Times of Deenabandhu
  • Home
  • ನಮ್ಮ ವಿಶೇಷ
  • ಶಿವಮೊಗ್ಗದಲ್ಲಿ ಅದೇ ಭಕ್ತಿ ಸಂಭ್ರಮದಿಂದ ಸರಳವಾಗಿ ಆಚರಿಸಿದ ವಿಜಯದಶಮಿ…
ನಮ್ಮ ವಿಶೇಷ ಮುಖ್ಯಾಂಶಗಳು ಶಿವಮೊಗ್ಗ ಸಾಹಿತ್ಯ/ಸಂಸ್ಕೃತಿ

ಶಿವಮೊಗ್ಗದಲ್ಲಿ ಅದೇ ಭಕ್ತಿ ಸಂಭ್ರಮದಿಂದ ಸರಳವಾಗಿ ಆಚರಿಸಿದ ವಿಜಯದಶಮಿ…

ಶಿವಮೊಗ್ಗ ಅ.26: ಇಡೀ ಜಗತ್ತನೆ ಕಾಡಿದ ಕೊರೊನಾದಿಂದಾಗಿ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೂ ಅದರ ಛಾಯೆ ಅವರಸಿಬಿಟ್ಟಿದೆ. ಅದೇ ರಾಜ್ಯಾದ್ಯಂತ ಅತ್ಯಂತ ಸರಳವಾಗಿ ವಿಜಯದಶಮಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದ ರೀತಿಯಲ್ಲಿಯೇ ಶಿವಮೊಗ್ಗದಲ್ಲೂ ಅತ್ಯಂತ ಸರಳವಾಗಿ ವಿಜಯದಶಮಿ ಆಚರಿಸಲಾಯಿತು.

ಇಂದು ಸಂಜೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಹೊರಟ ಸರಳ ಮೆರವಣಿಗೆಯಲ್ಲಿ ಮುಜರಾಯಿ ಇಲಾಖೆಯ ಐದು ದೇವರುಗಳು ನೇರವಾಗಿ ಹಳೇ ಜೈಲಿಗೆ ತೆರಳಿದವು. ಈ ಬಾರಿ 407 ವಾಹನದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದ ಉತ್ಸವ ಮೂರ್ತಿಯನ್ನ ಹೊತ್ತು ಬನ್ನಿಮಂಟಪ ನಿರ್ಮಿಸಿದ ಹಳೇ ಜೈಲಿಗೆ ತೆರಳಲಾಯಿತು. ಪ್ರತಿ ಬಾರಿಯು ಅಂಬಾರಿಯನ್ನ ಆನೆಯ ಮೂಲಕ ತರಲಾಗುತ್ತಿತ್ತು. ಈ ಬಾರಿ ಲಾರಿಯಲ್ಲಿ ಹೊತ್ತು ತರಲಾಗಿದೆ.

ಈ ಬಾರಿ ಬನ್ನಿಮುಡಿಯುವ ಕಾರ್ಯಕ್ರಮವನ್ನು  ರದ್ದುಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬನ್ನಿಮುಡಿಯುವ ಕಾರ್ಯಕ್ರಮಕ್ಕೆ ಸಾರ್ವಜನಿಕರು ಭಾಗವಹಿಸಿರಲಿಲ್ಲ. ತಹಶೀಲ್ದಾರ್ ಎನ್.ಜೆ. ನಾಗರಾಜ್ ರವರು ಬನ್ನಿ ಕಡೆದರು.

ಈ ನಡುವೆ ಶಿವಮೊಗ್ಗದಲ್ಲಿ 4 ಕಡೆ ಎಲ್ ಇ ಡಿ ಸ್ಕ್ರೀನ್ ಅಳವಡಿಸಿ ಸಾರ್ವಜನಿಕರಿಗೆ ದಸರಾ ಹಬ್ಬದ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗಿತ್ತು. ಗೋಪಿ ವೃತ್ತ, ಶಿವಪ್ಪ ನಾಯಕನ ಮೂರ್ತಿ, ಬಿ.ಹೆಚ್ ರಸ್ತೆ, ವಿನೋಬ ನಗರ ಪೊಲೀಸ್ ಚೌಕಿ ಹಾಗು ಶಿವಮೂರ್ತಿ ವೃತ್ತದ ಬಳಿ ಎಲ್ ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು.

 

 

 

 

Related posts

ಕರುನಾಡಿಗೆ ‘ಮಹಾ’ ಕೊರೊನಾಘಾತ..!

ಸಿಎಎ ಜಾರಿ: ಬಾಂಗ್ಲಾಕ್ಕೆ ಹಿಂದಿರುಗುತ್ತಿರುವರ ಸಂಖ್ಯೆ ಹೆಚ್ಚಳ ಎಂದ ಬಿಎಸ್‌ಎಫ್‌

Times fo Deenabandhu

 ಭಾರತದ ಮಿಲಿಟರಿ ಮಾಹಿತಿಗೆ ಕನ್ನ ಹಾಕುತ್ತಿದ್ದಾರಾ ಚೀನಿ ಹ್ಯಾಕರ್ಸ್?: ಏನಿದು 61398 ರಹಸ್ಯ ಘಟಕ?

Times fo Deenabandhu