Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಕೊವಿಡ್​-19 ಸೋಂಕು

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಿತಿನ್​ ಗಡ್ಕರಿ ಅವರಿಗೆ ಕೊವಿಡ್​-19 ಸೋಂಕು ತಗುಲಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಸಚಿವರು, ನಿನ್ನೆ ನನ್ನಲ್ಲಿ ಆಯಾಸ ಕಾಣಿಸಿಕೊಂಡಿತ್ತು. ತಪಾಸಣೆಗೆ ತೆರಳಿದ್ದೆ. ಕೊವಿಡ್​-19 ಟೆಸ್ಟ್​ಗೆ ಕೂಡ ಒಳಪಟ್ಟಿದ್ದೆ. ಅದರ ವರದಿ ಪಾಸಿಟಿವ್​ ಎಂದು ಬಂದಿದೆ. ನಾನು ಸದ್ಯ ಐಸೋಲೇಶನ್​​ನಲ್ಲಿ ಇದ್ದೇನೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದದಿಂದ ಆರೋಗ್ಯವಾಗಿಯೇ ಇದ್ದೇನೆ ಎಂದು ಹೇಳಿದ್ದಾರೆ.
ಹಾಗೇ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಒಮ್ಮೆ ಕೊವಿಡ್​-19 ತಪಾಸಣೆಗೆ ಒಳಗಾಗಿ. ಸುರಕ್ಷಿತವಾಗಿರಿ ಎಂದು ಟ್ವೀಟ್​ ಮೂಲಕ ಮನವಿ ಮಾಡಿದ್ದಾರೆ. ಈಗಾಗಲೇ ಹಲವು ಕೇಂದ್ರ ಸಚಿವರು, ಸಂಸದರು, ಶಾಸಕರು ಕೊವಿಡ್​-19 ಸೋಂಕಿಗೆ ಒಳಗಾಗಿದ್ದಾರೆ.

Related posts

ಸಾರಿಗೆ ನೌಕರರೇ ಸಂಬಳದ ಚಿಂತೆ ಬಿಡಿ, ಕೆಲವೇ ದಿನಗಳಲ್ಲಿ ನಿಮ್ಮ ಜೇಬಿಗೆ ಸ್ಯಾಲರಿ!

ರಾಜ್ಯದ 6 ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ; ಮತ್ತೆ 9 ಮಂದಿಗೆ ಪಾಸಿಟಿವ್‌

ರಾಜಧಾನಿಯಲ್ಲೇ ಫಿಲ್ಮ್‌ ಸಿಟಿ, ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಚಿತ್ರ ನಗರಿ ನಿರ್ಮಾಣ: ಡಿಸಿಎಂ

Times fo Deenabandhu