Times of Deenabandhu
  • Home
  • ಮುಖ್ಯಾಂಶಗಳು
  • 15ನೇ ಶತಮಾನದ ಶ್ರೀರಾಮ-ಸೀತಾ-ಲಕ್ಷ್ಮಣನ ವಿಗ್ರಹಗಳನ್ನು ಹಸ್ತಾಂತರಿಸಿದ ಯುಕೆ
ಪ್ರಧಾನ ಸುದ್ದಿ ಮುಖ್ಯಾಂಶಗಳು

15ನೇ ಶತಮಾನದ ಶ್ರೀರಾಮ-ಸೀತಾ-ಲಕ್ಷ್ಮಣನ ವಿಗ್ರಹಗಳನ್ನು ಹಸ್ತಾಂತರಿಸಿದ ಯುಕೆ

ನವದೆಹಲಿ: ಯುನೈಟೆಡ್​ ಕಿಂಗ್​ಡಮ್​​​ನಲ್ಲಿ ಇದ್ದ 15ನೇ ಶತಮಾನದ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣನ ವಿಗ್ರಹಗಳನ್ನು ಅಲ್ಲಿನ ಅಧಿಕಾರಿಗಳು ಹಿಂತಿರುಗಿಸಿದ್ದಾರೆ ಎಂದು ಸಾಂಸ್ಕೃತಿಕ ಸಚಿವ ಪ್ರಲ್ಹಾದ್​ ಸಿಂಗ್​ ಪಟೇಲ್​ ಅವರು ತಿಳಿಸಿದ್ದಾರೆ.

ತಮಿಳುನಾಡಿನ ದೇವಸ್ಥಾನವೊಂದರಿಂದ 1978ರಲ್ಲಿ ಒಟ್ಟು ಮೂರು ವಿಗ್ರಹಗಳನ್ನು ಕಳವು ಮಾಡಲಾಗಿತ್ತು. ಇವು 15 ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಕಾಲದ್ದಾಗಿದ್ದವು. ವಿಗ್ರಹಗಳನ್ನು ಕಳವು ಮಾಡಿ ಯುಕೆಗೆ ಸ್ಮಗ್ಲಿಂಗ್​ ಮಾಡಲಾಗಿತ್ತು. ಇದೀಗ ಯುಕೆ ಸರ್ಕಾರ ಆ ವಿಗ್ರಹಗಳನ್ನು ಮತ್ತು ಒಂದು ಸ್ತಂಭವನ್ನು ಭಾರತಕ್ಕೆ ಹಸ್ತಾಂತರಿಸಿದೆ ಎಂದಿದ್ದಾರೆ. ಹಾಗೇ ವಿಗ್ರಹ ಹಸ್ತಾಂತರ ಮಾಡಲು ಲಂಡನ್​​ನ ಭಾರತೀಯ ಹೈಕಮಿಷನ್​ ಕೂಡ ತುಂಬ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014ರಿಂದ ಈಚೆಗೆ ಒಟ್ಟು 40 ಪ್ರಾಚೀನ ವಿಗ್ರಹಗಳನ್ನು ಸಂಗ್ರಹಿಸಿದೆ. ಇವೆಲ್ಲ ಈ ಹಿಂದೆ ಕಳವಾಗಿ, ಬೇರೆ ದೇಶಗಳಿಗೆ ಕಳ್ಳಸಾಗಣೆ ಆಗಿದ್ದವುಗಳು. ಸ್ವಾತಂತ್ರ್ಯಾನಂತರ 2013ರವರೆಗೆ ಬರೀ 13 ಕಲಾಕೃತಿಗಳು ಮತ್ತು ಪ್ರಾಚೀನವಸ್ತುಗಳನ್ನಷ್ಟೇ ಸಂಗ್ರಹಿಸಲಾಗಿತ್ತು ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.
ಹಾಗೇ 20 ವರ್ಷಗಳ ಹಿಂದೆ ರಾಜಸ್ಥಾನದಿಂದ ಕಳವಾಗಿದ್ದ 9ನೇ ಶತಮಾನದ ಶಿವನ ವಿಗ್ರಹವನ್ನು ಆಗಸ್ಟ್​​ನಲ್ಲಿ ಲಂಡನ್​ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದೆ.

Related posts

 ಫೇಸ್ಬುಕ್‌ ಸಿಬ್ಬಂದಿ ಪ್ರಧಾನಿಯನ್ನೇ ನಿಂದಿಸುತ್ತಾರೆ: ಜುಕರ್ಬರ್ಗ್‌ಗೆ ಸಚಿವ ಪತ್ರ

Times fo Deenabandhu

ಗ್ರೀನ್‌ ಝೋನ್‌ನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ ಮದ್ಯ ನಿಷೇಧ ಚರ್ಚೆ..!

ಮಸೀದಿಯೊಳಗೆ ಮಂಟಪ ನಿರ್ಮಿಸಿ ಹಿಂದು ಜೋಡಿಗೆ ಮದುವೆ !

Times fo Deenabandhu