Times of Deenabandhu
  • Home
  • ಮುಖ್ಯಾಂಶಗಳು
  •  ಸಿಸಿಬಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವೆ ಎಂದ ನಟಿ ಐಂದ್ರಿತಾ ರೇ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಸಿಸಿಬಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವೆ ಎಂದ ನಟಿ ಐಂದ್ರಿತಾ ರೇ

ಡ್ರಗ್ಸ್‌ ಜಾಲ ಸಂಬಂಧ ಸಿಸಿಬಿ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು’ ಎಂದು ನಟಿ ಐಂದ್ರಿತಾ ರೇ ತಿಳಿಸಿದ್ದಾರೆ.

‘ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಜಾಲ ಕುರಿತ ತನಿಖೆ ಸಂಬಂಧ ವಿಚಾರಣೆಗಾಗಿ ಕಚೇರಿಗೆ ಹಾಜರಾಗುವಂತೆ ಮೊಬೈಲ್‌ ಕರೆ ಮೂಲಕ ತಿಳಿಸಿದ್ದಾರೆ. ಸೆಪ್ಟೆಂಬರ್‌ 16ರ ಬೆಳಿಗ್ಗೆ 11ಗಂಟೆಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ನಾನು ಮತ್ತು ದಿಗಂತ್‌ ತೆರಳುತ್ತೇವೆ. ಅಧಿಕಾರಿಗಳ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಐಂದ್ರಿತಾ ಮತ್ತು ದಿಗಂತ್‌ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಈ ಸ್ನೇಹ ಪ್ರೀತಿಗೆ ತಿರುಗಿತ್ತು. ಕಳೆದ ಎರಡು ವರ್ಷದ ಹಿಂದೆ ಇಬ್ಬರು ಸಪ್ತಪದಿ ತುಳಿದಿದ್ದರು.

ಐಂದ್ರಿತಾ ಜೊತೆಗೆ ಹಣೆಮಣೆ ಏರಿದ ಬಳಿಕ ದಿಗಂತ್‌ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಪವರ್‌ ಸ್ಟಾರ್’ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಸಿನಿಮಾದಲ್ಲೂ ಅವರು ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಯೋಗರಾಜ್‌ ಭಟ್‌ ನಿರ್ದೇಶನದ ‘ಗಾಳಿಪಟ 2’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ರಾಘವೇಂದ್ರ ಎಂ. ನಾಯಕ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಮಾರಿಗೋಲ್ಡ್‌’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಅಲ್ಲದೆ, ‘ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರವೂ ಅವರ ಬತ್ತಳಿಕೆಯಲ್ಲಿದೆ. ‌ಐಂದ್ರಿತಾ ‘ಗರುಡ’ ಮತ್ತು ‘ಪ್ರೇಮಂ ಪೂಜ್ಯಂ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Related posts

ಬುಧವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭ, ಅಕ್ರಮದಲ್ಲಿ ತೊಡಗಿದರೆ 5 ಲಕ್ಷ ದಂಡ

Times fo Deenabandhu

ಆನೆಯತ್ತ ಅಕ್ರಮವಾಗಿ ಗುಂಡು ಹಾರಿಸಿದ ಸಿಬ್ಬಂದಿ: ಭಾರೀ ಆಕ್ರೋಶ

Times fo Deenabandhu

 ದಕ್ಷಿಣ ಭಾರತದ ರಾಜ್ಯಗಳಲ್ಲೇ 24,855 ಹೊಸ ಪ್ರಕರಣಗಳು