Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

18ರಿಂದ ಬದಲಾಗಲಿದೆ ಎಟಿಎಂ ವಿತ್​ಡ್ರಾ ರೂಲ್ಸ್

ನವದೆಹಲಿ: ಗ್ರಾಹಕರ ಸುರಕ್ಷತೆಯೇ ಮುಖ್ಯಧ್ಯೇಯ ಎಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಹಣವನ್ನು ವಿತ್​ಡ್ರಾ ಮಾಡುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ರೂಪಿಸಿದೆ.

ಇನ್ನು ಮುಂದೆ 10 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ವಿತ್​ಡ್ರಾ ಮಾಡಿಕೊಳ್ಳಬಯಸಿದರೆ, ನಿಮ್ಮ ಫೋನ್​ಗೆ ಓಟಿಪಿ (ಒನ್​ಟೈಂ ಪಾಸ್​ವರ್ಡ್​) ಬರುತ್ತದೆ. ನೀವು ಬ್ಯಾಂಕ್​ಗೆ ನೋಂದಣಿ ಮಾಡಿರುವ ಮೊಬೈಲ್​ ಸಂಖ್ಯೆಗೆ ಈ ಓಟಿಪಿ ಬರುತ್ತದೆ. ಅದನ್ನು ಎಟಿಎಂ ಮಷಿನ್​ ಮೇಲೆ ನಮೂದು ಮಾಡಿದ ಮೇಲಷ್ಟೇ ಹಣವನ್ನು ಪಡೆಯಲು ಸಾಧ್ಯ.
ಆದ್ದರಿಂದ ಇನ್ನುಮುಂದೆ ಎಸ್​ಬಿಐನ ಯಾವುದೇ ಎಟಿಎಂಗೆ ಹೋಗಬೇಕಿದ್ದಲ್ಲಿ, 10 ಸಾವಿರ ರೂಪಾಯಿಗಿಂತ ಅಧಿಕ ಹಣವನ್ನು ವಿತ್​ಡ್ರಾ ಮಾಡುವುದೇ ಆಗಿದ್ದಲ್ಲಿ ಮೊಬೈಲ್​ ಫೋನ್​ ಅನ್ನು ಕಡ್ಡಾಯವಾಗಿ ಒಯ್ಯಲೇಬೇಕು. ಎಟಿಎಂಗೆ ಕನ್ನ ಹಾಕಿ ಹಣವನ್ನು ವಿತ್​ಡ್ರಾ ಮಾಡುತ್ತಿರುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ವ್ಯವಸ್ಥೆಯನ್ನು ಬ್ಯಾಂಕ್​ ಮಾಡಿದೆ.

ಆದರೆ ಈ ನಿಯಮ ಎಸ್​ಬಿಐನ ಎಟಿಎಂ ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕ್​ಗಳ ಎಟಿಎಂನಿಂದ ಹಣವನ್ನು ವಿತ್​ಡ್ರಾ ಮಾಡುವಾಗಿ ಅನ್ವಯ ಆಗುವುದಿಲ್ಲ. ಇದರ ಅರ್ಥ ಒಂದು ವೇಳೆ ನೀವು ಎಸ್​ಬಿಐ ಕಾರ್ಡ್​ ಹೊಂದಿದ್ದು, ಬೇರೆ ಬ್ಯಾಂಕ್​ನ ಎಟಿಎಂನಿಂದ ಹಣವನ್ನು ಡ್ರಾ ಮಾಡುವುದಿದ್ದರೆ, ಓಟಿಪಿ ಬರುವುದಿಲ್ಲ. 10 ಸಾವಿರ ರೂಪಾಯಿಗಿಂತಲೂ ಅಧಿಕ ಹಣ ವಿತ್​ಡ್ರಾ ಮಾಡಿದರೂ ಓಪಿಟಿ ಬರುವುದಿಲ್ಲ. ಏಕೆಂದರೆ ಈ ನಿಯಮ ಸದ್ಯ ಬೇರೆ ಬ್ಯಾಂಕ್​ಗಳಿಗೆ ಅನ್ವಯ ಆಗಿಲ್ಲ.

Related posts

‘ಅವನೇ ಶ್ರೀಮನ್ನಾರಾಯಣ’ ರಿಲೀಸ್‌ಗೆ 10 ದಿನ ಮೊದಲೇ ಬುಕಿಂಗ್‌ ಶುರು

Times fo Deenabandhu

ವಿಶ್ವದ ದುಬಾರಿ ರಾಷ್ಟ್ರ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

Times fo Deenabandhu

ಇನ್ನೆರಡು ದಿನಗಳಲ್ಲಿ ಮುಂಗಾರು ಪ್ರವೇಶ?