Times of Deenabandhu
  • Home
  • ಮುಖ್ಯಾಂಶಗಳು
  • ಚಂದ್ರನ ಮೇಲಿದೆಯಂತೆ ಅಪಾರ ಜಲ: ನಾಸಾ ವಿಜ್ಞಾನಿಗಳು ಹೇಳಿದ ಚಂದಮಾಮಾನ ಕಥೆ
ಪ್ರಧಾನ ಸುದ್ದಿ ಮುಖ್ಯಾಂಶಗಳು ವಿದೇಶ

ಚಂದ್ರನ ಮೇಲಿದೆಯಂತೆ ಅಪಾರ ಜಲ: ನಾಸಾ ವಿಜ್ಞಾನಿಗಳು ಹೇಳಿದ ಚಂದಮಾಮಾನ ಕಥೆ

ಪ್ಯಾರಿಸ್‌: ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಮೇಲೆ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಹಲವು ಅಧ್ಯಯನಗಳು ಚಂದ್ರನ ಮೇಲೆ ನೀರಿದೆ ಎಂದು ಈಗಾಗಲೇ ಹೇಳಿವೆ. ಆದರೆ, ಸೋಮವಾರ ಪ್ರಕಟವಾದ ಎರಡು ಸಂಶೋಧನೆಗಳು ಚಂದ್ರನ ಮೇಲೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ನೀರು  ಇರಬಹುದು ಎಂದು ತಿಳಿಸಿವೆ.

ಭವಿಷ್ಯದಲ್ಲಿ ಬಾಹ್ಯಾಕಾಶಯಾನಿಗಳು ಚಂದ್ರನ ಮೇಲೆ ನೀರು ಅಥವಾ ಇಂಧನವನ್ನು ಪಡೆಯಬಹುದು ಎಂದು ನಾನಾ

ತಿಳಿಸಿದೆ. ದಶಕದ ಚಂದ್ರನ ಮೇಲೆ ನೀರಿನ ಕುರುಹುಗಳಿವೆ ಎಂಬುದನ್ನು ಸರಣಿ ಸಂಶೋಧನೆಗಳು ತಿಳಿಸುವವರೆಗೂ ಚಂದ್ರನಲ್ಲಿ ನೀರಿದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆದರೆ, ಈಗ ಯತೇಚ್ಛ ನೀರಿನ ಅಂಶ ಇದೆ ಎಂದು ಹೇಳಲಾಗುತ್ತಿದೆ.

ನೇಚರ್ ಅಸ್ಟ್ರೋನಮಿಯಲ್ಲಿ ಸೋಮವಾರ ಪ್ರಕಟವಾದ ಎರಡು ಹೊಸ ಅಧ್ಯಯನಗಳು ಚಂದ್ರನ ಧ್ರುವ ಪ್ರದೇಶಗಳಲ್ಲಿ ಅಂದರೆ, ಶಾಶ್ವತವಾಗಿ ನೆರಳು ಇರುವ ಕೋಲ್ಡ್‌ ಟ್ರ್ಯಾಪ್ಸ್‌ಗಳಲ್ಲಿ ಸಂಗ್ರಹವಾಗಿರುವ ಐಸ್ ಸೇರಿ, ಈ ಹಿಂದೆ ಯೋಚಿಸಿದ್ದಕ್ಕಿಂತ ಹೆಚ್ಚಿನ ನೀರು ಇರಬಹುದು ಎಂದು ತಿಳಿಸಿವೆ.

ಹಿಂದಿನ ಸಂಶೋಧನೆ ಚಂದ್ರನ ಮೇಲ್ಮೈ ಸ್ಕ್ಯಾನ್ ಮಾಡುವ ಮೂಲಕ ನೀರಿನ ಕುರುಹುಗಳನ್ನು ಕಂಡುಹಿಡಿದಿತ್ತು. ಆದರೆ, ನೀರು (H2O) ಮತ್ತು ಹೈಡ್ರಾಕ್ಸಿಲ್ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ, ಹೊಸ ಅಧ್ಯಯನ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶಗಳಲ್ಲಿಯೂ ನೀರಿದೆ ಎಂಬುದಕ್ಕೆ ಮತ್ತಷ್ಟು ಸಾಕ್ಷಿಗಳನ್ನು ಒದಗಿಸುತ್ತದೆ.

ನಾಸಾದ ವಿಜ್ಞಾನಿಗಳು ಸೋಫಿಯಾ ಏರ್‌ಬೋನ್‌ ಟೆಲೆಸ್ಕೋಪ್‌ ದತ್ತಾಂಶ ಬಳಸಿಕೊಂಡು ಚಂದ್ರನ ಮೇಲೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ನೀರಿದೆ ಎಂದು ಹೇಳಿದ್ದಾರೆ. ನೀರು ಗಾಜಿನ ಮಣಿಗಳಲ್ಲಿ ಸಿಕ್ಕಿಹಾಕಿಕೊಂಡಿರಬಹುದು ಅಥವಾ ಚಂದ್ರನ ಕಠಿಣ ವಾತಾವರಣದಿಂದ ಅದನ್ನು ರಕ್ಷಿಸುವ ಮತ್ತೊಂದು ವಸ್ತುವಿನಲ್ಲಿ ಸಿಲುಕಿರಬಹುದು ಎಂದು ಸಂಶೋಧಕರು ನಂಬಿದ್ದಾರೆ.

Related posts

ಮುಂಗಾರಿನ ಅಬ್ಬರಕ್ಕೆ 2 ಬಲಿ; ಹಲವೆಡೆ ಪ್ರವಾಹ ಭೀತಿ, ಗುಡ್ಡ ಕುಸಿತ, ಸೇತುವೆ ಮುಳುಗಡೆ

Times fo Deenabandhu

ಎಸ್‌ಎಸ್‌ಎಲ್‌ಸಿ, ಪಿಯುಸಿ ಪ್ರಶ್ನೆ ಪತ್ರಿಕೆ ‘ಲೀಕ್’ ವದಂತಿಗೆ ಸೈಬರ್ ‘ಸೀಲ್’..!

Times fo Deenabandhu

ಸೆ.10ರಂದು ರಾಜನಾಥ ಸಿಂಗ್‌ ನೇತೃತ್ವದಲ್ಲಿ ರಫೇಲ್‌ ವಿಮಾನ ಸೇನೆಗೆ ನಿಯೋಜನೆ

Times fo Deenabandhu