Times of Deenabandhu
  • Home
  • ಮುಖ್ಯಾಂಶಗಳು
  • ಡ್ರಗ್ಸ್ ಪ್ರಕರಣ: ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ವಿಚಾರಣೆ
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

ಡ್ರಗ್ಸ್ ಪ್ರಕರಣ: ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ವಿಚಾರಣೆ

ಮುಂಬೈನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿಗೆ ಸಂಬಂಧಿಸಿದ ಡ್ರಗ್ಸ್‌ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಮಾದಕವಸ್ತುಗಳ ನಿಯಂತ್ರಣ ಸಂಸ್ಥೆ (ಎನ್‌ಸಿಬಿ), ಬಾಲಿವುಡ್‌ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್‌, ಸಾರಾ ಅಲಿ ಖಾನ್‌ ಅವರನ್ನು ಅವರನ್ನು ಶನಿವಾರ ವಿಚಾರಣೆಗೆ ಒಳಪಡಿಸಿತು.

ಕೊಲಾಬಾದಲ್ಲಿರುವ ಎನ್‌ಸಿಬಿಯ ಈವಲೀನ್‌ ಅತಿಥಿ ಗೃಹದಲ್ಲಿ ಎನ್‌ಸಿಬಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಚಾರಣೆ ನಡೆಸಿತು.

ಆರು ಗಂಟೆಗೂ ಹೆಚ್ಚು ಕಾಲ ನಟಿಯರು ಅಧಿಕಾರಿಗಳ ಪ್ರಶ್ನೆಗಳನ್ನು ಎದುರಿಸಿದರು. ವಿಚಾರಣೆಗೆ ಒಳಗಾದ ನಂತರ ಹೊರ ಬಂದ ಮೂವರು ನಟಿಯರು ಕ್ಷೋಭೆಗೆ ಒಳಗಾದವರಂತೆ ಕಂಡುಬಂದರು.

ದೀಪಿಕಾ ಮ್ಯಾನೇಜರ್‌ ಕರಿಷ್ಮಾ ಪ್ರಕಾಶ್‌ ಹಾಗೂ ನಟಿ ರಕುಲ್‌ ಪ್ರೀತ್‌ ಸಿಂಗ್‌ ಅವರನ್ನು ಶುಕ್ರವಾರ  ವಿಚಾರಣೆಗೆ ಒಳಪಡಿಸಲಾಗಿತ್ತು. ಕರಿಷ್ಮಾ ಅವರನ್ನು ಶನಿವಾರ ಪುನಃ ವಿಚಾರಣೆಗೆ ಒಳಪಡಿಸಲಾಯಿತು.

‘ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್‌, ಶ್ರದ್ಧಾ ಕಪೂರ್ ಹಾಗೂ ಕರಿಷ್ಮಾ ಪ್ರಕಾಶ್‌‌ ಅವರ ವಿಚಾರಣೆ ನಡೆಸಿದ್ದೇವೆ. ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವ ಸಂಬಂಧ ಯಾರಿಗೂ ಹೊಸದಾಗಿ ಸಮನ್ಸ್‌ ಜಾರಿ ಮಾಡಿಲ್ಲ’ ಎಂದು ಎನ್‌ಸಿಬಿಯ ಉಪಮಹಾ ನಿರ್ದೇಶಕ ಎಂ.ಅಶೋಕ್‌ ಜೈನ್‌ ಹೇಳಿದರು.

‘ಚಿತ್ರ ನಿರ್ಮಾಪಕ ಕರಣ್‌ ಜೋಹರ್‌ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಲಾಗುವುದೇ’ ಎಂಬ ಪ್ರಶ್ನೆಗೆ, ‘ಇಂತಹ ಕಲ್ಪಿತ ಪ್ರಶ್ನೆಗಳಿಗೆ ಉತ್ತರ ಕೊಡುವುದಿಲ್ಲ’ ಎಂದು ಜೈನ್‌ ಪ್ರತಿಕ್ರಿಯಿಸಿದರು.

 

Related posts

ಏಪ್ರಿಲ್.05 ಭಾನುವಾರ ರಾತ್ರಿ 9 ಗಂಟೆಗೆ ಪ್ರತಿಯೊಂದು ಮನೆಯ ಲೈಟ್ ಗಳನ್ನು ಬಂದ್ ಮಾಡಿ. ಮೊಬೈಲ್ ಫ್ಲಾಶ್ ಲೈಟ್, ದೀಪ, ಮೇಣದಬತ್ತಿಯನ್ನು ರಾತ್ರಿ 9 ಗಂಟೆ 9 ನಿಮಿಷಗಳ ಕಾಲ ಹಚ್ಚಿ ಇಡಬೇಕು ಎಂದು ಪ್ರಧಾನಿ ಮೋದಿ ಸಂದೇಶ.

1000 ಕೋಟಿ ರೂ. ಬಜೆಟ್‌ ಸಿನಿಮಾ ಮಾಡುವುದಾಗಿ ಘೋಷಿಸಿದ್ದ ಬಿಆರ್‌ ಶೆಟ್ಟಿಗೆ ಆರ್ಥಿಕ ಸಂಕಷ್ಟ

Times fo Deenabandhu

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 50 ಲಕ್ಷ ದೇಣಿಗೆ: ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡರಿಂದ ಚೆಕ್ ಹಸ್ತಾಂತರ

Times fo Deenabandhu