Times of Deenabandhu
  • Home
  • ಮುಖ್ಯಾಂಶಗಳು
  • ಇಂದು ವಿಧಾನ ಪರಿಷತ್ ಶಿಕ್ಷಕ-ಪದವೀಧರ ಕ್ಷೇತ್ರಗಳ ಚುನಾವಣೆಗೆ ಮತದಾನ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಇಂದು ವಿಧಾನ ಪರಿಷತ್ ಶಿಕ್ಷಕ-ಪದವೀಧರ ಕ್ಷೇತ್ರಗಳ ಚುನಾವಣೆಗೆ ಮತದಾನ

ಬೆಂಗಳೂರು: ವಿಧಾನ ಪರಿಷತ್‌ನ ಶಿಕ್ಷಕ-ಪದವೀಧರ ಕ್ಷೇತ್ರಗಳ ಚುನಾವಣೆಗೆ ಬುಧವಾರ ಮತದಾನ ನಡೆಯಲಿದೆ.
ಬೆಂಗಳೂರು, ಈಶಾನ್ಯ ಶಿಕ್ಷಕರ ಕ್ಷೇತ್ರಗಳು ಹಾಗೂ ಆಗ್ನೇಯ, ಪಶ್ಚಿಮ ಪದವೀಧರ ಕ್ಷೇತ್ರಗಳಿಗೆ ಚುನಾವಣೆ  ನಡೆಯಲಿದೆ.

ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಕೋವಿಡ್‌ ನಡುವೆಯೂ ಪ್ರಜ್ಞಾವಂತ ಮತದಾರರನ್ನು ಸೆಳೆಯಲು ಸಾಕಷ್ಟು ಪ್ರಚಾರ ನಡೆಸಿವೆ.

ಕಳೆದ ಬಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಉಳಿದಂತೆ ಪರಿಷತ್‌ ಸದಸ್ಯತ್ವದ ಅವಧಿ ಪೂರೈಸಿ ಮರು ಆಯ್ಕೆ ಬಯಸಿರುವ ಶರಣಪ್ಪ ಮಟ್ಟೂರು, ಚೌಡರೆಡ್ಡಿ ತೂಪಲ್ಲಿ ಹಾಗೂ ವಿ.ಎಸ್‌. ಸಂಕನೂರ ಕಣದಲ್ಲಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದಿಂದ ಬಿಜೆಪಿಗೆ ಬಂಡಾಯ ಹೂಡಿದ್ದ ಡಿ.ಟಿ. ಶ್ರೀನಿವಾಸ್‌, ಹಾಲನೂರು ಎಸ್‌.ಲೇಪಾಕ್ಷ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಈ ನಡುವೆ ಬುಧವಾರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

ಕ್ಷೇತ್ರವಾರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು

ಬೆಂಗಳೂರು ಶಿಕ್ಷಕರ ಕ್ಷೇತ್ರ
ಬಿಜೆಪಿ: ಪುಟ್ಟಣ್ಣ
ಕಾಂಗ್ರೆಸ್‌: ಪ್ರವೀಣ್‌ ಪೀಟರ್‌
ಜೆಡಿಎಸ್‌: ಎ.ಪಿ.ರಂಗನಾಥ್‌

ಈಶಾನ್ಯ ಶಿಕ್ಷಕರ ಕ್ಷೇತ್ರ
ಬಿಜೆಪಿ: ಶಶಿಲ್‌ ನಮೋಶಿ
ಕಾಂಗ್ರೆಸ್‌: ಶರಣಪ್ಪ ಮಟ್ಟೂರು
ಜೆಡಿಎಸ್‌: ತಿಮ್ಮಯ್ಯ ಪುರ್ಲೆ

ಆಗ್ನೇಯ ಪದವೀಧರ ಕ್ಷೇತ್ರ
ಬಿಜೆಪಿ: ಡಾ.ಎಂ.ಚಿದಾನಂದಗೌಡ
ಕಾಂಗ್ರೆಸ್‌: ರಮೇಶ್‌ ಬಾಬು
ಜೆಡಿಎಸ್‌: ಚೌಡರೆಡ್ಡಿ ತೂಪಲ್ಲಿ

ಪಶ್ಚಿಮ ಪದವೀಧರ ಕ್ಷೇತ್ರ
ಬಿಜೆಪಿ: ವಿ.ಎಸ್‌.ಸಂಕನೂರ
ಕಾಂಗ್ರೆಸ್‌: ಡಾ.ಆರ್‌.ಎಂ.ಕುಬೇರಪ್ಪ
ಜೆಡಿಎಸ್‌ ಬೆಂಬಲಿತ ಪಕ್ಷೇತರ: ಬಸವರಾಜ ಗುರಿಕಾರ

Related posts

ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿರುವ ಈರುಳ್ಳಿ ! ದರ ನಿಯಂತ್ರಣಕ್ಕೆ ಕೇಂದ್ರದ ಕ್ರಮ

Times fo Deenabandhu

ಈ ಬೆಟ್ಟಕ್ಕೆ ಬರುತ್ತಾರಂತೆ ಅಪ್ಸರೆಯರು…!

Times fo Deenabandhu

ಭಾರತಕ್ಕೆ ಬಂದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಪ್ರಯಾಣಿಸುವ ಏರ್ ಇಂಡಿಯಾ ವನ್ ವಿಮಾನ

Times fo Deenabandhu