಳು

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪಾತಕ ಲೋಕದ ಚಲನವಲನಗಳು ಹೆಚ್ಚಳ….. ರೌಡಿಗಳ ಆಟ್ಟಹಾಸವನ್ನು ಮಟ್ಟ ಹಾಕಲು ಪೋಲೀಸ್ ಇಲಾಖೆ ಸಜ್ಜು…

ಮಂಗಳೂರು, ಅಕ್ಟೋಬರ್  27: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ರೌಡಿಗಳು ಪೀಲ್ಡಿಗಿಳಿದಿದ್ದಾರೆ ಅವರ ಪಾತಕ ಲೋಕದ ಚಲನವಲನಗಳು ಹೆಚ್ಚಾಗಲಾರಂಭಿಸಿದೆ. ವಾರಕ್ಕೊಂದರಂತೆ ಜಿಲ್ಲೆಯಲ್ಲಿ ಇದೀಗ ರೌಡಿಗಳ ಗ್ಯಾಂಗ್ ವಾರ್ ನಿಂದ  ಹೆಣಗಳು ಬಿಳುತ್ತಿವೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ರೌಡಿಗಳ ಆಟ್ಟಹಾಸವನ್ನು ಮಟ್ಟ ಹಾಕಲು ಇದೀಗ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಜಿಲ್ಲೆಯಲ್ಲಿ ಗುರುತಿಸಲ್ಪಟ್ಟಿರುವ ರೌಡಿ ಶೀಟರ್ ಗಳ ಮೇಲೆ ನಿಗಾ ಇರಿಸಲು ಪೋಲೀಸ್ ಇಲಾಖೆ ಸಜ್ಜಾಗಿದ್ದು, ಇಂಥ ರೌಡಿಗಳ ಮೇಲೆ ಗೂಂಡಾ ಕಾಯ್ದೆ ಹಾಕಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ

ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇದೀಗ ಮತ್ತೆ ರೌಡಿಗಳ ಗ್ಯಾಂಗ್ ವಾರ್ ಹಾಡು ಹಗಲೆ ನೆಡೆಯುತ್ತಿದೆ  ಈ ಜಿಲ್ಲೆಗಳಲ್ಲಿ ನಡೆಯುವ ಎಲ್ಲಾ ಅಪರಾಧ ಕೃತ್ಯಗಳಲ್ಲಿ ಈ ಎರಡು ಜಿಲ್ಲೆಗಳ ರೌಡಿಗಳ ಪಾತ್ರ ಪ್ರಮುಖವಾಗಿದೆ. ಎರಡು ವಾರದ ಹಿಂದೆ ಉಡುಪಿಯಲ್ಲಿ ನಡೆದ ಕಿಶನ್ ಹೆಗ್ಡೆ ಕೊಲೆ ಹತ್ಯೆಯ ಬಳಿಕ ಈ ಕೊಲೆಗೆ ಪ್ರತೀಕಾರವಾಗಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮತ್ತೊಂದು ತಲೆ ಉರುಳಿತ್ತು. ತುಳು ಚಿತ್ರ ನಟ ಸುರೇಂದ್ರ ಬಂಟ್ವಾಳ್ ನನ್ನು ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಗಾಂಜಾ ಹಾಗೂ ಇತರ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಎರಡು ಗುಂಪುಗಳ ನಡುವೆ ವೈಷ್ಯಮ್ಯ ರೌಡಿಶೀಟರ್ ಓರ್ವನ ಕೊಲೆಯಲ್ಲಿ ಆರಂಭಗೊಂಡಿದೆ. ಕಲ್ಲಡ್ಕ ಹಾಗೂ ಇತರ ಭಾಗಗಳಲ್ಲಿ ಕೊಲೆಯತ್ನ, ದರೋಡೆ ಮೊದಲಾದ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಚೆನ್ನೆ ಫಾರೂಕ್ ಎಂಬ ರೌಡಿಶೀಟರ್ ನನ್ನು ಆತನ ಜೊತೆಗೇ ಅಪರಾಧ ಕೃತ್ಯಗಳಲ್ಲಿ ಕೈಮಿಲಾಯಿಸಿದ್ದ  ಇಬ್ರಾಹಿಂ ಖಲೀಲ್ ಎಂಬಾತನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆಗೆ ಪ್ರತೀಕಾರವಾಗಿ ರಿವೆಂಜ್ ಗೆ ಬಿದ್ದಿರುವ ರೌಡಿಗಳ ಪಡೆ ಜಿಲ್ಲೆಯಲ್ಲಿ ಮತ್ತೆ ಹಲವು ಹತ್ಯೆಗಳು ನಡೆಸುವ ಎಲ್ಲಾ ಲಕ್ಷಣಗಳು ಕಂಡು ಬರಲಾಂಭಿಸಿದೆ. ಈ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ಇಲಾಖೆ ರೌಡಿಗಳನ್ನು ಮಟ್ಟ ಹಾಕಲು ಮತ್ತೆ ಸಜ್ಜಾಗಿದೆ. ಜಿಲ್ಲೆಯಲ್ಲಿ ರೌಡಿಶೀಟರ್ ಗಳ ಮೇಲೆ ನಿಗಾ ಇಡುವ ಕೆಲಸವನ್ನು ಪೋಲೀಸ್ ಇಲಾಖೆ ಆರಂಭಿಸಿದ್ದು, ಯಾವುದೇ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗದಂತೆ ರೌಡಿಗಳಿಗೆ ಎಚ್ಚರಿಕೆಯನ್ನೂ ನೀಡಿದೆ. ಅಲ್ಲದೆ ಜಿಲ್ಲೆಯಲ್ಲಿ ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿರುವ ರೌಡಿಗಳು – ಪುಡಿ ರೌಡಿಗಳ ಪಟ್ಟಿಯನ್ನು ಈಗಾಗಲೇ ಪೋಲೀಸ್ ಇಲಾಖೆ ಸಿದ್ಧಪಡಿಸಿಕೊ‌ಡಿದೆ. ಸುಮಾರು ನೂರೈವತ್ತಕ್ಕೂ ಹೆಚ್ಚು ರೌಡಿಗಳ ಪಟ್ಟಿಯನ್ನು ಸಿದ್ಧಪಡಿಸಿರುವ ಪೋಲೀಸ್ ಇಲಾಖೆ ಈ ರೌಡಿಗಳ ಮೇಲೆ ಗೂಂಡಾ ಕಾಯ್ದೆ ಮೂಲಕ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ವರದಿಯನ್ನು ಸರಕಾರಕ್ಕೆ ಶೀಘ್ರವೇ ಮಂಡಿಸಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ B.M ಲಕ್ಷ್ಮೀಪ್ರಸಾದ್ ಭೂಗತ ಲೋಕದ ಪಾತಕಿಗಳಿಗೆ ಖಡಕ್ ಎಚ್ಚರಿಕೆ ನಿಡಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯು ಕೇರಳದ ಗಡಿಯನ್ನು ಹಂಚಿಕೊಂಡಿದ್ದು, ಕೇರಳ ರಾಜ್ಯದ ನಟೋರಿಯಸ್ ಕ್ರಿಮಿನಲ್ ಗಳೂ ಜಿಲ್ಲೆಯನ್ನು ಪ್ರವೇಶಿಸಿ ಅಪರಾಧಗಳನ್ನು ಎಸಗಿ ಪರಾರಿಯಾಗುತ್ತಿರುವ ಪ್ರಕರಣಗಳೂ ಮಿತಿ ಮೀರಿ ಹೊಗಿದೆ. ಅಲ್ಲದೆ ಜಿಲ್ಲೆಯಲ್ಲಿ ನಡೆಯುವ ಬಹುತೇಕ ಅಪರಾಧ ಕೃತ್ಯಗಳಲ್ಲಿ ಕೇರಳದ ನಂಟೂ ಇರುವ ಕಾರಣ ಕೇರಳ ಗಡಿಭಾಗದಲ್ಲೂ ಪೋಲಿಸ್ ಇಲಾಕೆ ಕಟ್ಟುನಿಟ್ಟಿನ ನಿಗಾವಹಿಸಲು ಮುಂದಾಗಿದೆ ದಕ್ಷಿಣಕನ್ನಡ ಹಾಗೂ ಕೇರಳವನ್ನು ಸಂಪರ್ಕಿಸುವ ಹತ್ತಾರು ರಸ್ತೆಗಳಿದ್ದು, ಈ ರಸ್ತೆಗಳಿಂದ ಬಂದು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ ನಟೋರಿಯಸ್ ಬಳಸುತ್ತಿರುವ ಈ ರಸ್ತೆಗಳು  ಪೋಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ಕೇರಳದಲ್ಲಿ ಅಪರಾಧ ನಡೆಸಿ ಜಿಲ್ಲೆಯಲ್ಲಿ ತಲೆಮರೆಸಿಕೊಳ್ಳುವುದು ಹಾಗೂ ಜಿಲ್ಲೆಯಲ್ಲಿ ಅಪರಾಧ ಕೃತ್ಯ ಎಸಗಿ ಕೇರಳದಲ್ಲಿ ತಲೆಮರೆಸಿಕೊಳ್ಳುವುದೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲೂ ಪೋಲೀಸ್ ಇಲಾಖೆ ಗಡಿ ಭಾಗದಲ್ಲಿ ತಪಾಸಣೆಯನ್ನು ಹೆಚ್ಚಿಸಲೂ ನಿರ್ಧರಿಸಿದೆ.

ಒಟ್ಟಿನಲ್ಲಿ ಇತ್ತೀಚೆಗೆ ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಪಾತಕ ಲೋಕದ ಕ್ರಿಮಿಗಳು ಎಗ್ಗಿಲ್ಲದೆ ಬೆಳೆದು ನಿಂತಿದ್ದಾರೆ ದಿನ ನಿತ್ಯ ರಕ್ತದೊಕೊಳಿಯಿಂದ ಕರಾವಳಿ ಜನ ಬೆಚ್ಚಿ ಬಿದ್ದಿದ್ದಾರೆ ಹಾಡುಹಗಲೆ ನಡು ರಸ್ತೆಯಲ್ಲೆ ಹಂತಕ ಪಡೆ ಸಾರ್ವಜನಿಕರೆದುರೆ ಹತ್ಯೆಗೆ ಮುಂದಾಗಿರುವುದು ಎಂತವರ ಎದೆಯನ್ನು ನಡುಗಿಸುತ್ತದೆ  ಈ ಭಾಗದಲ್ಲಿ ಮಾಫಿಯಾ ದಂಧೆಗಳು ಬೇರುಬಿಟ್ಟಿವೆ ಈ ಕಾರಣದಿಂದಲೆ ರೌಡಿಗಳು ಆಕ್ಟೀವ್ ಆಗಿದ್ದಾರೆ ಇಲ್ಲಿ ಹತ್ತಾರು ಗ್ಯಾಂಗ್ ಗಳು ಅಧಿಪತ್ಯ ಸಾಧಿಸಿ ತಮ್ಮ ಹಿಡಿತದಲ್ಲಿಟ್ಟು ಕೊಳ್ಳಲು  ಗ್ಯಾಂಗ್ ವಾರ್ ಗಳಿಗೆ ಮುಂದಾಗಿವೆ ನಿತ್ಯ ತಲೆಗಳು ಉರುಳುತ್ತಿವೆ

ಈಗ ಪೋಲಿಸ್ ಇಲಾಖೆ ಎಚ್ಚೆತ್ತುಕೊಂಡು ಸೊಂಟದಲ್ಲಿರುವ ರೀವಲ್ವಾರ್ ಗೂ ಕೆಲಸ ಕೊಟ್ಟು ಕಾನೂನಿನಡಿ ರೌಡಿಗಳನ್ನು ಮಟ್ಟಹಾಕದೆ ಹೊದರೆ ಕರಾವಳಿಯಲ್ಲಿ ಮಾಫಿಯಾದ ನಂಜು ಎಗ್ಗಿಲ್ಲದೆ ಹರಡಿ ನಿತ್ಯ ರಕ್ತದೊಕುಳಿಗೆ ಅದೇಷ್ಟೊ ತಲೆ ಉರುಳುವುದರಲ್ಲಿ ಅನುಮಾನವಿಲ್ಲ

ವಿಶೇಷ ವರದಿ – ಸುಧೀರ್ ವಿಧಾತ,                 ಶಿವಮೊಗ್ಗ

Related posts

28ರಂದು ಬ್ರಾಹ್ಮಣ ಮಹಾಸಭೆಯ ೧೦ನೇ ರಾಜ್ಯಮಟ್ಟದ ಸಮ್ಮೇಳನ

Times fo Deenabandhu

ಕೊಡಚಾದ್ರಿ-ಕೊಲ್ಲೂರು ನಡುವೆ ಕೇಬಲ್‌ಕಾರ್ ಸಂಪರ್ಕ ಕಲ್ಪಿಸಲು ಚಿಂತನೆ: ಸಂಸದ ಬಿ.ವೈ. ರಾಘವೆಂದ್ರ

Times fo Deenabandhu

‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ಸುಧಾ ಮೂರ್ತಿ ಗೆದ್ದ ಮೊತ್ತ ಎಷ್ಟು?

Times fo Deenabandhu