Times of Deenabandhu
  • Home
  • ಮುಖ್ಯಾಂಶಗಳು
  •  ತಾಜ್‌ ಮಹಲ್‌ನ್ನು ತೇಜೋಲಯ್ ಎಂದು ಮರುನಾಮಕರಣ ಮಾಡಲು ಬಿಜೆಪಿ ನಾಯಕರ ಒತ್ತಾಯ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ತಾಜ್‌ ಮಹಲ್‌ನ್ನು ತೇಜೋಲಯ್ ಎಂದು ಮರುನಾಮಕರಣ ಮಾಡಲು ಬಿಜೆಪಿ ನಾಯಕರ ಒತ್ತಾಯ

ಲಖನೌ: ಆಗ್ರಾದಲ್ಲಿ ನಿರ್ಮಾಣವಾಗುತ್ತಿರುವ ‘ಮೊಘಲ್ ಮ್ಯೂಸಿಯಂ’ಗೆ ಶಿವಾಜಿ ಮಹಾರಾಜರ ಹೆಸರಡಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ.

ಮೊಘಲರು ಎಂದಿಗೂ ನಮ್ಮ ಹೀರೊಗಳಾಗಲು ಸಾಧ್ಯವಿಲ್ಲ, ಶಿವಾಜಿಯೇ ನಮ್ಮ ನಿಜವಾದ ಹೀರೊ. ಅವರ ಹೆಸರು ನಮಲ್ಲಿ ದೇಶಪ್ರೇಮದ ಭಾವನೆ ಮೂಡುವಂತೆ ಮಾಡುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

‘ಮೊಘಲ್ ಮ್ಯೂಸಿಯಂ’ ಯೋಜನೆಯು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಕನಸಿನ ಕೂಸು ಆಗಿತ್ತು. 2016ರಲ್ಲಿ ಈ ಯೋಜನೆ ಆರಂಭವಾಗಿತ್ತು. ಈ ಮ್ಯೂಸಿಯಂನಲ್ಲಿ ಮೊಘಲ್ ಮತ್ತು ಬ್ರಜ್ ಕಾಲದ ವಸ್ತುಗಳನ್ನು ಸಂಗ್ರಹಿಸಿಡಲಾಗುತ್ತದೆ.

ಆದಾಗ್ಯೂ, ಮ್ಯೂಸಿಯಂ ಹೆಸರು ಬದಲಿಸುವ ವಿಷಯವನ್ನು ಮುನ್ನೆಲೆಗೆ ತಂದು ರಾಜ್ಯದಲ್ಲಿನ ನಿರುದ್ಯೋಗ, ಕಾನೂನು ಅವ್ಯವಸ್ಥೆ ಸಮಸ್ಯೆಗಳನ್ನು ಮರೆಮಾಚುವ ಯತ್ನ ನಡೆಯುತ್ತಿದೆ ಎಂದು ವಿಪಕ್ಷ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಆರೋಪಿಸಿದೆ.

ಬಿಜೆಪಿ ಅಧಿಕಾರಕ್ಕೇರಿದಂದಿನಿಂದ ಸ್ಥಳಗಳ ಮತ್ತು ಕಟ್ಟಡಗಳ ಮರುನಾಮಕರಣ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ಕೆಲಸ ಮಾಡಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕರೊಬ್ಬರು ಟೀಕಿಸಿದ್ದಾರೆ.

ಮೊಘಲ್ ಮ್ಯೂಸಿಯಂ ಮರುನಾಮಕರಣ ನಿರ್ಧಾರವನ್ನು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡಣವಿಸ್ ಮತ್ತು ನಟಿ ಕಂಗನಾ ರನೌತ್ ಬೆಂಬಲಿಸಿದ್ದಾರೆ.

ಇದರ ಬೆನ್ನಲ್ಲೇ ಆಗ್ರಾದಲ್ಲಿ ಯಮುನಾ ನದಿ ತಟದಲ್ಲಿರುವ ತಾಜ್ ಮಹಲ್‌ ಹೆಸರನ್ನು ತೇಜೊಲಯ್ ಅಥವಾ ತೇಜೊಮಹಲ್ ಎಂದು ಮರುನಾಮಕರಣ ಮಾಡುವಂತೆ ಕೆಲವು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

ವಿಳಂಬ ಮಾಡದೆ ತಾಜ್ ಮಹಲ್ ಹೆಸರನ್ನು ತೇಜೋಲಯ್ ಎಂದು ಬದಲಿಸಬೇಕು ಎಂದು ಬಿಜೆಪಿ ನಾಯಕ, ಉತ್ತರ ಪ್ರದೇಶ ಗೋ ಸೇವಾ ಆಯೋಗದ ಸದಸ್ಯರೂ ಆಗಿರುವ ಭೋಲೇ ಸಿಂಗ್ ಹೇಳಿದ್ದಾರೆ. ತಾಜ್ ಮಹಲ್ ಶಿವ ದೇವಾಲಯ ಆಗಿತ್ತು. ಹಾಗಾಗಿ ಅದರ ಹೆಸರನ್ನು ತೇಜೊಲಯ್ ಎಂದು ಬದಲಿಸಬೇಕು ಎಂದು ಈ ಹಿಂದೆ ಬಿಜೆಪಿಯ ಹಿರಿಯ ನಾಯಕ ವಿನಯ್ ಕಟಿಯಾರ್ ಹೇಳಿದ್ದರು.

Related posts

 ಫೇಸ್ಬುಕ್‌ ಸಿಬ್ಬಂದಿ ಪ್ರಧಾನಿಯನ್ನೇ ನಿಂದಿಸುತ್ತಾರೆ: ಜುಕರ್ಬರ್ಗ್‌ಗೆ ಸಚಿವ ಪತ್ರ

Times fo Deenabandhu

ಕಂಬಳದ ಓಟಗಾರ ಶ್ರೀನಿವಾಸ ಗೌಡ ಮತ್ತೆರಡು ದಾಖಲೆ!

Times fo Deenabandhu

ಇನ್ನು ವಾಟ್ಸ್​ಆ್ಯಪ್​ನಲ್ಲೇ ಬರಲಿವೆ ಕೋರ್ಟ್​ನ ಸಮನ್ಸ್​ಗಳು; ತಜ್ಞರ ಸಮಿತಿ ನಿರ್ಧಾರ

Times fo Deenabandhu