Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ದಿಗಂತ್​ ಮುಂದಿನ ಚಿತ್ರಗಳ ಕಥೆಯೇನು? ಇಲ್ಲಿದೆ ಉತ್ತರ …

ಬೆಂಗಳೂರು: ಸ್ಯಾಂಡಲ್​ವುಡ್​ನ ಡ್ರಗ್ಸ್​ ನಂಟಿನ ಕುರಿತು ಇಂದು ದಿಗಂತ್​ ಮತ್ತು ಐಂದ್ರಿತಾ ರೇ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವು ಮಾಹಿತಿ ಕಲೆ ಹಾಕಿರುವ ಪೊಲೀಸರು, ವಿಚಾರಣೆ ಮುಗಿಸಿ ದಿಗಂತ್​ ಮತ್ತು ಐಂದ್ರಿತಾ ಅವರನ್ನು ವಾಪಸ್ಸು ಕಳಿಸಿಕೊಟ್ಟಿದ್ದಾರೆ. ಅವಶ್ಯಕತೆ ಬಿದ್ದರೆ, ಮತ್ತೊಮ್ಮೆ ಸಮನ್ಸ್​ ಕೊಡುವುದಾಗಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್​ ಪಾಟೀಲ್​ ಹೇಳಿದ್ದಾರೆ.

ಈ ಮಧ್ಯೆ, ದಿಗಂತ್​ ಅವರನ್ನು ಪೊಲೀಸರು ವಿಚಾರಣೆಗೆ ಕರೆಸಿದ್ದು, ಕನ್ನಡ ಚಿತ್ರರಂಗದಲ್ಲಿ ಆತಂಕ ಸೃಷ್ಟಿಸಿದೆ. ಏಕೆಂದರೆ, ದಿಗಂತ್​ ಎರಡ್ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳ ಚಿತ್ರೀಕರಣ ಇನ್ನೂ ಬಾಕಿ ಇದೆ. ಡ್ರಗ್ಸ್​ ಮಾಫಿಯಾಗೆ ದಿಗಂತ್​ ಅವರ ಹೆಸರು ತುಳುಕು ಹಾಕಿಕೊಂಡಿರುವುದರಿಂದ ಅವರ ಚಿತ್ರಗಳ ಚಿತ್ರೀಕರಣಕ್ಕೆ ಸಮಸ್ಯೆ ಎದುರಾಗಬಹುದು ಎಂದು ಭಯ ಅವರ ಚಿತ್ರಗಳ ನಿರ್ಮಾಪಕರಿಗಿದೆ.
ದಿಗಂತ್​ ಅಭಿನಯದ ‘ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರದ ಚಿತ್ರೀಕರಣ ಮುಗಿದಿದ್ದು, ‘ಗಾಳಿಪಟ 2’, ‘ಮಾರಿ ಗೋಲ್ಡ್​’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಎರಡೂ ಚಿತ್ರಗಳ ಸ್ವಲ್ಪ ಭಾಗದ ಚಿತ್ರೀಕರಣವಾಗಿದ್ದು, ಚಿತ್ರ ಮುಗಿಯುವುದಕ್ಕೆ ಇನ್ನೂ ಸಮಯವಿದೆ. ಹಾಗಾಗಿ ಸಹಜವಾಗಿಯೇ ಈ ಚಿತ್ರಗಳ ತಂಡ ಆತಂಕವಾಗಿದೆ.

ಆದರೆ, ಈ ವಿಷಯವಾಗಿ ಯಾವುದೇ ಭಯ ಬೇಡ ಎಂದಿರುವ ದಿಗಂತ್​, ಸೆಪ್ಟೆಂಬರ್​ 18ರ ಶುಕ್ರವಾರದಿಂದ ‘ಮಾರಿ ಗೋಲ್ಡ್​’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಅವರು ಈ ಪ್ರಕರಣದಲ್ಲಿ ತಮ್ಮದೇನು ಪಾತ್ರವಿಲ್ಲ ಎಂದು ಪೊಲೀಸರಿಗೆ ಮನದಟ್ಟು ಮಾಡಿಕೊಟ್ಟಿದ್ದಾರಂತೆ. ಹಾಗೆಯೇ ಪ್ರಕರಣದ ತನಿಖೆಯಲ್ಲಿ ಸಹಕರಿಸುವುದಾಗಿ ಹೇಳಿದ್ದಾರಂತೆ. ಹಾಗಾಗಿ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬ ನಂಬಿಕೆಯಲ್ಲಿದ್ದು, ಚಿತ್ರೀಕರಣಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಘವೇಂದ್ರ ನಾಯಕ್​ ನಿರ್ದೇಶಿಸುತ್ತಿರುವ ‘ಮಾರಿ ಗೋಲ್ಡ್​’ನ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಶಿವಮೊಗ್ಗ ಸುತ್ತಮುತ್ತ ಮುಗಿದಿದ್ದು, ಇದೀಗ ಎರಡನೇ ಹಂತದ ಚಿತ್ರೀಕರಣ ಶುರುವಾಗಲಿದೆ. ಇದೊಂದು ಕ್ರೈಮ್​ ಥ್ರಿಲ್ಲರ್​ ಚಿತ್ರವಾಗಿದ್ದು, ಸಾಕಷ್ಟು ಹಾಸ್ಯಮಯ ಅಂಶಗಳು ಸಹ ಇವೆ ಎಂದು ಹೇಳಲಾಗುತ್ತಿದೆ.

‘ಮಾರಿ ಗೋಲ್ಡ್​’ ಚಿತ್ರದಲ್ಲಿ ದಿಗಂತ್​ಗೆ ನಾಯಕಿಯಾಗಿ ಸಂಗೀತ ಶೃಂಗೇರಿ ನಟಿಸುತ್ತಿದ್ದು ಮಿಕ್ಕಂತೆ ಸಂಪತ್​, ಯಶ್​ ಶೆಟ್ಟಿ, ‘ಸಿದ್ಲಿಂಗು’ ಶ್ರೀಧರ್​, ‘ಕಾಕ್ರೋಚ್​’ ಸುಧಿ ಮುಂತಾದವರು ನಟಿಸುತ್ತಿದ್ದಾರೆ. ರಘುವರ್ಧನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವೀರ್​ ಸಮರ್ಥ್​ರ್ ಸಂಗೀತ ಸಂಯೋಜಿಸಿದ್ದಾರೆ.

Related posts

ಖ್ಯಾತ ತಮಿಳು ನಟ ವಿಜಯ್ ಮತ್ತು ಸೇತುಪತಿ ಶಿವವಮೊಗ್ಗ ಜೈಲಿಗೆ…..!

Times fo Deenabandhu

ನಿತ್ಯಾನಂದ ಸ್ವಾಮಿಗೆ ಬಿಗ್‌ ರಿಲೀಫ್‌!

Times fo Deenabandhu

ಕನ್ನಡ ಸೇರಿ 9 ಭಾಷೆಗಳಲ್ಲಿ ಲಭ್ಯ ಸುಪ್ರೀಂ ಕೋರ್ಟ್‌ ತೀರ್ಪು

Times fo Deenabandhu