Times of Deenabandhu
ನಮ್ಮ ವಿಶೇಷ ಶಿವಮೊಗ್ಗ

ಮಾತೃ ಹೃದಯಿ ಶಿಕ್ಷಕಿ ಅಂಜನಾ ಗೋವಿಂದರಾಜು ಇನ್ನಿಲ್ಲ….

ಶಿವಮೊಗ್ಗ ಆ.26: ನಗರದ ಕಸ್ತೂರ ಬಾ ಪ್ರೌಢಶಾಲೆ ಹಾಗೂ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶ್ರೀಮತಿ ಅಂಜನಾ ಗೋವಿಂದರಾಜು ಅವರು ಇಂದು (ಅಕ್ಟೋಬರ್ 26) ರಾತ್ರಿ 9 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರಿಗೆ 70 ವರ್ಷ ವಯಸ್ಸಾಗಿತ್ತು. ಒಬ್ಬ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಧಾರವಾಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದ ಅಂಜನಾ ಅವರು ಖ್ಯಾತ ಲೇಖಕ, ಶಿರಾಳಕೊಪ್ಪದ ಭೀಮಪ್ಪ ಮೇಷ್ಟ್ರ ಪುತ್ರಿ. ಸಾಹಿತ್ಯ ಚಟುವಟಿಕೆಯಲ್ಲಿ ಆಸಕ್ತರಾಗಿದ್ದ ಇವರು ಸಾಹಿತ್ಯ ಪರಿಷತ್ತಿನ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ಪತಿ ದಿವಂಗತ ಗೋವಿಂದರಾಜು ಅವರು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.

ಶ್ರೀಮತಿ ಅಂಜನಾ ಗೋವಿಂದರಾಜು ಅವರು ಮೂರು ದಶಕಗಳ ಕಾಲ ಬೋಧಕರಾಗಿ ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿದ್ದರು.

ಇವರ ಅಂತ್ಯ ಸಂಸ್ಕಾರವು ಬೆಂಗಳೂರಿನಲ್ಲಿ ಸೋಮವಾರ (ಅಕ್ಟೋಬರ್ 26) ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

“ಬಿ.ಆರ್.ಪ್ರಾಜೆಕ್ಟ್ ನ ರಾಷ್ಟ್ರೀಯ ಪದವಿಪೂರ್ವ ಕಾಲೇಜ್ ನಲ್ಲಿ 8ನೇ ತರಗತಿಯಲ್ಲಿ ಓದುವಾಗ ನಮ್ಗೆ ಕನ್ನಡ ತರಗತಿಗಳನ್ನು ತೆಗುದುಕೊಳ್ಳುತ್ತಿದ್ದರು. ವಿದ್ಯಾರ್ಥಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ ಮಾತೃ ಹೃದಯಿಯಾಗಿದ್ದರು. ಅವರ ನಿಧನದ ಸುದ್ದಿ ನಮಗೆ ಅತೀವ ದುಖ: ತಂದಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಅವರ ವಿದ್ಯಾರ್ಥಿಗಳೆಲ್ಲ ಆ ಪರಮಾತ್ಮನಲ್ಲಿ ಪ್ರಾರ್ಥಿಸುತ್ಥೆವೆ.” -ಎಂ.ರಮೇಶ್ ಶಂಕರಘಟ್ಟ.

 

 

 

 

 

 

Related posts

ಕುವೆಂಪು ವಿಶ್ವವಿದ್ಯಾಲಯ ಅಂತರ್ ವಿವಿ ದಕ್ಷಿಣ ವಲಯ ಖೊಖೊ: ಅಖಿಲ ಭಾರತ ಅಂತರ್ ವಿವಿ ಮಟ್ಟಕ್ಕೆ ಕುವೆಂಪು, ಮಂಗಳೂರು, ದಾವಣಗೆರೆ, ಕ್ಯಾಲಿಕಟ್ ವಿವಿ

Times fo Deenabandhu

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ/ಅಂಗನವಾಡಿ ಕಾರ್ಯಕರ್ತೆ : ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

Times fo Deenabandhu

ವಿವಿಧ ಸೌಲಭ್ಯಗಳಿಗಾಗಿ ಆಸಕ್ತರಿಂದ ಅರ್ಜಿ ಆಹ್ವಾನ/ ನ . 18ರಿಂದ ಪೊಲೀಸ್ ನೇಮಕಾತಿ ಪರೀಕ್ಷೆ

Times fo Deenabandhu