Times of Deenabandhu
  • Home
  • ಜಿಲ್ಲೆ
  • ಗೊಂದಿ ಅಣೆಕಟ್ಟು ಅಚ್ಚುಕಟ್ಟು ಪ್ರದೇಶವನ್ನು  ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿಪಡಿಸಲು ಚಿಂತನೆ- ಪವಿತ್ರ ರಾಮಯ್ಯ…
ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ

ಗೊಂದಿ ಅಣೆಕಟ್ಟು ಅಚ್ಚುಕಟ್ಟು ಪ್ರದೇಶವನ್ನು  ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿಪಡಿಸಲು ಚಿಂತನೆ- ಪವಿತ್ರ ರಾಮಯ್ಯ…

ಭದ್ರಾವತಿ ಆ.27: ಗೊಂದಿ ಅಣೆಕಟ್ಟು ಅಚ್ಚುಕಟ್ಟು ಪ್ರದೇಶವನ್ನು  ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿಪಡಿಸಲು ಚಿಂತಿಸಲಾಗಿದೆ ಎಂದು ಭದ್ರಾ ಕಾಡ ಅಧ್ಯಕ್ಷರಾದ ಪವಿತ್ರ ರಾಮಯ್ಯ ತಿಳಿಸಿದ್ದಾರೆ.

ಅವರು ಇಂದು ಪ್ರಾಧಿಕಾರದ ವ್ಯಾಪ್ತಿಗೆ ಬರುವ ಹಿರಿಯೂರು ಜಿಲ್ಲಾ ಪಂಚಾಯತ್ ಗೊಂದಿ ಗ್ರಾಮದಲ್ಲಿ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಗೊಂದಿ ಅಣೆಕಟ್ಟನ್ನು ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರೊಂದಿಗೆ, ಸದಸ್ಯರೊಂದಿಗೆ, ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ, ಗ್ರಾಮದ ರೈತರೊಂದಿಗೆ  ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಗೊಂದಿ ಅಣೆಕಟ್ಟು ಅಭಿವೃದ್ದಿ ಪಡಿಸುವುದ ರಿಂದ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಬಲ ನೀಡಿದಂತಾಗುತ್ತದೆ, ನೂರಾರು ಜನರ ನಿತ್ಯ ಜೀವನಕ್ಕೆ ಅನುಕೂಲವಾಗುತ್ತದೆ.. ಜೊತೆಗೆ ಸ್ಥಳೀಯ ಆಡಳಿತಕ್ಕೆ, ರಾಜ್ಯ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ಆದಾಯ ಕೂಡ ಬರುತ್ತದೆ.. ಇದನ್ನು ಸರ್ಕಾರದ ಗಮನಕ್ಕೆ ತಂದು ಅಭಿವೃದ್ದಿ ಪಡಿಸಲಾಗುವುದೆಂದರು.

ಈ ಸಂದರ್ಭ ಅಣೆಕಟ್ಟೆಯನ್ನು ಉನ್ನತಿ ಕರಿಸುವುದರಿಂದ ಸುತ್ತಲಿರುವ ಹನ್ನೊಂದು ನೀರು ಬಳಕೆದಾರರ ಸಹಕಾರ ಸಂಘಗಳಿಗೆ, ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ. ಈ ಕುರಿತು ಮುಖ್ಯಮಂತ್ರಿಗಳಿಗೆ, ಸಂಸದರಿಗೆ ಸೂಕ್ತ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗುವುದು, ರೈತರ ಹಿತಾಸಕ್ತಿಯೇ ನನ್ನ ಮೊದಲ ಆದ್ಯತೆ ನಿಮ್ಮ ಮನವಿಯನ್ನು ನಾನು ಪುರಸ್ಕಿರಿಸುತ್ತೇನೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕಾಡ ನಿರ್ದೇಶಕರಾದ ಷಡಕ್ಷರಿ ಅವರು ಜೊತೆಗಿದ್ದರು.

Related posts

ಹಿರಿಯ ಜೆಡಿಎಸ್ ಮುಖಂಡ ಎಸ್.ಎ.ವಿಜೇಯೇಂದ್ರ ನಿಧನ

Times fo Deenabandhu

 ವಿದೇಶಿ ಹೂಡಿಕೆ ನಿಯಮ ಬಿಗಿ, ಚೀನಾ ಬಂಡವಾಳಕ್ಕೆ ಭಾರತದ ಮೂಗುದಾರ

Times fo Deenabandhu

ಶಿವಮೊಗ್ಗದಲ್ಲಿ  ಕೊರೊನಾ : ಇಂದು ಕೇವಲ  31 ಜನರಿಗೆ ಸೋಂಕು … 32 ಜನ ಗುಣಮುಖ : ಯಾವುದೇ ಸಾವಿಲ್ಲ….

Times fo Deenabandhu