Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಭಾರತೀಯ ಸೇನೆಯಲ್ಲಿ 16,758 ಮಂದಿಗೆ ಕೋವಿಡ್

ನವದೆಹಲಿ: ಭಾರತೀಯ ಸೇನೆಯಲ್ಲಿ 16,758 ಮಂದಿಗೆ ಕೋವಿಡ್ ದೃಢಪಟ್ಟಿದೆ. ಅದೇ ವೇಳೆ ನೌಕಾಪಡೆಯಲ್ಲಿ 1,365 ಮಂದಿ ಮತ್ತು ವಾಯುಪಡೆಯಲ್ಲಿ 1,716 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಕೋವಿಡ್‌ನಿಂದ ಭೂಸೇನೆಯಲ್ಲಿ 32 ಮಂದಿ ಮತ್ತು ನೌಕಾಪಡೆಯಲ್ಲಿ ಮೂವರು ಮೃತರಾಗಿದ್ದಾರೆ. ವಾಯಪಡೆಯಲ್ಲಿ ಕೋವಿಡ್‌ನಿಂದ ಮರಣ ಸಂಭವಿಸಿಲ್ಲ ಎಂದು ರಕ್ಷಣಾ ಸಚಿವಾಲಯದ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕೋವಿಡ್ ಆರೈಕೆ ಕೇಂದ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಳ
ಮಹಾರಾಷ್ಟ್ರದಲ್ಲಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದೆ ಎಂದು ವಿಪಕ್ಷ ನೇತಾರ ದೇವೇಂದ್ರ ಫಡಣವಿಸ್ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ 2,462 ಹೊಸ ಪ್ರಕರಣಗಳು
ಬುಧವಾರ ಮಧ್ಯಪ್ರದೇಶದಲ್ಲಿ 2,462 ಹೊಸ ಪ್ರಕರಣಗಳು ವರದಿ ಆಗಿದೆ. ಇಲ್ಲಿಯವರೆಗೆ 95,515 ಸೋಂಕು ಪ್ರಕರಣಗಳು ವರದಿ ಆಗಿದ್ದು 1,844 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 23,000 ಕ್ಕಿಂತಲೂ ಹೆಚ್ಚು ಪ್ರಕರಣ
ಮಹಾರಾಷ್ಟ್ರದಲ್ಲಿ ಒಂದೇ ದಿನ 23,365 ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು 474 ಸಾವು ಸಂಭವಿಸಿದೆ. 17,559 ಮಂದಿ ಚೇತರಿಸಿಕೊಂಡಿದ್ದಾರೆ.
ದೇಶದಾದ್ಯಂತ ಕೋವಿಡ್‌–19 ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ ಶೇ. 78.53ಕ್ಕೆ ಏರಿಕೆಯಾಗಿದ್ದು, ಸಾವಿನ ಪ್ರಮಾಣ ಶೇ. 1.63 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 90,123 ಹೊಸ ಪ್ರಕರಣಗಳು ವರದಿಯಾಗಿದ್ದು, 1,290 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 50,20,360ಕ್ಕೆ ಏರಿಕೆಯಾಗಿದ್ದು, 82,066 ಜನರು ಮೃತಪಟ್ಟಿದ್ದಾರೆ. ಸೋಮವಾರ ಒಂದೇದಿನ 79,292 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಡೆಯಾಗಿದ್ದಾರೆ.

ಇಲಾಖೆಯ ಮಾಹಿತಿ ಪ್ರಕಾರ ಇದುವರೆಗೆ 39,42,360 ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನೂ 9,95,933 ಜನರಿಗೆ ಚಿಕಿತ್ಸೆ ಮುಂದುವರಿದಿದೆ.
ಇದುವರೆಗೆ ಒಟ್ಟು 6 ಕೋಟಿ ಜನರಿಗೆ ಕೋವಿಡ್ ಟೆಸ್ಟ್‌
ದೇಶದಲ್ಲಿ ಸೋಂಕು ಕಾಣಿಸಿಕೊಂಡಾಗಿನಿಂದ ಇಲ್ಲಿಯ ವರೆಗೆ ಒಟ್ಟು 5,94,29,115 ಜನರಿಗೆ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಮಂಗಳವಾರ ಒಂದೇ ದಿನ ಒಟ್ಟು 11,16842 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋದನಾ ಮಾಹಿತಿ ನೀಡಿದೆ.

ಕೋವಿಡ್‌–19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೊರೊಕ್ವಿನ್‌ ಬಳಕೆ: ಹರ್ಷವರ್ಧನ್
ಕೋವಿಡ್‌–19 ಚಿಕಿತ್ಸೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು, ಸೋಂಕಿತರಿಗೆ ಪ್ರಾಥಮಿಕ ಮತ್ತು ಮಧ್ಯಮ ಹಂತದ ಚಿಕಿತ್ಸೆ ವೇಳೆ ಹೈಡ್ರಾಕ್ಸಿಕ್ಲೊರೊಕ್ವಿನ್‌ ಔಷಧಿಯನ್ನು ಬಳಸಲಾಗುತ್ತಿದೆ ಎಂದಿದ್ದಾರೆ.

ದೇಶದಾದ್ಯಂತ ಲಾಕ್‌ಡೌನ್‌ ಜಾರಿಗೊಳಿಸಿದ್ದರ ಪರಿಣಾಮವಾಗಿ, ಕೋವಿಡ್‌ನಿಂದ ಸಂಭವಿಸಬಹುದಾಗಿದ್ದ ಸುಮಾರು 38 ಸಾವಿರದಷ್ಟು ಸಾವು ಹಾಗೂ ಕನಿಷ್ಠ 29 ಲಕ್ಷ ಸೋಂಕು ಪ್ರಕರಣಗಳನ್ನು ತಡೆಯಲಾಗಿದೆ ಎಂದೂ ಅವರು ಹೇಳಿದ್ದಾರೆ.

ಅತಿಹೆಚ್ಚು ಸಕ್ರಿಯ ಪ್ರಕರಣ: ಎರಡನೇ ಸ್ಥಾನದಲ್ಲಿ ಕರ್ನಾಟಕ
ಸದ್ಯ ಅತಿಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಕೇಂದ್ರ ಇಲಾಖೆಯ ಮಾಹಿತಿ ಪ್ರಕಾರ ಕರ್ನಾಟದಲ್ಲಿ ಇದುವರೆಗೆ ಒಟ್ಟು 4,75,265 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 3,69,229 ಸೋಂಕಿತರು ಗುಣಮುಖರಾಗಿದ್ದು, 7,481 ಮಂದಿ ಮೃತಪಟ್ಟಿದ್ದಾರೆ. ಇನ್ನೂ 98,555 ಜನರಿಗೆ ಚಿಕಿತ್ಸೆ ಮುಂದುವರಿದಿದೆ.

ಹೆಚ್ಚು ಸೋಂಕು (1,097,856) ಪ್ರಕರಣಗಳು ವರದಿಯಾಗಿರುವ ಮುಂಬೈನಲ್ಲಿ ಇದುವರೆಗೆ ಒಟ್ಟು 7,75,273 ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದಂತೆ 30,409 ಮಂದಿ ಮೃತಪಟ್ಟಿದ್ದು, 2,92,174 ಸಕ್ರಿಯ ಪ್ರಕರಣಗಳು ಇವೆ. ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ ಹಾಗೂ ಉತ್ತರ ಪ್ರದೇಶ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದು, ಈ ರಾಜ್ಯಗಳಲ್ಲಿ ಕ್ರಮವಾಗಿ 92,353 ಹಾಗೂ 67,335 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

Related posts

 ಘರ್ಷಣೆ ನಿಲ್ಲಿಸಿ ಗಡಿಯಿಂದ ಹಿಂದೆ ಸರಿದ ಭಾರತ-ಚೀನಾ ಸೇನೆ

ನಾನೆಂದೂ ದ್ವೇಷ ರಾಜಕಾರಣ ಮಾಡಿಲ್ಲ, ತೊಂದರೆಯಾಗಿದ್ದರೆ ಕ್ಷಮಿಸಿ : ಎಸ್.ಎಂ ಕೃಷ್ಣ

Times fo Deenabandhu

ಬಿಜೆಪಿ ನಿಯಂತ್ರಣದಲ್ಲಿ ಫೇಸ್ಬುಕ್‌: ಅಮೆರಿಕ ಪತ್ರಿಕೆ ವರದಿ ಉಲ್ಲೇಖಿಸಿದ ರಾಹುಲ್

Times fo Deenabandhu