Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಲಾಡಿಯಂತಿದೆಯಲ್ಲ ಎಂದು ಎಳೆದವನ ಕೈಗೆ ಬಂತು 17 ಅಡಿ ಉದ್ದದ ಹುಳು!

 

 

ಬ್ಯಾಂಕಾಕ್​: ತೀವ್ರತರವಾದ ಹೊಟ್ಟೆನೋವು ತಾಳದೆ ವ್ಯಕ್ತಿಯೊಬ್ಬ ಮಲವಿಸರ್ಜನೆಗೆ ತೆರಳಿದ. ಇದೇನೋ ಲಾಡಿಯಂತಿದೆಯಲ್ಲ ಎಂದು ಎಳೆದವನ ಕೈಗೆ 17 ಅಡಿ ಉದ್ದದ ಹಳದಿ ಬಣ್ಣದ ಲಾಡಿ ಹುಳ ಕೈಗೆ ಬಂದಿತ್ತು! ಇಂತಹ ವಿಲಕ್ಷಣ ಆರೋಗ್ಯ ಸಮಸ್ಯೆ ಎದುರಿಸಿದಾತ ಥಾಯ್ಲೆಂಡ್​ನ ನಕೋನ್ ಸಾವನ್ ಎಂಬಲ್ಲಿಯ ದೌಂಗ್ ಚಾನ್​ ದಚ್ಯೊಡ್ಡೆ (43).

 

ಮಲವಿಸರ್ಜನೆ ಆದರೂ ಇದೇನೋ ಲಾಡಿಯಂತೆ ನೇತಾಡುತ್ತಿದೆಯಲ್ಲ ಎಂದು ಆತ ಎಳೆಯುತ್ತ ಹೋದಾಗ ಕೈಗೆ 17 ಅಡಿ ಉದ್ದದ ಹಳದಿ ಬಣ್ಣದ ಲಾಡಿಹುಳು ಬಂದಿತ್ತು. ಬೆಚ್ಚಿಬಿದ್ದ ದಚ್ಯೊಡ್ಡೆ, ಅದನ್ನೆತ್ತಿಕೊಂಡು ಡಾಕ್ಟರ್ ಬಳಿಗೋಡಿದ್ದ. ಅವರು ಅದನ್ನು ಗುರುತಿಸಿ ಹಳದಿ ಲಾಡಿಹುಳು ಎಂಬುದನ್ನು ಆತನಿಗೆ ಮನವರಿಕೆ ಮಾಡಿಕೊಟ್ಟರು. ಇದಾದ ಬಳಿಕ ದಚ್ಯೊಡ್ಡೆ, ತನಗೆ ಈಗ ಹೊಟ್ಟೆನೋವು ಇಲ್ಲ. ಈಗ ಎಷ್ಟೋ ಆರೋಗ್ಯವಾಗಿರುವಂತೆ ಭಾಸವಾಗುತ್ತಿದೆ ಎಂದು ಹೇಳಿಕೊಂಡಿದ್ದಾನೆ.

ಕಳೆದ ವರ್ಷವೂ ಥಾಯ್ಲೆಂಡ್​ನಲ್ಲಿ ಇಂಥ ಘಟನೆ ನಡೆದಿತ್ತು. ಈಶಾನ್ಯ ಥಾಯ್ಲೆಂಡ್​ನ ಉಡೋನ್ ಥನಿಯ ಕ್ರಿಟ್ಸದ ರಾಟ್​ಪ್ರಚೂಮ್​ (44) ಎಂಬಾತ ಭಯಾನಕ 32 ಅಡಿ ಉದ್ದದ ಲಾಡಿಹುಳವನ್ನು ಹೊರತೆಗೆದಿದ್ದ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ

Related posts

ಸೆಕೆಂಡ್ ಹ್ಯಾಂಡ್ ಫರ್ನಿಚರ್‌ನೊಳಗಿತ್ತು 30.6 ಲಕ್ಷ ರೂಪಾಯಿ…!

Times fo Deenabandhu

ಕೇವಲ 1 ಗಂಟೆಯಲ್ಲಿ ಪಶುವೈದ್ಯೆ ಬದುಕನ್ನೇ ನರಕ ಮಾಡಿದ ಪಾಪಿಗಳು…

Times fo Deenabandhu

ಕರ್ನಾಟಕ ಮತ್ತು ಹೈದರಾಬಾದ್ ತಂಡಗಳ ನಾಯ್ಡು ಟ್ರೋಫಿ ಪಂದ್ಯಾವಳಿ ಆರಂಭ

Times fo Deenabandhu