Times of Deenabandhu
  • Home
  • ಕ್ರೀಡೆ
  • ಐಪಿಎಲ್ 2020ರ ಪ್ಲೇ ಆಫ್ಸ್, ಫೈನಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟ…..
ಕ್ರೀಡೆ ಮುಖ್ಯಾಂಶಗಳು

ಐಪಿಎಲ್ 2020ರ ಪ್ಲೇ ಆಫ್ಸ್, ಫೈನಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟ…..

ದುಬೈ ಆ.26: ನವೆಂಬರ್ 3 ರಂದು ಐ‌ಪಿ‌ಎಲ್ ಲೀಗ್ ಹಂತದ ಇಲ್ಲ ಪಂದ್ಯಗಳು ಮುಕ್ತಾಯವಾಗಲಿದ್ದು, ಈಗ ಬಿ‌ಸಿ‌ಸಿ‌ಐ ಭಾನುವಾರ ಐಪಿಎಲ್ 2020ರ ಪ್ಲೇ ಆಫ್ಸ್, ಫೈನಲ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಅಧಿಕೃತ ದಿನಾಂಕಗಳನ್ನು  ಐಪಿಎಲ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.

ನವೆಂಬರ್ 5 ರಿಂದ 10ರ ವರೆಗೂ ದುಬೈ ಮತ್ತು ಅಬುಧಾಬಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು,  ಈ ಹಿನ್ನೆಲೆಯಲ್ಲಿ ಪ್ಲೇ ಆಫ್ಸ್, ಫೈನಲ್ ಶೆಡ್ಯೂಲ್ ಬಿಡುಗಡೆಯಾಗಿದ್ದು, ನವೆಂಬರ್ 4ರಂದು ವಿಶ್ರಾಂತಿ ನೀಡಲಾಗಿದೆ. ನ.5 ರಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ದುಬೈ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಎಂದಿನಂತೆ ಅಂಕಪಟ್ಟಿಯಲ್ಲಿ ಮೊದಲ 2 ಸ್ಥಾನಗಳಲ್ಲಿರುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡದ ಫೈನಲ್‍ಗೆ ತಲುಪಲಿದೆ.

ನ.6 ರಂದು ಅಬುಧಾಬಿಯಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಅಂಕಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನದಲ್ಲಿರುವ ತಂಡಗಳ ನಡುವೆ ಪಂದ್ಯ ನಡೆಯಲಿದೆ. ನ.7 ವಿಶ್ರಾಂತಿಯ ದಿನವಾಗಿದ್ದು, ನ.8 ರಂದು 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ವೇಳೆ

ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಸೋತ ತಂಡ ಹಾಗೂ ಎಲಿಮೆನೇಟರ್ ಪಂದ್ಯದಲ್ಲಿ ಗೆದ್ದ ಪಂದ್ಯಗಳ ನಡುವೆ ಹಣಾಹಣಿ ನಡೆಯಲಿದ್ದು, ಗೆಲುವು ಪಡೆದ ತಂಡ ಫೈನಲ್ ತಲುಪಲಿದೆ.

ನ.9 ವಿಶ್ರಾಂತಿಯ ದಿನವಾಗಿದ್ದು, ಐಪಿಎಲ್ 2020ರ ಫೈನಲ್ ಪಂದ್ಯ ದುಬೈನಲ್ಲಿ ನ.10 ರಂದು ನಡೆಯಲಿದೆ. ಕ್ವಾಲಿಫೈಯರ್ 1 ಮತ್ತು 2 ಪಂದ್ಯಗಳಲ್ಲಿ ಗೆಲುವು ಪಡೆದ ತಂಡಗಳು ಕಪ್‍ಗಾಗಿ ಮುಖಾಮುಖಿ ಆಗಲಿದೆ. ಪ್ಲೇ ಆಫ್ಸ್, ಫೈನಲ್ ಪಂದ್ಯ ರಾತ್ರಿ 7.30ರಿಂದ ಆರಂಭವಾಗಲಿದೆ.

 

 

 

 

Related posts

ಉದ್ಯಮಿಗಳಿಗೆ ಕೃಷಿ ಭೂಮಿ ಖರೀದಿಗೆ ಅವಕಾಶ, ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ

Times fo Deenabandhu

ಈ ಕಾಡಿನ ನಡುವೆ ಕಾಣುವ ಬೆಳಕು `ದೆವ್ವ’ಗಳದ್ದಾ…?

Times fo Deenabandhu

 ಐಪಿಎಲ್​ಗೆ ಮುನ್ನ ನವೀಕರಣಗೊಂಡ ಶಾರ್ಜಾ ಕ್ರೀಡಾಂಗಣಕ್ಕೆ ಮನಸೋತ ಸೌರವ್ ಗಂಗೂಲಿ

Times fo Deenabandhu