Times of Deenabandhu
  • Home
  • ಮುಖ್ಯಾಂಶಗಳು
  • ವಿಶ್ವಸಂಸ್ಥೆಯ ಸಿಎಸ್​ಡಬ್ಲ್ಯು ಸದಸ್ಯತ್ವ ಗೆದ್ದ ಭಾರತ; ಚೀನಾಕ್ಕೆ ಭಾರಿ ಮುಖಭಂಗ
ಪ್ರಧಾನ ಸುದ್ದಿ ಮುಖ್ಯಾಂಶಗಳು

ವಿಶ್ವಸಂಸ್ಥೆಯ ಸಿಎಸ್​ಡಬ್ಲ್ಯು ಸದಸ್ಯತ್ವ ಗೆದ್ದ ಭಾರತ; ಚೀನಾಕ್ಕೆ ಭಾರಿ ಮುಖಭಂಗ

ವಿಶ್ವಸಂಸ್ಥೆ: ಮಹತ್ವದ ಬೆಳವಣಿಗೆಯೊಂದರಲ್ಲಿ ವಿಶ್ವಸಂಸ್ಥೆಯ ಎಕನಾಮಿಕ್ ಆ್ಯಂಡ್ ಸೋಷಿಯಲ್ ಕೌನ್ಸಿಲ್​ (ECOSOC)ನ ಕಮಿಷನ್​ ಆನ್ ಸ್ಟೇಟಸ್ ಆಫ್ ವುಮೆನ್​ (CSW) ಸದಸ್ಯ ರಾಷ್ಟ್ರವಾಗಿ ಭಾರತ ಚುನಾಯಿತವಾಗಿದೆ. ಚುನಾವಣಾ ಕಣದಲ್ಲಿದ್ದ ಚೀನಾಕ್ಕೆ ಭಾರಿ ಮುಖಭಂಗವಾಗಿದೆ. ಭಾರತದ ಪ್ರತಿಷ್ಠಿತ ಆಯೋಗದ ಸದಸ್ಯತ್ವ ಗೆಲುವಿನ ವಿಚಾರವನ್ನು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಈ ಗೆಲುವಿನೊಂದಿಗೆ ಭಾರತ ಸಿಎಸ್​ಡಬ್ಲ್ಯುನ ಸದಸ್ಯ ರಾಷ್ಟ್ರವಾಗಿ 2021ರಿಂದ 2025ರ ಅವಧಿಯಲ್ಲಿ ಕಾರ್ಯನಿರ್ವಹಿಸಲಿದೆ. ಭಾರತ, ಚೀನಾ ಮತ್ತು ಅಫ್ಘಾನಿಸ್ತಾನ ಈ ಮೂರು ರಾಷ್ಟ್ರಗಳು ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದವು. ಆಫ್ಘನ್ ಮತ್ತು ಭಾರತ ಗೆಲುವು ದಾಖಲಿಸಿದರೆ, ಚೀನಾಕ್ಕೆ ಒಟ್ಟು ಸದಸ್ಯ ಬಲ 54ರ ಅರ್ಧದಷ್ಟು ಮತಕ್ಕಿಂತ ಹೆಚ್ಚು ಮತ ಗಳಿಸುವುದು ಸಾಧ್ಯವಾಗಲಿಲ್ಲ.
ಸಿಎಸ್​ಡಬ್ಲ್ಯು ಎಂಬುದು ಜಾಗತಿಕ ಮಟ್ಟದ ಅಂತರ್​ಸರ್ಕಾರೀಯ ಸಂಸ್ಥೆಯಾಗಿದ್ದು, ವಿಶೇಷವಾಗಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ. ಇದನ್ನು 1946ರ ಜೂನ್ 21ರಂದು ತೆಗೆದುಕೊಂಡ ನಿರ್ಣಯದ ಪ್ರಕಾರ ಸ್ಥಾಪಿಸಲಾಗಿದೆ. ಈ ಆಯೋಗದಲ್ಲಿ ವಿಶ್ವಸಂಸ್ಥೆಯ ECOSOCದ 45 ಸದಸ್ಯ ರಾಷ್ಟ್ರಗಳ ತಲಾ ಒಬ್ಬ ಪ್ರತಿನಿಧಿ ಇರುತ್ತಾನೆ. ಈ ಸದಸ್ಯತ್ವವನ್ನು ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ಇದರಂತೆ, ಆಫ್ರಿಕಾಕ್ಕೆ 13, ಏಷ್ಯಾಕ್ಕೆ 11, ಲ್ಯಾಟಿನ್ ಅಮೇರಿಕಾ ಮತ್ತು ಕೆರೆಬಿಯನ್​ಗೆ 9, ವೆಸ್ಟರ್ನ್ ಯುರೋಪ್​ ಮತ್ತು ಇತರೆ ರಾಜ್ಯಗಳಿಗೆ 8, ಪೂರ್ವ ಯುರೋಪ್​ಗೆ ನಾಲ್ಕು ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.

Related posts

ಭಾರತದಲ್ಲಿ ಮಂದಗತಿಯ ಆರ್ಥಿಕತೆ ತಾತ್ಕಾಲಿಕ: ಐಎಂಎಫ್‌ ಮುಖ್ಯಸ್ಥೆ ಕ್ರಿಸ್ಟಲಿನಾ

Times fo Deenabandhu

ಸರ್ಕಾರಿ ನೌಕರರಿಗೆ ‘ವರ್ಕ್ ಫ್ರಂ ಹೋಮ್’ಗೆ ಆದೇಶ

Times fo Deenabandhu

ಉಗ್ರ ಪೋಷಕ ಪಾಕಿಸ್ತಾನಕ್ಕೆ ಬ್ಲ್ಯಾಕ್‌ಲಿಸ್ಟ್‌ನಿಂದ ಪಾರಾಗಲು ಕೊನೆಯ ಗಡುವು

Times fo Deenabandhu