Times of Deenabandhu
  • Home
  • ಮುಖ್ಯಾಂಶಗಳು
  •  ರಾಗಿಣಿ ದ್ವಿವೇದಿ ಖರೀದಿಸಿದ್ದ ಮನೆಯನ್ನ ಮಾರಾಟಕ್ಕಿಟ್ಟ ಅಪ್ಪ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ರಾಗಿಣಿ ದ್ವಿವೇದಿ ಖರೀದಿಸಿದ್ದ ಮನೆಯನ್ನ ಮಾರಾಟಕ್ಕಿಟ್ಟ ಅಪ್ಪ

ಬೆಂಗಳೂರು : ಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಕೊಂಡಿರುವ ನಟಿ ರಾಗಿಣಿ ದ್ವಿವೇದಿ ಅವರ ಕನಸಿನ ಮನೆ ಮಾರಾಟಕ್ಕಿದೆ. ಯಲಹಂಕದ ಜ್ಯುಡಿಶಿಯಲ್ ಲೇಔಟ್​ನಲ್ಲಿರುವ ಅವರ ಮನೆಯನ್ನು ಖಾಸಗಿ ವೆಬ್ ಸೈಟ್​ನಲ್ಲಿ ಸೇಲ್​ಗೆ ಇಡಲಾಗಿದೆ. ನಟಿ ರಾಗಿಣಿ ಬಹಳ ಅಸ್ಥೆ ವಹಿಸಿ ಖರೀದಿಸಿದ್ದ ಪ್ಲಾಟ್ ಇದು. ಲಕ್ಷಾಂತರ ರೂ ಖರ್ಚು ಮಾಡಿ ತಮ್ಮಿಷ್ಟದಂತೆ ಇಂಟೀರಿಯರ್ ಡೆಕೋರೇಶನ್ ಮಾಡಿಸಿಕೊಂಡಿದ್ದರು. ಅನನ್ಯ ಅಪಾರ್ಟ್​ಮೆಂಟ್​ನ ಎರಡನೇ ಮಹಡಿಯಲ್ಲಿರುವ ಮೂರು ಬೆಡ್ ರೂಮ್​ಗಳ 2061 ಚದರಡಿಯ ವಿಶಾಲ ಮನೆಯನ್ನು ಅವರ ತಂದೆ ರಾಕೇಶ್ ದ್ವಿವೇದಿ 2 ಕೋಟಿ ರೂಪಾಯಿಗೆ ಮಾರಾಟಕ್ಕಿಟ್ಟಿದ್ದಾರೆ. ಖಾಸಗಿ ವೆಬ್​​ಸೈಟ್​ನಲ್ಲಿ (NoBroker.In) ಮನೆಯ ಫೋಟೋಗಳನ್ನು ಅಪ್​ಲೋಡ್ ಮಾಡಿದ್ದಾರೆ. ಇಲ್ಲಿ ಮಗಳು ರಾಗಿಣಿ ದ್ವಿವೇದಿ ಜೈಲಿನಲ್ಲಿರುವಾಗ ಈಕೆಯ ಆಸ್ತಿಯನ್ನು ಅಪ್ಪ ಮಾರಾಟಕ್ಕಿಡಲು ಕಾರಣವಾದರೂ ಏನು?

ರಾಗಿಣಿ ದ್ವಿವೇದಿ ಅವರ ಕುಟುಂಬದವರು ಇದೀಗ ಮೌನವಾಗಿರಲು ತೀರ್ಮಾನಿಸಿದ್ಧಾರೆ. ಅಪ್ಪ ರಾಕೇಶ್ ದ್ವಿವೇದಿ ಕನಲಿ ಹೋಗಿದ್ದಾರೆ. ಸಾರ್ವಜನಿಕವಾಗಿ ಹೆಚ್ಚು ಮಾತನಾಡುತ್ತಿಲ್ಲ. ಅಕ್ಕಪಕ್ಕದವರ ಜೊತೆ ಮುಖ ಕೊಟ್ಟು ಮಾತನಾಡುತ್ತಿಲ್ಲ. ಮಾಧ್ಯಮಗಳನ್ನು ದೂರವೇ ಇಟ್ಟಿದ್ದಾರೆ. ವಕೀಲರ ಫೀಸು, ಕೋರ್ಟು ಕಟ್ಟಳೆ ಖರ್ಚು ಇತ್ಯಾದಿ ನೆನೆದು ಅವರು ಕಳವಳಗೊಂಡಿದ್ದಾರೆ. ಅದಕ್ಕಾಗಿಯೇ ಅವರು ಮನೆ ಮಾರಾಟಕ್ಕಿಟ್ಟಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ಅವರ ಮನೆ ಮಾರಾಟದ ಹಿಂದೆ ಬೇರೆಯೇ ಕಾರಣ ಇದೆ, ಲೆಕ್ಕಾಚಾರಗಳಿವೆ ಎನ್ನುತ್ತವೆ ಕೆಲ ಮೂಲಗಳು.

ರಾಗಿಣಿ ದ್ವಿವೇದಿ ಅವರು ಡ್ರಗ್ಸ್ ದಂಧೆ ಮೂಲಕ ಅಕ್ರಮವಾಗಿ ಈ ಮನೆಯನ್ನು ಕೊಂಡಿದ್ದರೆನ್ನಲಾಗಿದೆ. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇರುವುದರಿಂದ ಸದ್ದಿಲ್ಲದೆ ಮನೆ ಮಾರಾಟ ಮಾಡಿ ಕೈತೊಳೆದುಕೊಳ್ಳಲು ಅವರ ಕುಟುಂಬದವರು ಯೋಜನೆ ಹಾಕಿರಬಹುದು ಎಂಬ ಮಾತು ಕೇಳಿಬರುತ್ತಿದೆ.ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳಾದ ರಾಗಿಣಿ ದ್ವಿವೇದಿ, ಪ್ರಶಾಂತ್ ರಾಂಕಾ, ಸಿಮೋನ್, ರಾಹುಲ್ ಮತ್ತು ನಿಯಾಜ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಲಾಗಿದೆ. ಇನ್ನು, ಸಂಜನಾ ಗಲ್ರಾಣಿ ಮತ್ತು ವೀರೇನ್ ಖನ್ನ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಮುಂದುವರಿಸಲಾಗುತ್ತಿದೆ.

Related posts

ಮಸೀದಿಯೊಳಗೆ ಮಂಟಪ ನಿರ್ಮಿಸಿ ಹಿಂದು ಜೋಡಿಗೆ ಮದುವೆ !

Times fo Deenabandhu

ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಮಾ.3ರ ಮುಂಜಾನೆ ಇಲ್ಲ ಗಲ್ಲು; ಮರಣದಂಡನೆ ಮುಂದೂಡಿದ ದೆಹಲಿ ಕೋರ್ಟ್​

ಪದೇ ಪದೇ ಅದೇ ತಪ್ಪೆಸಗಿ ಭಾರಿ ದಂಡ ತೆತ್ತ ಟೀಮ್‌ ಇಂಡಿಯಾ!

Times fo Deenabandhu