Times of Deenabandhu
  • Home
  • ಮುಖ್ಯಾಂಶಗಳು
  • ಐಪಿಎಲ್: ಕೆಕೆಆರ್‌ಗೆ ಗೆಲುವಿನ ರಸಗುಲ್ಲಾ ! ‌ರೈಸರ್ಸ್‌ಗೆ ಎರಡನೇ ಸೋಲು
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಐಪಿಎಲ್: ಕೆಕೆಆರ್‌ಗೆ ಗೆಲುವಿನ ರಸಗುಲ್ಲಾ ! ‌ರೈಸರ್ಸ್‌ಗೆ ಎರಡನೇ ಸೋಲು

ದುಬೈ: ಸನ್‌ರೈಸರ್ಸ್‌ ಹೈದರಾಬಾದ್‌ ನೀಡಿದ್ದ ಸಾಧಾರಣ ಗುರಿ ಎದುರು ಉತ್ತಮ ಬ್ಯಾಟಿಂಗ್‌ ಮಾಡಿದ ಶುಭಮನ್‌ ಗಿಲ್‌ ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಸುಲಭ ಜಯ ತಂದುಕೊಟ್ಟರು. ಹೀಗಾಗಿ ಡೇವಿಡ್‌ ವಾರ್ನರ್‌ ಪಡೆ ಸತತ ಎರಡನೇ ಸೋಲು ಅನುಭವಿಸಬೇಕಾಯಿತು.

ಇದಕ್ಕೂ ಮೊದಲು ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ರೈಸರ್ಸ್ ಪರ ಕನ್ನಡಿಗ ಮನೀಷ್‌ ಪಾಂಡೆ ಜವಾಬ್ದಾರಿಯುತ ಅರ್ಧಶತಕ ಗಳಿಸಿಸಿದ್ದರು. 38 ಎಸೆತಗಳನ್ನು ಎದುರಿಸಿದ್ದ ಪಾಂಡೆ 2 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 51 ರನ್‌‌ ಬಾರಿಸಿದ್ದರು. ಹೀಗಾಗಿ ಹೈದರಾಬಾದ್‌ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 142 ರನ್‌ ಗಳಿಸಿತ್ತು.

ಈ ಗುರಿ ಕೋಲ್ಕತ್ತಾಗೆ ಸವಾಲೇ ಆಗಲಿಲ್ಲ. ಆರಂಭಿಕ ಸುನೀಲ್‌ ನರೇನ್‌ ಮತ್ತು ನಾಯಕ ದಿನೇಶ್‌ ಕಾರ್ತಿಕ್‌ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರೂ ಗಿಲ್‌, ನಿತೀಶ್‌ ರಾಣಾ (26) ಮತ್ತು ಎಯಾನ್‌ ಮಾರ್ಗನ್ (42)‌ ತಮ್ಮ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರು.

62 ಎಸೆತಗಳನ್ನು ಎದುರಿಸಿದ ಶುಭಮನ್‌ ಗಿಲ್‌ 5 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 70 ರನ್‌ ಗಳಿಸಿ ಅಜೇಯರಾಗಿ ಉಳಿದರೆ, ಇವರಿಗೆ ಉತ್ತಮ ಬೆಂಬಲ ನೀಡಿದ ಮಾರ್ಗನ್‌ ತಮ್ಮ ತಂಡಕ್ಕೆ ಗೆಲುವಿನ ರನ್‌ ಹೊಡೆದರು.

ಹೈದರಾಬಾದ್‌ ಪರ ಖಲೀಲ್‌ ಅಹಮದ್‌, ಟಿ ನಟರಾಜನ್‌ ಮತ್ತು ರಶೀದ್‌ ಖಾನ್‌ ತಲಾ ಒಂದೊಂದು ವಿಕೆಟ್ ಕಬಳಿಸಿದರು.

Related posts

ಮೈಸೂರಿನಲ್ಲಿ 7 ಸೇರಿ ರಾಜ್ಯದಲ್ಲಿ 12 ಜನರಿಗೆ ಕೊರೊನಾ, ಒಟ್ಟು ಸೋಂಕಿತರು 163ಕ್ಕೆ ಏರಿಕೆ

Times fo Deenabandhu

15 ಅನರ್ಹರಲ್ಲಿ 12 ಮಂದಿ ಜಯ

Times fo Deenabandhu

 ಬ್ಯಾಂಕಿಗೆ ನುಗ್ಗಿದ ಕಳ್ಳ! : ಆದರೆ, ಕದ್ದಿದ್ದು ಹಣವನ್ನಲ್ಲ…! : ಕೇಳಿದ್ರೆ ಶಾಕ್ ಆಗ್ತೀರಿ…!

Times fo Deenabandhu