Times of Deenabandhu
  • Home
  • ಮುಖ್ಯಾಂಶಗಳು
  • ಅರುಣಾಚಲ ಗಡಿಯಲ್ಲಿ ಚೀನಿ ಸೈನಿಕರು: ಸನ್ನದ್ಧ ಸ್ಥಿತಿಯಲ್ಲಿ ಭಾರತೀಯ ಯೋಧರು
ಪ್ರಧಾನ ಸುದ್ದಿ ಮುಖ್ಯಾಂಶಗಳು

ಅರುಣಾಚಲ ಗಡಿಯಲ್ಲಿ ಚೀನಿ ಸೈನಿಕರು: ಸನ್ನದ್ಧ ಸ್ಥಿತಿಯಲ್ಲಿ ಭಾರತೀಯ ಯೋಧರು

ನವದೆಹಲಿ: ಪದೇಪದೆ ಯತ್ನಿಸಿದರೂ ಪೂರ್ವ ಲಡಾಖ್ ಮೂಲಕ ಭಾರತದೊಳಕ್ಕೆ ನುಸುಳಿ ಅತಿಕ್ರಮಣ ಮಾಡುವ ಪ್ರಯತ್ನ ವಿಫಲವಾಗುತ್ತಿರುವುದರಿಂದ ಚೀನಾದ ಕಣ್ಣು ಈಗ ಅರುಣಾಚಲ ಪ್ರದೇಶ ಗಡಿ ಮೇಲೆ ಬಿದ್ದಿದ್ದು, ಅಲ್ಲಿ ತನ್ನ ಸೈನಿಕರನ್ನು ದೊಡ್ಡ ಸಂಖ್ಯೆಯಲ್ಲಿ ಜಮಾವಣೆ ಮಾಡುತ್ತಿದೆ.

ಅರುಣಾಚಲ ಪ್ರದೇಶದ ಗಡಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಅಸಾಫಿಲಾ, ಟೂಟಿಂಗ್ ಆಕ್ಸಿಸ್, ಚಾಂಗ್ ತ್ಸೆ ಮತ್ತು ಫಿಶ್‌ಟೇಲ್-2 ಎಂಬ ನಾಲ್ಕು ಸೆಕ್ಟರ್‌ಗಳಲ್ಲಿ ಚೀನಾದ ಸೈನಿಕರ ಚಲನವಲನ ಕಂಡು ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಪ್ರದೇಶಗಳಲ್ಲಿ ಅತಿಕ್ರಮಣ ಮಾಡುವುದು ಚೀನಾದ ಉದ್ದೇಶವಿರಬಹುದು ಎಂದು ಅಂದಾಜು ಮಾಡಲಾಗಿದೆ. ಚೀನಾದ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ಭಾರತೀಯ ಸೇನೆ ಕಣ್ಗಾವಲನ್ನು ಚುರುಕುಗೊಳಿಸಿದ್ದು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸೈನ್ಯವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

Related posts

 ಭೂಪಟದಲ್ಲಿ ಇಲ್ಲ ಪಿಒಕೆ: ಪಠ್ಯಪುಸ್ತಕ ರದ್ದುಗೊಳಿಸಿದ ಪಾಕಿಸ್ತಾನ

ನನ್ನನ್ನು ಸಿಎಂ ಮಾಡಿದ್ದು ಇವ್ರೇ…! ಇಲ್ಲದಿದ್ದರೆ ನಾನು ಸಿಎಂ ಆಗಿ ನಿಮ್ಮ ಮುಂದೆ ಇಲ್ಲಿರ್ತಿರಲಿಲ್ಲ…

Times fo Deenabandhu

ಅಮೆರಿಕ-ತಾಲಿಬಾನ್​ ನಡುವೆ ಐತಿಹಾಸಿಕ ಶಾಂತಿ ಒಪ್ಪಂದ: 18 ವರ್ಷಗಳ ಸಂಘರ್ಷಕ್ಕೆ ತೆರೆ

Times fo Deenabandhu