Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ನಟಿ ಸಂಜನಾ ಗಲ್ರಾನಿ ಜೈಲು ಪಾಲು!

ಬೆಂಗಳೂರು: ‘ಮಾದಕ’ ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ ಬೆನ್ನಲ್ಲೇ ಬಹುಭಾಷಾ ನಟಿ ಸಂಜನಾ ಗಲ್ರಾನಿ ಅವರನ್ನು ಸೆ.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡ್ರಗ್ಸ್ ಕೇಸ್​ನಲ್ಲಿ ಸಂಜನಾ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಸೆ.8ರ ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ಸಂಜನಾ ಮನೆ ಮೇಲೆ ದಾಳಿ ನಡೆಸಿದ್ದರು. ಅಂದಿನಿಂದ ಸಿಸಿಬಿ ಕಸ್ಟಡಿಯಲ್ಲಿದ್ದ ಸಂಜನಾರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು ಬುಧವಾರ ಸಂಜೆ 4ರ ಸುಮಾರಿನಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಧೀಶರು ನಟಿ ಸಂಜನಾಗೆ 2 ದಿನ ಅಂದರೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.
ಡ್ರಗ್ಸ್ ಕೇಸ್​ನಲ್ಲಿ ನಟಿ ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇದೀಗ ಸಂಜನಾರನ್ನೂ ಇದೇ ಜೈಲಿಗೆ ಕರೆದೊಯ್ಯಲಾಗಿದೆ.

ಡ್ರಗ್ಸ್​ ಪೆಡ್ಲರ್​ ರಾಹುಲ್​, ಸಂಜನಾರ ರಾಖಿ ಬ್ರದರ್​. ಡ್ರಗ್ಸ್​ ಮಾಫಿಯಾದ ಪ್ರಮುಖ ಆರೋಪಿ ಕ್ಯಾಸಿನೋ ಶೇಖ್​ ಫಾಝಿಲ್​ನ ಪಾರ್ಟಿಗಳಲ್ಲಿ ಸಂಜನಾ ಪಾಲ್ಗೊಂಡಿದ್ದರು. ಡ್ರಗ್ಸ್​ ದಂಧೆಗೂ ಸಂಜನಾಗೂ ಲಿಂಕ್​ ಇರುವ ಹಾಗೂ ಡ್ರಗ್ಸ್ ಕೇಸ್​ನ ಇತರ ಆರೋಪಿಗಳ ಹೇಳಿಕೆ ಮೇರೆಗೆ ಗಲ್ರಾನಿಯನ್ನು ಸಿಸಿಬಿ ಬಂಧಿಸಿದೆ.
ಬುಧವಾರ ಬೆಳಗ್ಗೆಯೇ ಸಂಜನಾರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

Related posts

ಇಟಲಿಗೆ ಹೋಗಿಲ್ಲ, ಹನಿಮೂನ್ ಅರ್ಧಕ್ಕೆ ನಿಲ್ಲಿಸಿದ್ದೇವೆ: ಚಂದನ್ ಶೆಟ್ಟಿ

Times fo Deenabandhu

ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಬರಿ 1 ಲಕ್ಷ ನೀಡಿದ ಧೋನಿ?

Times fo Deenabandhu

ಮಕ್ಕಳ ಹಿತಕ್ಕಿಂತ ನಿಮ್ಮ ಪ್ರತಿಷ್ಠೆ ಪ್ರಮುಖವಲ್ಲ: ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಕ್ಷಣ ಸಚಿವರು ಗರಂ

Times fo Deenabandhu