Times of Deenabandhu
  • Home
  • ಮುಖ್ಯಾಂಶಗಳು
  • ರಾಜ್ಯ ಬಂದ್​​; ಏನೇನಿರತ್ತೆ..ಏನಿರಲ್ಲ ಒಮ್ಮೆ ಚೆಕ್​ ಮಾಡಿಕೊಂಡುಬಿಡಿ..
ಪ್ರಧಾನ ಸುದ್ದಿ ಮುಖ್ಯಾಂಶಗಳು

ರಾಜ್ಯ ಬಂದ್​​; ಏನೇನಿರತ್ತೆ..ಏನಿರಲ್ಲ ಒಮ್ಮೆ ಚೆಕ್​ ಮಾಡಿಕೊಂಡುಬಿಡಿ..

 

ಬೆಂಗಳೂರು: ಸರ್ಕಾರ ಅಂಗೀಕಾರ ಮಾಡಿರುವ ಭೂ ಸುಧಾರಣಾ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ನಾಳೆ (ಸೆಪ್ಟೆಂಬರ್​ 28) ರೈತಪರ ಸಂಘಟನೆಗಳು ಬಂದ್​ಗೆ ಕರೆ ನೀಡಿವೆ. ಈ ಕರ್ನಾಟಕ ಬಂದ್​ ನಿಮಿತ್ತ ನಾಳೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಸೇವೆಗಳೂ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

 

ರೈತಪರ ಸಂಘಟನೆಗಳು ಕರೆ ನೀಡಿರುವ ಬಂದ್​ಗೆ ದಲಿತ, ಕನ್ನಡಪರ, ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿರುವ ಜತೆಗೆ ಪ್ರತಿಪಕ್ಷಗಳೂ ಸಂಪೂರ್ಣ ಬೆಂಬಲ ಘೋಷಿಸಿವೆ. ಈ ಕಾರಣದಿಂದ ಬಂದ್​ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ರೈತರು ನಾಳೆ ಬೆಳಗ್ಗೆ 11 ಗಂಟೆಗೆ ಟೌನ್‌ಹಾಲ್‌ನಿಂದ ಕೆ.ಜಿ.ರಸ್ತೆ, ಮೈಸೂರ್​ ಬ್ಯಾಂಕ್ ವೃತ್ತದ ಮಾರ್ಗವಾಗಿ ಫ್ರೀಡಂಪಾರ್ಕ್‌ವರೆಗೆ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸಲಿವೆ. ನಗರದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸೂಕ್ಷ್ಮಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಕಾವಲು ಏರ್ಪಡಿಸಲಾಗಿದೆ.

 

ಏನೆಲ್ಲ ಸೇವೆಗಳು ಲಭ್ಯ?

ದಿನಪತ್ರಿಕೆ, ಹಾಲು, ಮೆಡಿಕಲ್​, ಆಸ್ಪತ್ರೆ ಸೇವೆಗಳು, ಹೋಟೆಲ್​, ರೈಲು, ವಿಮಾನ, ಮೆಟ್ರೋ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇವೆಗಳು.

 

ಏನೆಲ್ಲ ಲಭ್ಯ ಇರುವುದಿಲ್ಲ?

ಓಲಾ-ಉಬರ್, ಖಾಸಗಿ ಬಸ್, ಲಾರಿ ಸೇವೆಗಳು, ಅಂಗಡಿ ಮುಂಗಟ್ಟುಗಳು, ಮಾಲ್‌ಗಳು, ಆಟೋ, ಏರ್‌ಪೋರ್ಟ್ ಟ್ಯಾಕ್ಸಿ, ಹಣ್ಣು, ತರಕಾರಿ, ಬೀದಿ ಬದಿ ವ್ಯಾಪಾರಗಳು.

Related posts

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ಗೆ ‘ಇದೆಲ್ಲ ಹೇಗೆ ಸಾಧ್ಯ?’ ಅಂತ ಪ್ರಶ್ನೆ ಮಾಡಿದ ಬಾಲಿವುಡ್ ನಟಿ ದಿಶಾ ಪಟಾನಿ!

Times fo Deenabandhu

ಜನವರಿ 2ಕ್ಕೆ ತುಮಕೂರಿಗೆ ಪ್ರಧಾನಿ

Times fo Deenabandhu

ಐಪಿಎಲ್: ಸನ್’ರೈಸರ್ ಮಣಿಸಿದ ಮುಂಬೈ ಇಂಡಿಯನ್ಸ್

Times fo Deenabandhu